Advertisement

ಸುವರ್ಣ ಸಡಗರದಲ್ಲಿ ಸಾರ್ವಜನಿಕ ಗಣೇಶೋತ್ಸವ

11:01 PM Aug 30, 2019 | Sriram |

ಕುಂದಾಪುರ: ತಾಲೂಕಿನ ವಿವಿಧೆಡೆ ಗಣೇಶೋತ್ಸವ ಸಿದ್ಧತೆ ಭರದಿಂದ ನಡೆಯುತ್ತಿದೆ. 50 ವರ್ಷಗಳಿಗೂ ಅಧಿಕ ಕಾಲ ಸಾರ್ವಜನಿಕ ಗಣೇಶೋತ್ಸವ ಕೆಲವೆಡೆ ನಡೆಯುತ್ತಿದ್ದು ಸುವರ್ಣ ಸಡಗರದಲ್ಲಿರುವ ಕೆಲವು ಚೌತಿಯ ವಿವರಗಳು ಇಲ್ಲಿವೆ.

Advertisement

54 ರಾಮಕ್ಷತ್ರಿಯ ಯುವಕ ಮಂಡಳಿ:
ನೇ ಗಣೇಶೋತ್ಸವ
ಕುಂದಾಪುರ: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ರಾಮಕ್ಷತ್ರಿಯರ ಸಂಘ ಹಾಗೂ ರಾಮಕ್ಷತ್ರಿಯ ಯುವಕ ಮಂಡಳಿ ವತಿಯಿಂದ 54ನೇ ವರ್ಷದ ಗಣೇಶೋತ್ಸವದ ಸಂಭ್ರಮದಲ್ಲಿದೆ.


ಜಿಲ್ಲೆಯಲ್ಲಿ ಅಗ್ರಸ್ಥಾನ
ರಾಮಕ್ಷತ್ರಿಯ ಸಮಾಜದ ಈ ದೇವಸ್ಥಾನಕ್ಕೆ 74 ವರ್ಷಗಳ ಇತಿಹಾಸವಿದ್ದು ಇಲ್ಲಿ 53 ವರ್ಷಗಳ ಹಿಂದೆ ಡಿ.ಕೆ. ರತ್ನಾಕರ್‌ ಅವರ ಅಧ್ಯಕ್ಷತೆಯಲ್ಲಿ ಗಣೇಶೋತ್ಸವ ಆರಂಭಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ ಸುದೀರ್ಘ‌ ವರ್ಷಗಳಿಂದ ನಡೆದು ಬರುತ್ತಿರುವ ಚೌತಿಗಳ ಪೈಕಿ ಇದು ಅಗ್ರಸ್ಥಾನದಲ್ಲಿದೆ.

50ನೆಯ ವರ್ಷವನ್ನು ರಾಧಾಕೃಷ್ಣ ಯು. ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದ್ದು ಸಮಿತಿ ವತಿಯಿಂದ ಅನೇಕ ಸಮಾಜಸೇವಾ ಚಟುವಟಿಕೆ ನಡೆಸಲಾಗಿತ್ತು. 8 ಮಂದಿ ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ನಿರ್ಮಿಸಿಕೊಡಲಾಗಿತ್ತು. ಆರೋಗ್ಯ ಹಾಗೂ ಹೃದಯ ಸಮಸ್ಯೆ ಇದ್ದ 10 ಜನರಿಗೆ ಮಾಸಾಶನ ನೀಡಲಾಗಿತ್ತು.

ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಲಾಗಿತ್ತು. ಕಳೆದ 10 ವರ್ಷಗಳಿಂದ ಸಾಮೂಹಿಕ ಬ್ರಹ್ಮೋಪದೇಶವನ್ನು ಸಮಿತಿ ವತಿಯಿಂದ ಆಚರಿಸಲಾಗುತ್ತಿದ್ದು 5 ದಿನಗಳ ಕಾಲ ನಡೆಯುವ ಚೌತಿ ಉತ್ಸವದಲ್ಲಿ ಪ್ರತಿದಿನವೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ.

ನಿತ್ಯ ಅನ್ನದಾನವೂ ನಡೆಯುತ್ತದೆ. ರಜತ ಅಲಂಕಾರಗಳಿಂದ ಕಂಗೊಳಿಸುವ 6 ಅಡಿ ಎತ್ತರದ ಗಣಪತಿಗೆ ಪ್ರತಿವರ್ಷ ಭಕ್ತರು ಕಾಣಿಕೆ ನೀಡುತ್ತಿದ್ದಾರೆ.

