Advertisement
ಭಾರತದ ಮಾತು ಹೀಗೆ ಇರಲಿ, ಭಾರತದಾಚೆಯ ನೆಲವನ್ನು ತಮ್ಮ ಮನೆ ಮಾಡಿಕೊಂಡ ಭಾರತೀಯರು ತಮ್ಮೊಟ್ಟಿಗೆ ತಂದ ಪ್ರಮುಖ ಹಬ್ಬಗಳಲ್ಲಿ ಗಣಪನ ಹಬ್ಬವೂ ಒಂದು. ಯುಗಾದಿ, ನವರಾತ್ರಿ, ದೀಪಾವಳಿಗಳಷ್ಟು ಸರ್ವಮಾನ್ಯವಲ್ಲದಿದ್ದರೂ, ಮರಾಠರ, ತೆಲುಗರ, ತಮಿಳರ ಮತ್ತೆ ಅಲ್ಲಲ್ಲಿ ಕನ್ನಡಿಗರ ಸಾಂಘಿಕ ಚಟುವಟಿಕೆಗಳ ub ಆಗಿ ಗಣೇಶ ಹಬ್ಬ ಹಲವು ದೇಶಗಳಂತೆ ಯುನೈಟೆಡ್ ಕಿಂಗ್‌ಡಮ್ (ಯುಕೆ) ಯಲ್ಲೂ ಆಚರಿಸಲ್ಪಡುತ್ತದೆ.
Related Articles
ಕನ್ನಡಿಗರ ಸಂಸ್ಥೆಗಳು ಸಹ ಕಳೆದ 3-4 ವರ್ಷಗಳಿಂದ ಗಣೇಶನನ್ನು ಕೂರಿಸುತ್ತಿದ್ದಾರೆ. ಲಂಡನ್ನಿನ ದಕ್ಷಿಣದ orpington ಗಣೇಶೋತ್ಸವಕ್ಕೆ ಈಗ ಮೂರು ವರ್ಷದ ಸಂಭ್ರಮ. ಹಳೆಯ ಚರ್ಚ್ ಒಂದನ್ನು ಹಬ್ಬದ ಮೂರುದಿನ ಬಾಡಿಗೆಗೆ ಪಡೆದು, ಗಣೇಶನನ್ನು ಸ್ಥಾಪಿಸಿ, ಪೂಜಿಸಿ, ಕನ್ನಡದ ಭಜನೆ, ಹಾಡು, ನೃತ್ಯಗಳಲ್ಲಿ ತಮ್ಮ ಬಾಲ್ಯದ ಮನೆಯ ಬೀದಿಗಳ, ಊರಿನ ಪೆಂಡಾಲುಗಳ ಗಣಪತಿಯ ಉತ್ಸವವನ್ನು ನೆನೆಯುತ್ತ ಕುಣಿಯುವುದು ಮೇಲ್ಮೆ„ಯ ಉದ್ದೇಶವಾದರೂ, ತಮ್ಮ ಮಕ್ಕಳ ಮನದಲ್ಲಿ ಭಾರತದ ಸಂಸ್ಕೃತಿ, ಭಾಷೆಗಳು ಮೂಡಿ ಅರಳಲಿ ಎನ್ನುವದು ಹೆಚ್ಚಿನವರ ಮನದೊಳಗಿನ ಆಶಯ.
Advertisement
ಇವೆಲ್ಲ ಅಲ್ಲದೆ, ನಿತ್ಯ ಗಣಪತಿಯನ್ನು ಪೂಜಿಸುವ ಇಂಗ್ಲೆಂಡಿನ ಹಲವೆಡೆಯಲ್ಲಿರುವ ದೇವಸ್ಥಾನಗಳಲ್ಲಿ ಹಬ್ಬದ ವಿಶೇಷ ಪೂಜೆ, ಉತ್ಸವಗಳು ಇರುತ್ತವೆ. ತಮಿಳು ಭಾಷಿಕರು ಹೆಚ್ಚಿರುವ ಕಡೆ ದೇವಸ್ಥಾನಗಳೂ ಹೆಚ್ಚು. ಆ ಆಲಯಗಳಲ್ಲಿ ನಡೆಯುವ ಪೂಜಾ ವಿಧಿಗಳೂ ತಮಿಳುನಾಡಿನ ದೇವಸ್ಥಾನಗಳಂತೆ ನೋಡಲು, ಕೇಳಲು ಚೆನ್ನ. ಕನ್ನಡಿಗರ ಮಟ್ಟಿಗೆ ಹೇಳುವುದಾದರೆ, ಲಂಡನ್‌ನಲ್ಲಿರುವ ಪುತ್ತಿಗೆ ಮಠದ ಶಾಖೆ ಕಳೆದ ನಾಲ್ಕು ವರ್ಷಗಳಿಂದ ಸಕ್ರಿಯವಾಗಿ ಆಚರಿಸುವ ವಿವಿಧ ಹಬ್ಬಗಳಲ್ಲಿ ಗಣೇಶನ ಹಬ್ಬವೂ ಒಂದು. ಈ ವರ್ಷ, ಹೊಸತಾಗಿ, ಲೈವ್ online video ಮೂಲಕ ಪುರೋಹಿತರನ್ನು ಮನೆ-ಮನೆಗೆ ಕಳಿಸುವ ಸಂಕಲ್ಪ ಅವರದ್ದು. ಈಗಾಗಲೇ, ಉಪಾಕರ್ಮ, ಕೃಷ್ಣಾಷ್ಟಮಿ ಪೂಜೆಗಳನ್ನು ಯಶಸ್ವಿಯಾಗಿ onlineನಲ್ಲಿ ಮಾಡಿಸಿರುವ ಉತ್ಸಾ ಹದಲ್ಲಿ ಗಣೇಶ ಹಬ್ಬಕ್ಕೆ ಅವರು ತಯಾರಾಗಿದ್ದಾರೆ. ಅಮೆರಿಕದ ಪುತ್ತಿಗೆ ಮಠದ ಆಚಾರ್ಯ ಯೋಗಿಂದ್ರ ಭಟ್ಟರು ಅಲ್ಲಿಯೇ ಕುಳಿತು ಇಂಗ್ಲೆಂಡಿನ ಆಸಕ್ತ ಕನ್ನಡಿಗರ ಮನೆಯ ಗಣಪನ ಪೂಜೆಗೆ ಆಚಾರ್ಯರಾಗಲಿದ್ದಾರೆ.
ಗಣಪನ ನಾಮರೂಪಗಳು ನೂರಾರು. ಅದರಂತೆ, ದೇಶಾಂತರ ಬಂದರೂ, ಹಲವು ರೀತಿಯಲ್ಲಿ, ನಮ್ಮತನವನ್ನು ಉಳಿಸಿ, ಬೆಳೆಸಿ, ನಮ್ಮವರೊಂದಿಗೆ ಬೆರೆತು ಮೆರೆಯಬೇಕೆನ್ನುವ ಹಂಬಲದ ಜನರೆಲ್ಲ ಗಣೇಶ ಹಬ್ಬದ ರೂಪದಲ್ಲಿ ಭಾರತೀಯತೆಯನ್ನು ಯುಕೆಯಲ್ಲಿ ಅರಳಿಸುತ್ತಿದ್ದಾರೆ.
-ಮುರಳಿ ಹತ್ವಾರ್, ಲಂಡನ್