Advertisement

Water: ಗಂಗಾ ಕಲ್ಯಾಣ ರೈತರಿಗೆ ವರದಾನ

11:49 PM Sep 10, 2023 | Team Udayavani |

ಈ ಯೋಜನೆಯಡಿ ಸಣ್ಣ ಹಾಗೂ ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಿ ಉಚಿತವಾಗಿ ಕೊಳವೆ ಬಾವಿ/ ತೆರೆದ ಬಾವಿಯ ಸೌಲಭ್ಯ ಪಡೆಯಬಹುದಾಗಿದ್ದು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರಕಾರದ ಬಜೆಟ್‌ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಆಗುತ್ತದೆ. ಅಂದರೆ ಆಯಾ ನಿಗಮಗಳಲ್ಲಿ ಅದರದ್ದೇ ಆದ ನಿಯಮಗಳು ಜಾರಿಯಲ್ಲಿವೆ.

Advertisement

ಆಯ್ಕೆ ಪಟ್ಟಿ ಮತ್ತು ವಿಧಾನ ಹೇಗೆ?
ಜಿಲ್ಲಾ ವ್ಯವಸ್ಥಾಪಕರು ಪ್ರತೀ ಜಿಲ್ಲೆಯಲ್ಲಿ ಜಾಹೀರಾತಿನ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸುತ್ತಾರೆ. ಆನ್‌ಲೈನ್‌ನಲ್ಲಿ ದಾಖಲಾತಿಯೊಂದಿಗೆ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರು ಗಮನಿಸಿ ಶಾಸಕರ ನೇತೃತ್ವದ ತಾಲೂಕು ಸಮಿತಿಗೆ ಅರ್ಜಿ ವರ್ಗಾಯಿಸುತ್ತಾರೆ. ಅನಂತರ ಸಮಿತಿಯು ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುತ್ತದೆ. ಈ ಸಂಬಂಧ ಗಂಗಾ ಕಲ್ಯಾಣ ಯೋಜನೆಯ ವಿವರಗಳನ್ನು https://kmvstdcl.karnataka.gov.in/info-2/Ganga+Kalyana+Scheme/en ನಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಅರ್ಹರು +91 08022864720ಕ್ಕೆ ಸಂಪರ್ಕಿಸಬಹುದು.

ಏನಿದು ಗಂಗಾ ಕಲ್ಯಾಣ?
ಬೋರ್‌ವೆಲ್‌ ಕೊರೆಯುವ ಮೂಲಕ ಹಾಗೂ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆಯಾಗಿದೆ. ಅಲ್ಲದೇ ಈ ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸಿ ಪಂಪ್‌-ಮೋಟಾರ್‌ ಅಳವಡಿಸುವುದಾಗಿದೆ.

ಎಲ್ಲೆಲ್ಲಿ ಅರ್ಜಿ?
1. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
2. ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮ
3. ಪರಿಶಿಷ್ಟ ಜಾತಿ- ವರ್ಗಗಳ ಅಭಿವೃದ್ಧಿ ನಿಗಮ
4. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
5. ವಿಶ್ವಕರ್ಮ ಅಭಿವೃದ್ಧಿ ನಿಗಮ
6. ಉಪ್ಪಾರ ಅಭಿವೃದ್ಧಿ ನಿಗಮ
7. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
8. ನಿಜಗುಣ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ

ಅರ್ಹರು ಯಾರ್ಯಾರು?
ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು.
ಪ್ರವರ್ಗ 1, 2ಎ, 3ಎ, 3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
ಕನಿಷ್ಠ 1.20 ಎಕ್ರೆ ಗರಿಷ್ಠ 5 ಎಕ್ರೆ ಜಮೀನು ಹೊಂದಿರಬೇಕು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯ ರೈತರಿಗೆ ಕನಿಷ್ಠ 1 ಎಕ್ರೆ ಇದ್ದರೆ ಸಾಕು
ಅರ್ಜಿದಾರ ಯಾವುದೇ ಕೇಂದ್ರ-ರಾಜ್ಯ ಸರಕಾರದ ಹುದ್ದೆಯಲ್ಲಿ ಇರಬಾರದು
ರಾಜ್ಯ ಖಾಯಂ ನಿವಾಸಿ ಆಗಿರಬೇಕು
ಅರ್ಜಿದಾರರು 18-55 ವರ್ಷಗಳ ನಡುವೆ ಇರಬೇಕು
9. ಬೋವಿ ಸಮುದಾಯದ ಅಭಿವೃದ್ಧಿ ನಿಗಮ

Advertisement

ವೈಯಕ್ತಿಕ ಬೋರ್‌ವೆಲ್‌ಗೆ‌ ಠೇವಣಿ
1. ನೋಂದಣಿ ಶುಲ್ಕ – 50 ರೂ. ಪ್ಲಸ್‌ ಶೇ.18 ಜಿಎಸ್‌ಟಿ
2. ಭದ್ರತಾ ಠೇವಣಿ ಶುಲ್ಕ- 1290 ರೂ., 1 ಎಚ್‌ಪಿಗೆ
3. ಮೀಟರ್‌ ಸುರಕ್ಷ ಠೇವಣಿ 3 ಸಾವಿರ ರೂ.,
4. ಮೀಟರ್‌ ಬಾಕ್ಸ್‌ 2100 ರೂ.
5. ಮೇಲ್ವಿಚಾರಣ ಶುಲ್ಕ 150 ಪ್ಲಸ್‌ ಶೇ.18 ಜಿಎಸ್‌ಟಿ

ಅರ್ಜಿ ಸಲ್ಲಿಕೆಗೆ ಸೆ.18 ಕೊನೇ ದಿನ
ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಅನ್ವಯವಾಗುತ್ತದೆ. ಇತರ ಜಿಲ್ಲೆಗಳಿಗೆ 3 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ಸೆ.18 ಕೊನೇ ದಿನವಾಗಿದ್ದು ಅರ್ಹ ರೈತರು https://kmvstdcl.karnataka.gov.ininfo-2/Ganga+ Kalyana+Scheme/en P ಕ್ಕೆ ಭೇಟಿ ನೀಡಬಹುದಾಗಿದೆ.

ಏನೇನು ಬೇಕು?
ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಫ‌ಲಾನುಭವಿಗಳ ಭಾವಚಿತ್ರ, ಬ್ಯಾಂಕ್‌ ಪಾಸ್‌ ಬುಕ್‌, ಹೊಲದ ದಾಖಲೆ, ಜಾತಿ-ಆದಾಯ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಸ್ವಯಂ ಘೋಷಿತ ಪತ್ರ ಅವಶ್ಯ.

ಹರೀಶ್‌ ಹಾಡೋನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next