Advertisement

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

02:15 PM Aug 31, 2022 | Team Udayavani |

ಗಂಗಾವತಿ: ವಿಘ್ನ ವಿನಾಶಕ ಗೌರಿ ತನಯ ಗೌರಿ ಗಣೇಶ ಹಬ್ಬದ ನಿಮಿತ್ತ ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಜನತೆ ಸಡಗರದಿಂದ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ .

Advertisement

ಕಳೆದ ಹಲವು ವರ್ಷಗಳಿಂದ ಗಂಗಾವತಿಯಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ತ ಉದ್ವಿಗ್ನ ವಾತಾವರಣ ಉಂಟಾಗಿದ್ದರಿಂದ ಪೊಲೀಸರು ಎಚ್ಚೆತ್ತುಕೊಂಡು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಬುಧವಾರ ಗಣೇಶ ಮಂಡಳಿಯವರು ಗಣೇಶನ ಪ್ರತಿಷ್ಠಾಪನೆ ಮಾಡಲು ನಡೆದಾಗ ಗಣಪತಿಯನ್ನು ಕೊಂಡೊಯ್ಯುವ ದೃಶ್ಯ ಸಡಗರದಿಂದ ಕೂಡಿತ್ತು. ಗೌಳಿ ಸಮಾಜದ ಗಣೇಶನನ್ನು ಗಣೇಶ ಮಂಟಪಕ್ಕೆ ಕರೆದಿರಲು ಸ್ವತಃ ಎಮ್ಮೆಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಮೆರವಣಿಗೆ ಮೂಲಕ ಗಣೇಶನನ್ನು ಮಂಟಪಕ್ಕೆ ಕರೆದೊಯ್ಯಲಾಯಿತು .

ನಗರದ ಗಾಂಧಿ ವೃತ್ತ ಸೇರಿದಂತೆ ಪ್ರಮುಖ ಗಣೇಶನು ತಯಾರಿಸುವ ಸ್ಥಳದಿಂದ ಗಣೇಶ ಮಂಡಳಿಯವರು ಬರವಣಿಗೆಯ ಮೂಲಕ ಗಣೇಶನನ್ನು ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇವಾಂಗ ಮಠದ ಹತ್ತಿರ ವೀರ ಮದಕರಿ ನಾಯಕ ಸಂಘದ ವತಿಯಿಂದ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಮೂಲ ಕಾರಣೀಕರ್ತರಾದ ಗಂಡುಗಲಿ ಕುಮಾರರಾಮ ಅಶ್ವಾರೋಹಿ ಗಣೇಶನ ಮೂರ್ತಿಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು. ನಗರದ ಶಾಲೆಗಳಲ್ಲಿ ಮಣ್ಣಿನಿಂದ ಗಣಪತಿಯನ್ನು ತಯಾರಿಸಿ ಮನೆಯಲ್ಲಿ ಪೂಜೆ ಮಾಡುವಂತೆ ತರಬೇತಿ ನೀಡಿದ್ದರಿಂದ ಕೆಲ ಶಾಲಾ ಮಕ್ಕಳು ಮನೆಯಲ್ಲಿಯೇ ಮಣ್ಣಿನಿಂದ ಗಣಪಗಳನ್ನು ತಯಾರಿಸಿ ಪೂಜೆ ಮಾಡಿದ ದೃಶ್ಯ ಕಂಡುಬಂತು .

ಇನ್ನು ಇಂದು ಮಹಾಮಂಡಳಿ ಗಣಪ ಸೇರಿದಂತೆ ನೀಲಕಂಠೇಶ್ವರ ಕ್ಯಾಂಪ್, ಮುರಹರಿ ಕ್ಯಾಂಪ್, ಮಹೆಬೂಬ್ ನಗರ, ಲಿಂಗರಾಜುಕ್ಯಾಂಪ್,ಜುಲೈ ನಗರ ,ಮೇದಾರ ಗಣಪತಿ, ಎಪಿಎಂಸಿ ಗಂಜ್ ಸೇರಿದಂತೆ ನಗರದ ವಿವಿಧೆಡೆಯಲ್ಲಿ ಗಣೇಶನನ್ನು ಪಿಟ್ಟಾಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯವರು ನಗರದ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಪೊಲೀಸ್ ಬಂದೋಬಸ್ತು ಹೆಚ್ಚು ಮಾಡಿ ಕಾವಲು ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next