Advertisement
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದ ಜಿಲ್ಲಾ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯು ಯೋಜನೆಯ ಮೇಲ್ವಿಚಾರಣೆ ಹಾಗೂ ಅನುಷ್ಠಾನದ ಜವಾಬ್ದಾರಿ ಹೊತ್ತಿದೆ.
Related Articles
Advertisement
ಗ್ರಾಮೀಣ ಭಾಗದ ಪ್ರತಿಮನೆಗೂ ದಿನದ 24 ಗಂಟೆಗಳ ಕಾಲ ವಾರದಲ್ಲಿ 7 ದಿನವೂ ಕುಡಿಯುವ ನೀರು ಪೂರೈಸುವುದು ಈ ಯೋಜನೆಯ ಮುಖ್ಯಉದ್ದೇಶವಾಗಿರುತ್ತದೆ. ಈ ಯೋಜನೆಯ ವೆಚ್ಚದಲ್ಲಿ ಶೇ. 10ರಷ್ಟು ಫಲಾನುಭವಿಗಳು ಭರಿಸಬೇಕಾಗುತ್ತದೆ. ಕಾಮಗಾರಿ ಮುಕ್ತಾಯವಾದ ಬಳಿಕ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆನೀಡಲಾಗುವುದು. ಕಾಮಗಾರಿ ಪೂರ್ಣಗೊಂಡನಂತರ ನಿವಾಸಿಗಳಿಂದ ಅವರ ಪಾಲಿನ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. ಪ್ರತಿ ಮನೆಯಲ್ಲಿ ಸಂಪರ್ಕಕ್ಕೂ ಮೀಟರ್ ಅಳವಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ನೀರಿನ ಶುಲ್ಕವನ್ನುಪಾವತಿಸಬೇಕಾಗಬಹುದೆಂದು ಅ ಧಿಕಾರಿಗಳು ತಿಳಿಸಿದ್ದಾರೆ.
2024ರ ವೇಳಗೆ ಎಲ್ಲ ಗ್ರಾಮೀಣ ಕುಟುಂಬಗಳಿಗೆಕೊಳವೆ ನೀರು ಸರಬರಾಜು ಮಾಡುವುದು ಈ ಯೋಜನೆಯ ಉದ್ದೇಶವಾಗಿದ್ದು, ದೇಶಾದ್ಯಂತ ಸುಸ್ಥಿರ ನೀರು ಸರಬರಾಜು ನಿರ್ವಹಣೆಯ ಉದ್ದೇಶಗಳನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿವೆ.
ಮಳೆಕೊಯ್ಲು, ಅಂತರ್ಜಲ ಪುನರ್‌ಭರ್ತಿ, ಕೃಷಿಯಲ್ಲಿ ಮರುಬಳಕೆಗಾಗಿ ಮನೆ ತ್ಯಾಜ್ಯ ನೀರನ್ನುನಿರ್ವಹಿಸಲು ಸ್ಥಳೀಯ ಮೂಲಸೌಕರ್ಯ ರಚಿಸುವ ಗುರಿ ಹೊಂದಿದೆ. ಜೊತೆಗೆ ಪಾಯಿಂಟ್ ರೀಚಾರ್ಜ್, ಸಣ್ಣ ನೀರಾವರಿ ಟ್ಯಾಂಕ್‌ಗಳ ನಿರ್ಜಲೀಕರಣ, ಕೃಷಿಗೆ ಗ್ರೇವಾಟರ್ ಬಳಕೆ ಮತ್ತು ಮೂಲಕ ಸುಸ್ಥಿರತೆಯಂಥ ವಿವಿಧ ನೀರಿನ ಸಂರಕ್ಷಣೆಯ ಪ್ರಯತ್ನಗಳನ್ನು ಆಧರಿಸಿದೆ.
ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದರಿಂದ ದೇಶದಲ್ಲಿ ಇಂದು ನೀರಿನ ಸಂರಕ್ಷಣೆಯ ತುರ್ತು ಅವಶ್ಯಕತೆಯಾಗಿದೆ. ಆದ್ದರಿಂದ ಜಲಜೀವನ್ ಮಿಷನ್ ಸ್ಥಳೀಯ ಮಟ್ಟದಲ್ಲಿ ಸಮಗ್ರ ಬೇಡಿಕೆ ಮತ್ತು ನೀರಿನ ಪೂರೈಕೆ ನಿರ್ವಹಣೆಯತ್ತ ಗಮನ ಹರಿಸಲಿದೆ.
ತಾಲೂಕಿನ 45 ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೆ ನೀರು ಪೂರೈಕೆ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 3 ಕೋಟಿ 22 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 8774 ಮನೆಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಿದೆ. ಈಗಾಗಲೇಕೆಲ ಕಾಮಗಾರಿಗಳು ಪ್ರಾರಂಭವಾಗಿದ್ದು, ಇನ್ನು ಕೆಲವು ಟೆಂಡರ್ ಹಂತದಲ್ಲಿವೆ. –ರವೀಂದ್ರನಾಯ್ಕ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
-ಆರ್. ಬಸವರೆಡಿ ಕರೂರು