Advertisement

ಮಾಟುಂಗಾ ಮಠದಲ್ಲಿ ಗಂಗಾಧರೇಂದ್ರ ಸ್ವಾಮೀಜಿ ಆಶೀರ್ವಚನ

05:08 PM Mar 08, 2017 | |

ಮುಂಬಯಿ: ಇವತ್ತಿನ ಕಾಲ ವೈಜ್ಞಾನಿಕ ಯುಗ. ಆದ್ದರಿಂದ ಯುವ ಜನತೆ ವೈಜ್ಞಾನಿಕವಾಗಿ ಮುನ್ನಡೆಯುತ್ತಾರೆ ಎಂದರೆ ತಪ್ಪಲ್ಲ. ಇವತ್ತಿನ ಜನತೆ ಕೂಡಾ ವೈಜ್ಞಾನಿಕ ಭಾಷೆಯಲ್ಲಿ ಹೇಳುವುದಾದರೆ ವಿಜ್ಞಾನವನ್ನೇ ಹೆಚ್ಚು ನಂಬುತ್ತದೆ. ಆದ್ದರಿಂದ ಇವತ್ತು ವಾತಾವರಣವೇ ಹಾಗಿದೆ. ಅದು ಸರಿಯೇ ಹೌದು. ಇದು ತಪ್ಪೆಂದು ಹೇಳಲಾಗದು. ಆದರೆ ವೈಜ್ಞಾನಿಕತೆಗೂ ಧಾರ್ಮಿಕತೆಗೂ ವಿರೋಧವಿದೆ ಎಂದು ತಿಳಿಯಬಾರದು. ಯಾಕೆಂದರೆ ಧರ್ಮಗಳಲ್ಲೂ ತುಂಬಾ ವೈಜ್ಞಾನಿಕ ಅಂಶಗಳು ಇರುವುದು ಗಮನಕ್ಕೆ ಬಂದಿದೆ. ಇನ್ನುಳಿದ ವಿಷಯಗಳ ಬಗ್ಗೆ ಸಂಶೋಧನೆ ಆಗಬೇಕಾಗಿದೆ. ಕೆಲವರು ಮಾಡುತ್ತಲೂ ಇದ್ದಾರೆ. ವೈಜ್ಞಾನಿಕ ಎನ್ನುವ ಶಬ್ದಕ್ಕೆ ಅನುಭವ ಆಧಾರಿತ ಎಂದರ್ಥವಿದೆ. ಯಾವುದು ಅನುಭವಕ್ಕೆ ಸಿಗುವ ಸತ್ಯವಿದೆಯೇ ಅದು ಅವೈಜ್ಞಾನಿಕ ಎಂದು ಕರೆಯುತ್ತಾರೆ. ಅದು ಅನುಭವಕ್ಕೆ ಸಿಗುವ ಹಾಗೆ ವಿವರಣೆ ಕೊಟ್ಟರೆ ಅದು ವೈಜ್ಞಾನಿಕ ಎಂದು ಸ್ವೀಕಾರ ಮಾಡುತ್ತಾರೆ. ಧರ್ಮಕ್ಕೂ ವೈಜ್ಞಾನಿಕತೆಗೂ ವಿರೋಧವಿಲ್ಲ ಎನ್ನುವುದು ನಮ್ಮ ಸ್ಪಷ್ಟ ನಿಲುವು. ಇದನ್ನು ಅರಿತುಕೊಂಡು ನಮ್ಮ ಯುವಜನರು ಮತ್ತು ವೈಜ್ಞಾನಿಕ ಚಿಂತನೆಯುಳ್ಳವರು ಧರ್ಮದ ಕಡೆ ಹೆಚ್ಚು ಬರಬೇಕು. ಅದರಿಂದ ಸ್ವಸ್ಥÂ ಸಮಾಜ ನಿರ್ಮಾಣ ಸಾಧ್ಯ ಎಂದು ಶಿರಸಿ ಸೋಂದಾ ಶ್ರೀಸ್ವರ್ಣವಲ್ಲಿ ಮಹಾಸಂಸ್ಥಾನದ ಜಗದ್ಗುರು ಶ್ರೀಮದ್‌ ಶಂಕರಾಚಾರ್ಯ ಗಂಗಾಧರೇಂದ್ರ ಸ್ವಾಮೀಜಿ ಅಭಿಪ್ರಾಯಿಸಿದರು.

