Advertisement

ಗಣೇಶೋತ್ಸವ ನಿಯಮ ಪಾಲನೆ: ಆಯೋಜಕರು

03:07 PM Aug 19, 2020 | Suhan S |

ರಾಮನಗರ: ಜಿಲ್ಲೆಯಲ್ಲಿ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಗೌರಿ – ಗಣೇಶ ಹಬ್ಬದ ಸಂಭ್ರಮಕ್ಕೆ ಕಡಿವಾಣ ಬೀಳುವ ಎಲ್ಲಾ ಲಕ್ಷಣಗಳಿವೆ. ಕಳೆದ ವರ್ಷಗಳಲ್ಲಿ ನಡೆಯುತ್ತಿದ್ದ ವೈಭವದ ಗಣೇಶೋತ್ಸವ ಈ ಬಾರಿ ಕಾಣದಿರಬಹುದು. ಸರ್ಕಾರದ ಪರಿಷ್ಕೃತ ಮಾರ್ಗ ಸೂಚಿಗಳ ಪ್ರಕಾರವೇ ಗಣೇಶ ಮೂರ್ತಿ ಸ್ಥಾಪಿಸಲು ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ ಜಿಲ್ಲೆಯ ಪೊಲೀಸರು ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

Advertisement

4 ಅಡಿ ದರ್ಬಾರ್‌ ಗಣಪತಿ: ನಗರದ ಮುಖ್ಯರಸ್ತೆಯ ಭಾರ್ಗವ ಸ್ವಾಮಿ ಭಜನೆ ಮಂದಿರದಲ್ಲಿ ಗಣೇಶೋತ್ಸವ ಆಚರಿಸುತ್ತಿದ್ದ ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಕಾರ್ಯದರ್ಶಿ ಎ.ಎಸ್‌.ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಪ್ರತಿ ವರ್ಷ ಸುಮಾರು 11 ಅಡಿ ಎತ್ತರದ ದರ್ಬಾರ್‌ ಗಣಪತಿ ಸ್ಥಾಪಿಸಲಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರದ ಆದೇಶದ ಪ್ರಕಾರ 3 ಅಡಿ ಅಗಲ 4 ಅಡಿ ಎತ್ತರದ ಮಣ್ಣಿನಿಂದ ಮಾಡಿದ ದರ್ಬಾರ್‌ ಗಣೇಶ ಮೂರ್ತಿಯನ್ನು ಈಗಾಗಲೇ ತರಿಸಲಾಗಿದೆ. 15 ದಿನಗಳ ನಂತರ ವಿಸರ್ಜನೆಗೆ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪೂಜೆಗೆ ಅವಕಾಶ ಮಾಡಿಕೊಳ್ಳಲಾಗಿದೆ. ಆದರೆ ಪ್ರಸಾದ ವಿನಿಯೋಗ, ಭಜನೆ ಮಂದಿರದೊಳಗೆ ಯಾರಿಗೂ ಪ್ರವೇಶ ಇರೋಲ್ಲ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಆಡಳಿತಗಳ ಅನುಮತಿ ಆಧರಿಸಿ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಷಟ್ಬುಜ ಗಣಪತಿ: ನಗರದ ಛತ್ರದ ಬೀದಿ ಶ್ರೀ ಅರ್ಕಾವತಿ ವಿದ್ಯಾಗಣ ಪತಿ ಯುವ ಸೇವಾ ಸಂಘ ಹಾಗೂ ಅರಳಿ ಕಟ್ಟೆ ಗೆಳೆಯರ ಬಳಗ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಗಳು ಪ್ರತಿ ವರ್ಷ ವಿಶೇಷವಾಗಿರುತ್ತಿತ್ತು. ಈ ಬಾರಿ ಸರ್ಕಾರದ ಸೂಚನೆಗಳ ಪ್ರಕಾರವೇ ಗಣಪತಿ ಪ್ರತಿಷ್ಠಾಪಿಸುವುದಾಗಿ ಸಂಘದ ಅಧ್ಯಕ್ಷ ಪಿ.ವೈ.ರವೀಂದ್ರ ತಿಳಿಸಿದ್ದಾರೆ. ಸುಮಾರು 4 ಅಡಿಯ ಷಟ್ಬುಜ ಗಣಪತಿಯನ್ನು 2 ದಿನಗಳ ಮಟ್ಟಿಗೆ ಭಕ್ತಾದಿಗಳ ದರ್ಶನಕ್ಕೆ ಸಿಗಲಿದೆ ಎಂದರು. ಧ್ವನಿವರ್ಧಕ, ವಿಸರ್ಜನಾ ಮೆರವಣಿಗೆ ಇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next