Advertisement

ಶೃಂಗೇರಿ ಶ್ರೀಗಳ ಆಶೀರ್ವಾದ ಮೂಲಕ ಪ್ರತಿವರ್ಷ ಆಚರಿಸಲ್ಪಡುವ ಗಣಪತಿ ಉತ್ಸವ ಮುಂದಿನ ವರ್ಷ 55ನೇ ವರ್ಷದ ಸಂಭ್ರಮ ಹಾಗೂ ದೇವಸ್ಥಾನಕ್ಕೆ 75ನೆಯ ವರ್ಷದ ಸಂಭ್ರಮ.

ಈ ವರ್ಷ ಅಧ್ಯಕ್ಷರಾಗಿ ಕೆ. ರವಿ ಕೆಂಚಮ್ಮನಕೆರೆ, ಗೌರವಾಧ್ಯಕ್ಷರಾಗಿ ಸಿ.ಎಚ್‌. ಗಣೇಶ್‌, ಪ್ರಧಾನ ಕಾರ್ಯದರ್ಶಿಯಾಗಿ ಸುಧೀಶ್‌ ಕೆ.ಸಿ., ನಿಯೋಜಿತ ಅಧ್ಯಕ್ಷರಾಗಿ ಗಿರೀಶ್‌ ಆರ್‌. ನಾಯ್ಕ ಕಾರ್ಯನಿರ್ವಹಿಸುತ್ತಿದ್ದಾರೆ.

ಒಗ್ಗಟ್ಟು ಮೂಡಿಸುವ ಉತ್ಸವ
ಸಮಾಜದ ವತಿಯಿಂದ ಉತ್ಸವ ನಡೆಸಲ್ಪಡುತ್ತಿದ್ದು, ಪ್ರಪಂಚದ ಬೇರೆ ಬೇರೆ ಕಡೆಯಿರುವ ಸಮಾಜಬಾಂಧವರು ಇದಕ್ಕಾಗಿ ಆಗಮಿಸುತ್ತಾರೆ. ಭಕ್ತಿ ಶ್ರದ್ಧೆಯಿಂದ 5 ದಿನಗಳ ಕಾಲ ಆಚರಣೆ ನಡೆದು ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುತ್ತೇವೆ. ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ವಿಸರ್ಜನ ಮೆರವಣಿಗೆ ತಾಲೂಕಿನಲ್ಲಿಯೇ ಅತ್ಯಂತ ವಿಜೃಂಭಣೆಯ ಮೆರವಣಿಗೆಯಾಗಿದೆ.
-ಕೆ. ರವಿ ಕೆಂಚಮ್ಮನಮನೆ,
ಅಧ್ಯಕ್ಷರು, ರಾಮಕ್ಷತ್ರಿಯ
ಯುವಕ ಮಂಡಳಿ

53 ಮಲ್ಯರಮಠ:
ನೇ ವರ್ಷದ ಸಂಭ್ರಮ
ಗಂಗೊಳ್ಳಿ: ಮಲ್ಯರಮಠದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಚರಿಸುವ ಸಾರ್ವಜನಿಕ ಗಣೇಶೋತ್ಸವವಕ್ಕೆ 53ನೇ ವರ್ಷದ ಸಂಭ್ರಮ. ಪಂಚ ನದಿಗಳು ಸಂಗಮವಾಗುವ ಪಂಚ ಗಂಗಾವಳಿಯ ಊರು ಗಂಗೊಳ್ಳಿಯ ಹಿರಿಯ ಗಣೇಶೋತ್ಸವ ಆಚರಣೆ ಎನ್ನುವ ಹೆಗ್ಗಳಿಕೆ ಇಲ್ಲಿನದು.


1966ರಲ್ಲಿ ಮೊದಲ ಬಾರಿಗೆ ಮಲ್ಯರಮಠದ ವೆಂಕಟರಮಣ ದೇವಸ್ಥಾನದಲ್ಲಿ ಗಣಪತಿ ಉತ್ಸವ ಆರಂಭಗೊಂಡಿತು. ಬೈಲೂರು ಮಂಜುನಾಥ ಶಾನುಭಾಗ್‌ ಗಣೇ ಶೋತ್ಸವ ಆಚರಣೆ ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ಇವರೊಂದಿಗೆ ಸುಬ್ರಾಯ ಪೈ, ಗಣೇಶ್‌ ಕಾಮತ್‌, ಎಂ.ಜೆ. ರಂಗನಾಥ್‌ ಭಂಡಾರ್‌ಕಾರ್‌, ಎಸ್‌. ಶ್ರೀಧರ್‌ ಆಚಾರ್ಯ, ಕೆ. ಪದ್ಮನಾಭ್‌ ನಾಯಕ್‌, ಮತ್ತಿತರರ ಮುಂದಾಳುತ್ವದಲ್ಲಿ ಈ ಆಚರಣೆ ಆರಂಭಗೊಂಡಿತು.

