ಪುಣೆ: ಪಿಂಪ್ರಿ-ಚಿಂಚ್ವಾಡ್ ಬಿಲ್ಲವ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಯುವ ವಿಭಾಗದ ಅಧ್ಯಕ್ಷ ವಿನಯ ಪೂಜಾರಿ ಮತ್ತು ಯುವ ಸದಸ್ಯರ ನೇತೃತ್ವದಲ್ಲಿ ಸೆ. 10ರಿಂದ 12ರವರೆಗೆ ಮೂರು ದಿನಗಳ ಶ್ರೀ ಗಣೇಶೋತ್ಸವ ಆಚರಣೆಯನ್ನು ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ಆಯೋಜಿಸಲಾಯಿತು.
ಗಣೇಶೋತ್ಸವದ ಮೊದಲನೇ ದಿನದಂದು ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಗಣೇಶ್ ವಿಗ್ರಹ ಪ್ರತಿ ಸ್ಥಾಪನೆಯೊಂದಿಗೆ ಶ್ರೀ ಗಣೇಶ ಚತು ರ್ಥಿಯ ಮಹಾಪೂಜೆ, ಮಂಗಳಾರತಿ ಜರಗಿತು.
ಸಂಘದ ಯುವ ಸದಸ್ಯರ ಮುಂದಾಳತ್ವದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಲಂಕಾ ರದೊಂದಿಗೆ ಶ್ರೀ ಗಣೇಶ ವಿಗ್ರಹ ವನ್ನು ಪ್ರತಿಷ್ಠಾಪಿಸಲಾಯಿತು. ಎರಡನೇ ದಿನದಂದು ಶ್ರೀ ಸತ್ಯನಾರಾ ಯಣ ಪೂಜೆ ಹಾಗೂ ಸಂಘದ ಸದಸ್ಯರ ಕೂಡುವಿಕೆಯಲ್ಲಿ ಭಜನ ಕಾರ್ಯಕ್ರಮ ಜರಗಿತು. ಮೂರನೇ ದಿನದಂದು ಶ್ರೀ ಗಣೇಶ ದೇವರಿಗೆ ಮಹಾಪೂಜೆ ಮಂಗಳಾರತಿ ಬಳಿಕ ಸಾಂಪ್ರದಾಯಿಕವಾಗಿ ವಿಸರ್ಜನೆ ಮಾಡಲಾಯಿತು.
ಇದನ್ನೂ ಓದಿ:ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು
ಸಂಘದ ಸರ್ವ ಸದಸ್ಯರು, ಭಕ್ತರು ಶ್ರೀ ಗಣೇಶೋತ್ಸವದಲ್ಲಿ ಭಕ್ತಿಭಾವದಿಂದ ಪಾಲ್ಗೊಂಡು ಗಣೇಶನ ಕೃಪೆಗೆ ಪಾತ್ರರಾದರು. ಪಿಂಪ್ರಿ ಬಿಲ್ಲವ ಸಂಘದ ಯುವ ವಿಭಾಗದ ಸದ ಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಬಿಲ್ಲವ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಪಾಲ್ಗೊಂಡು ಸಹಕರಿಸಿದರು.
ಚಿತ್ರ-ವರದಿ: ಹರೀಶ್‌ಮೂಡಬಿದ್ರಿ ಪುಣೆ