Advertisement
ಮಂಗಳೂರು ಪ್ರತಾಪನಗರದ ಸಂಘನಿಕೇತನದಲ್ಲಿ ಆರಂಭಿಸಿದ ಗಣೇಶೋತ್ಸವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಗಣೇಶೋತ್ಸವ. ಇಲ್ಲಿ 1948ರಲ್ಲಿ ಆರಂಭವಾಯಿತು. ಅನಂತರದ್ದು ಉಡುಪಿ ಕಡಿಯಾಳಿ ಗಣೇಶೋತ್ಸವ. ಇದು 1967ರಲ್ಲಿ. ಕಾಸರಗೋಡಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಕಾಸರಗೋಡು ಜಿಲ್ಲೆಯಲ್ಲಿ ಅತಿ ಹಿರಿದಾದುದು.
ಉಡುಪಿ ನಗರ ಠಾಣೆ ವ್ಯಾಪ್ತಿಯಲ್ಲಿ 26, ಮಲ್ಪೆ 19, ಮಣಿಪಾಲ 17, ಬ್ರಹ್ಮಾವರ 44, ಕೋಟ 42, ಹಿರಿಯಡಕ 11, ಬೈಂದೂರು 46, ಗಂಗೊಳ್ಳಿ 29, ಕೊಲ್ಲೂರು 13, ಕುಂದಾಪುರ ನಗರ 34, ಕುಂದಾಪುರ ಗ್ರಾಮಾಂತರ 24, ಶಂಕರನಾರಾಯಣ 29, ಅಮಾಸೆಬೈಲು 9, ಕಾರ್ಕಳ ನಗರ 26, ಕಾರ್ಕಳ ಗ್ರಾಮಾಂತರ 26, ಅಜೆಕಾರು 12, ಹೆಬ್ರಿ 20, ಕಾಪು 16, ಶಿರ್ವ 13, ಪಡುಬಿದ್ರಿಯಲ್ಲಿ 14 ಗಣೇಶೋತ್ಸವಗಳಿವೆ.
Related Articles
ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಈ ಬಾರಿ 6 ಗಣೇಶೋತ್ಸವಗಳು ಹೆಚ್ಚಾಗಿವೆ. ಮಂಗಳೂರು ಕೇಂದ್ರ ಉಪವಿಭಾಗದ ಉತ್ತರ ಪೊಲೀಸ್ ಠಾಣೆ 6, ದಕ್ಷಿಣ ಪೊಲೀಸ್ ಠಾಣೆ 16, ಉರ್ವ 4, ಬರ್ಕೆ 5, ಪೂರ್ವ 13, ಮಂಗಳೂರು ಉತ್ತರ (ಪಣಂಬೂರು) ಉಪವಿಭಾಗದ ಪಣಂಬೂರು 6, ಕಾವೂರು 16, ಬಜಪೆ 11, ಸುರತ್ಕಲ್ 14, ಮೂಲ್ಕಿ 18, ಮೂಡುಬಿದಿರೆ 28, ಮಂಗಳೂರು ದಕ್ಷಿಣ ಉಪವಿಭಾಗದ ಮಂಗಳೂರು ಗ್ರಾಮಾಂತರ 6, ಕಂಕನಾಡಿ ನಗರ 7, ಉಳ್ಳಾಲ 9, ಕೊಣಾಜೆ 7 ಸೇರಿ ಒಟ್ಟು 166 ಗಣೇಶೋತ್ಸವ ಆಚರಣೆಯಾಗಲಿದೆ.