5 ದಿನಗಳ ಉತ್ಸವ
ಆಗ ವೆಂಕಟರಮಣ ದೇವಸ್ಥಾನದಲ್ಲಿ ಭಜನ ಸಪ್ತಾಹ ಬಿಟ್ಟರೆ ಗಂಗೊಳ್ಳಿ ಭಾಗದಲ್ಲಿ ಮಳೆಗಾಲದಲ್ಲಿ ದೊಡ್ಡ ಮಟ್ಟದ ಯಾವುದೇ ಸಾರ್ವಜನಿಕ ಸಭೆ, ಸಮಾರಂಭಗಳು ನಡೆಯು ತ್ತಿರಲಿಲ್ಲ. ಆ ನಿಟ್ಟಿನಲ್ಲಿ ಇಲ್ಲಿ ಗಣೇಶೋತ್ಸವ ಆರಂಭಗೊಂಡಿತು. ಜನರಿಗೂ ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಪಾಲ್ಗೊಳ್ಳುವಿಕೆಯೊಂದಿಗೆ ಅರಿವು ಮೂಡಿಸುವುದು ಕೂಡ ಉದ್ದೇಶವಾಗಿತ್ತು. 4 ದಿನಗಳ ಕಾಲ ಪೂಜಿಸಲ್ಪಟ್ಟ ಗಣಪನನ್ನು 5ನೇ ದಿನ ಜಲಸ್ತಂಭ ಮಾಡಲಾಗುತ್ತದೆ. 5 ದಿನವೂ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ.
– ಸದಾಶಿವ ನಾಯಕ್‌, ಅಧ್ಯಕ್ಷರು, ಗಣೇಶೋತ್ಸವ ಸಮಿತಿ

52 ವಿಠಲ ರಕುಮಾಯಿ ದೇಗುಲ:

ನೇ ವರ್ಷದ ಗಣೇಶೋತ್ಸವ
ಗಂಗೊಳ್ಳಿ : ಇಲ್ಲಿನ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯ ಪ್ರಾಣ ದೇವಸ್ಥಾನದಲ್ಲಿ ಸಾರ್ವ ಜನಿಕವಾಗಿ ಪೂಜಿಸಲ್ಪಡುವ ಗಣಪನಿಗೆ 52 ನೆಯ ವರ್ಷ ಚಾರಣೆಯ ಸಂಭ್ರಮ. 1967 ರಿಂದ ಇಲ್ಲಿ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಡಾ| ಕಾಶೀನಾಥ್‌ ಪೈ ಅವರ ಕುಟುಂಬಸ್ಥರಿಂದ ಆರಂಭಗೊಂಡಿದ್ದು, ಆ ಬಳಿಕ ಊರ ಮಹನೀಯರ ಪಾಲ್ಗೊಳ್ಳುವಿಕೆಯಲ್ಲಿ ನಿರಂತರವಾಗಿ ಪೂಜಾ ಕೈಂಕರ್ಯ ನಡೆಯುತ್ತಿದೆ. ರಾಧಾಕೃಷ್ಣ ನಾಯಕ್‌ ಈಗ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಆರಂಭದಲ್ಲಿ ವಿಟuಲ ರಕುಮಾಯಿ ದೇವ ಸ್ಥಾನದಲ್ಲಿ ಆಶ್ರಯ ದಲ್ಲಿಯೇ ನಡೆಯು ತ್ತಿದ್ದು, ಆ ಬಳಿಕ ಅಂದರೆ ಸುಮಾರು 40 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯನ್ನು ರಚಿಸಿ, ಆ ಮೂಲಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.


5 ದಿನಗಳ ಆಚರಣೆ
2017ರಲ್ಲಿ ಸುವರ್ಣ ಮಹೋತ್ಸವ ಆಚರಣೆ ನಡೆದಿದ್ದು, ಆಗ 7 ದಿನಗಳ ಕಾಲ ಉತ್ಸವ, 6 ದಿನಗಳ ಕಾಲ ಸಾರ್ವಜನಿಕ ಅನ್ನಸಂತರ್ಪಣೆ, ಅನೇಕ ಸಾಧಕರಿಗೆ ಸಮ್ಮಾನ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿ ವರ್ಷ ಜಲಸ್ತಂಭನ ಸೇರಿ 5 ದಿನಗಳ ಕಾಲ ಆಚರಣೆ ನಡೆಯುತ್ತದೆ.
– ರಾಧಾಕೃಷ್ಣ ನಾಯಕ್‌, ಅಧ್ಯಕ್ಷರು ಗಣೇಶೋತ್ಸವ
ಆಚರಣ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next