Advertisement

ಮಾ. 6ರಂದು ಮಾಟುಂಗಾ ಪೂರ್ವದ ಶ್ರೀ ಶಂಕರ ಮಠದಲ್ಲಿ ನೆರೆದ ಸದ್ಭಕ್ತರ‌ು ಹಾಗೂ ಶಿಷ್ಯರನ್ನು ಅನುಗ್ರಹಿಸಿ ಮಾತನಾಡಿ, ಮುಂಬಯಿ ನಗರ  ತುಂಬಾ ಪ್ರಯಾಸದ ನಗರ. ಇದು ಜಗತ್ತಿಗೆ ಮಾದರಿಯಾದ ನಗರವಾಗಿದ್ದು, ಇಲ್ಲಿ ಉದ್ಯೋಗದ ಒತ್ತಡಗಳು ಜಾಸ್ತಿ. ಜನ‌ಸಂಖ್ಯೆಯೂ ಬಹಳ ದೊಡªದಿದೆ. ಧಾರ್ಮಿಕ ಶ್ರದ್ಧೆಯುಳ್ಳವರು ಅಷ್ಟೇ ಅಧಿಕವಾಗಿದ್ದಾರೆ. ಆದರೂ ಈ ಜನತೆಯ ಒತ್ತಡ ಸರಿದೂಗಿಸುವ ಅವಶ್ಯ ಇರುತ್ತದೆ. ಒತ್ತಡ ಅನಿವಾರ್ಯವಾದಾಗ ಒತ್ತಡದಿಂದ ನಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಹೆಚ್ಚುತ್ತವೆ. ಇಂತಹ ದುಷ್ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಲು ಉಪಾಯಗಳೂ ಬೇಕು. ದುಷ್ಪರಿಣಾಮಗಳು ಅನಿವಾರ್ಯವಾದಾಗ ಪರಿಹಾರೊಪಾಯವೂ ಅನಿವಾರ್ಯ. ಇದನ್ನು ಧರ್ಮಶ್ರದ್ಧೆಯಿಂದ ಮಾತ್ರ ಶಮನಗೊಳಿಸಲು ಸಾಧ್ಯ. ಅಂತೆಯೇ ಪ್ರತಿ ದಿವಸವೂ ಪ್ರತಿಯೊಬ್ಬರಿಗೂ ಯೋಗ ಬಹಳ ಅತ್ಯಗತ್ಯವಾಗಿದೆ. ಯೋಗ ಮನಸ್ಸಿಗೆ ಮುದ ನೀಡುತ್ತದೆ. ಇವತ್ತು ರಕ್ತದೊತ್ತಡ, ಹೃದಯಾಘಾತ ಮತ್ತು ಸಕ್ಕರೆ ಕಾಯಿಲೆಗಳೆಂಬ 3 ರೋಗಗಳು ಜಾಸ್ತಿಯಾಗಿದ್ದು ಇವೆಲ್ಲಕ್ಕೂ ಮಾನಸಿಕ ಒತ್ತಡಗಳೇ ಕಾರಣ ಎಂದರು.

ನಾಗರಾಜ ಭಟ್‌ ಮತ್ತು ಸುಮನ್‌ ಭಟ್‌ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಮಧುಕರ್‌ ನಾಯ್ಕ ಸಹಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿ ಪದಾಧಿಕಾರಿಗಳು, ತನುಜಾ ಹೆಗಡೆ, ಎಸ್‌. ಎನ್‌. ಜೋಶಿ, ಅಶೋಕ ನಾಯ್ಕ, ಜಿ. ಆರ್‌. ಹೆಗಡೆ, ಎಸ್‌. ಆರ್‌. ನಾಯ್ಕ, ಕೆ. ಸಿ. ಹೆಗಡೆ, ಪಿ. ಎನ್‌. ನಾಯ್ಕ, ರಾಧಾ ಹೆಗಡೆ, ಸಿ.ಎಂ ಜಿ ಶಾಸ್ತ್ರಿ, ವೀಣಾ ಶಾಸ್ತ್ರಿ, ನಾಲಿ ಭಟ್‌, ರಮೇಶ್‌ ನಾಯ್ಕ ಹಳದೀಪುರ, ಕೆ. ಆರ್‌. ಭಟ್‌ ಸೆೇರಿದಂತೆ ಅನೇಕ ರಾಮಕ್ಷತ್ರೀಯ ಹಾಗೂ ಹವ್ಯಕ ಸಮಾಜ ಬಾಂಧವರು  ಉಪಸ್ಥಿತರಿದ್ದರು. 

  ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next