ಛಾಪ್ರಾ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 13 ರಂದು ವಾರಾಣಸಿಯಲ್ಲಿ ಚಾಲನೆ ನೀಡಿದ ಬಹು ನಿರೀಕ್ಷಿತ ಫ್ಲ್ಯಾಗ್‌ಶಿಪ್ ಗಂಗಾ ವಿಲಾಸ್ ಕ್ರೂಸ್ ಬಿಹಾರದ ಛಪ್ರಾದಲ್ಲಿ ಗಂಗಾನದಿಯಲ್ಲಿ ನೀರಿನ ಕೊರತೆಯಿಂದಾಗಿ ಸಿಲುಕಿಕೊಂಡಿದೆ.
51 ದಿನಗಳ ಪ್ರಯಾಣಕ್ಕೆ ಹೊರಟ ಐಷಾರಾಮಿ ಕ್ರೂಸ್ ದೋರಿಗಂಜ್ ಪ್ರದೇಶದಲ್ಲಿ ನೀರಿನ ಕೊರತೆಯಿಂದಾಗಿ ಸಿಲುಕಿಕೊಂಡಿದೆ. ಮಾಹಿತಿ ಪಡೆದ ತತ್ ಕ್ಷಣ ಎಸ್‌ಡಿಆರ್‌ಎಫ್ ತಂಡವು ಸ್ಥಳಕ್ಕಾಗಮಿಸಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಚಿರಂದ್ ಸರನ್ ತಲುಪಲು ಪ್ರವಾಸಿಗರಿಗೆ ತೊಂದರೆಯಾಗದಂತೆ ತಂಡವು ಚಿಕ್ಕ ದೋಣಿಗಳಲ್ಲಿ ತಲುಪಿತು. ಚಿರಾಂದ್‌ನಲ್ಲಿ ಪ್ರವಾಸಿಗರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ ಎಂದು ವ್ಯವಸ್ಥೆ ಮಾಡುವ ತಂಡದ ಭಾಗವಾಗಿರುವ ಛಪ್ರಾದ ಸಿಒ ಸತೇಂದ್ರ ಸಿಂಗ್ ಹೇಳಿದ್ದಾರೆ.
“ಎಸ್‌ಡಿಆರ್‌ಎಫ್ ತಂಡವು ಘಾಟ್‌ನಲ್ಲಿದ್ದು,ನೀರು ಕಡಿಮೆ ಇರುವ ಕಾರಣ ಕ್ರೂಸ್ ದಡಕ್ಕೆ ತರಲು ತೊಂದರೆಯಾಗಿದೆ. ಹೀಗಾಗಿ ಸಣ್ಣ ದೋಣಿಗಳ ಮೂಲಕ ಪ್ರವಾಸಿಗರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.