Advertisement
ದ.ಕ. ಗ್ರಾಮಾಂತರದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 9 ಉತ್ಸವಗಳು ಹೆಚ್ಚಿಗೆ ಆಗಿ ಒಟ್ಟು 215 ಗಣೇಶೋತ್ಸವಗಳು ನಡೆಯಲಿವೆ. ವಿವರ ಇಂತಿವೆ: ಬಂಟ್ವಾಳ ನಗರ 11, ಬಂಟ್ವಾಳ ಗ್ರಾಮಾಂತರ 19, ವಿಟ್ಲ 21, ಬೆಳ್ತಂಗಡಿ 20, ಪುಂಜಾಲಕಟ್ಟೆ 6, ವೇಣೂರು 19, ಸುಬ್ರಹ್ಮಣ್ಯ10, ಸುಳ್ಯ17, ಕಡಬ 11, ಧರ್ಮಸ್ಥಳ 17, ಬೆಳ್ಳಾರೆ 18, ಪುತ್ತೂರು ನಗರ 15, ಪುತ್ತೂರು ಗ್ರಾಮಾಂತರ 15, ಉಪ್ಪಿನಂಗಡಿಯಲ್ಲಿ 16 ಗಣೇಶೋತ್ಸವಗಳಿವೆ. ದ.ಕ.ದಲ್ಲಿ ಪ್ರಮುಖವಾದುದು ಮಂಗಳೂರು ಸಂಘನಿಕೇತನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಫರಂಗಿಪೇಟೆ, ಸುಳ್ಯ ಗಣೇಶೋತ್ಸವ. ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು, ಕುಂಬಳೆ, ಮಂಜೇಶ್ವರ, ಬದಿಯಡ್ಕ, ಮುಳ್ಳೇರಿಯ, ಪೆರ್ಲದ ಉತ್ಸವಗಳು ಪ್ರಮುಖವಾದುದು. ಉಡುಪಿ ಜಿಲ್ಲೆಯಲ್ಲಿ ಕಡಿಯಾಳಿ, ಪರ್ಕಳ, ಬಾರಕೂರು ಮೊದಲಾದೆಡೆ ಹಿರಿಯ ಪೆಂಡಾಲುಗಳಲ್ಲಿ ಉತ್ಸವ ನಡೆಯುತ್ತಿದೆ. ಪೊಲೀಸ್ ಬಂದೋಬಸ್ತ್
ವಿವಿಧ ಗಣೇಶೋತ್ಸವಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ, ಸಾಮಾನ್ಯ ಎಂಬ ವಿಭಾಗ ಮಾಡಿ ಅಲ್ಲಿಗೆ ಬಂದೋಬಸ್ತ್ ಒದಗಿಸಲಾಗುತ್ತದೆ. ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಜಿಲ್ಲೆಯಾದ್ಯಂತ ಸುಮಾರು 900 ಪೊಲೀಸರು ಬಂದೋಬಸ್ತ್ನಲ್ಲಿದ್ದಾರೆ. 3 ಕೆಎಸ್‌ಆರ್‌ಪಿ, 8 ಡಿಎಆರ್ ನಿಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಗಣೇಶ ವಿಗ್ರಹಗಳಲ್ಲಿ ಆಕರ್ಷಣೆ
ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವಾಗ ಸಮಿತಿಯವರು ತಮ್ಮದೇ ಆದ ವಿಶೇಷ ಛಾಪು ಮೂಡಿಸಲು ಯತ್ನಿಸುತ್ತಾರೆ. ಒಂದೊಂದು ಕಡೆಒಂದೊಂದು ವೈಶಿಷ್ಟ್ಯ ಕಂಡುಬರುತ್ತದೆ. ಕೆಲವೆಡೆ ದಶಮಾನೋತ್ಸವ, ರಜತೋತ್ಸವ, ವಿಂಶತಿ ಉತ್ಸವದ ಕಾರಣ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗಣೇಶೋತ್ಸವ ಬಂದೋಬಸ್ತು: ಪೊಲೀಸರಿಂದ ಪಥಸಂಚಲನ
ಮಂಗಳೂರು: ಗಣೇಶೋತ್ಸವ ಬಂದೋಬಸ್ತಿಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪೊಲೀಸರಿಂದ ಪಥಸಂಚಲನ ನಡೆಯಿತು. ನೆಹರೂ ಮೈದಾನದಿಂದ ಎ.ಬಿ. ಶೆಟ್ಟಿ ವೃತ್ತ – ಕ್ಲಾಕ್ ಟವರ್ – ಹಂಪನಕಟ್ಟೆ- ನವಭಾರತ ವೃತ್ತ – ಡೊಂಗರಕೇರಿ – ನ್ಯೂ ಚಿತ್ರಜಂಕ್ಷನ್ – ಕಾರ್‌ಸ್ಟ್ರೀಟ್ – ವೆಂಕಟರಮಣ ದೇವಸ್ಥಾನದ ವರೆಗೆ ಪಥಸಂಚಲನ ಸಾಗಿತು. ಮಂಗಳವಾರ ಆರಂಭವಾಗುವ ಸಾರ್ವಜನಿಕ ಗಣೇಶೋತ್ಸವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಧೈರ್ಯ ತುಂಬಿದರು. ಉಪ ಆಯುಕ್ತರಾದ ಸಿದ್ಧಾರ್ಥ ಗೋಯಲ್, ಎಸಿಪಿಗಳಾದ ಗೀತಾ ಡಿ. ಕುಲಕರ್ಣಿ, ಮಹೇಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.