Advertisement
ಬುಧವಾರ ಕೆಎಸ್‌ಸಿಎನಲ್ಲಿ ಸಿಇಒ ಆಗಿ ಎಂ.ಪಿ.ಗಣೇಶ್‌ಗೆ ಕೊನೆಯ ದಿನ. ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿದ್ದಂತೂ ನಿಜ. ಒಂದು ಕಡೆ ಕೆಎಸ್‌ಸಿಎ ಬಿಡುತ್ತಿರುವ ಬೇಸರ, ಮತ್ತೂಂದೆಡೆ ಹಾಕಿ ಇಂಡಿಯಾ ಸೇರುತ್ತಿರುವ ಸಂತಸದಲ್ಲಿದ್ದ ಅವರು ಉದಯವಾಣಿಯೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಕಳೆದ ಏಳೂವರೇ ವರ್ಷದಿಂದ ನಾನು ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಜತೆಗೆ ಕೆಲಸ ನಿರ್ವಹಿಸಿದ್ದೇನೆ. ಅನೇಕ ಕಾರ್ಯಕ್ರಮಗಳ ಮೇಲುಸ್ತುವಾರಿ ನೋಡಿದ್ದೇನೆ. ಹಾಕಿ ಆಟಗಾರನಾಗಿ, ಕೋಚ್ ಆಗಿ, ಆಡಳಿತಾಧಿಕಾರಿಯಾಗಿ ಕೆಲಸ ಮಾಡಿದ್ದ ನನಗೆ ಕೆಎಸ್‌ಸಿಎ ಹೊಸ ಜವಾಬ್ದಾರಿ ನೀಡಿತು. ಅದನ್ನು ನಾನು ಚೆನ್ನಾಗಿ ನಿರ್ವಹಿಸಿದೆ. ಈಗ ಮತ್ತೆ ನನ್ನ ನೆಚ್ಚಿನ ಕ್ರೀಡೆ ಹಾಕಿಯತ್ತ ಮುಖ ಮಾಡಿದ್ದೇನೆ. ಹಾಕಿಯಲ್ಲಿ ನೀವು ನಿರ್ವಹಿಸಲು ಹೊರಟಿರುವ ಹೊಸ ಜವಾಬ್ದಾರಿ ಏನು? ನವದೆಹಲಿಯಲ್ಲಿರುವ ರಾಷ್ಟ್ರೀಯ ಹಾಕಿ ಅಕಾಡೆಮಿಗೆ ಸಿಇಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಹಾಗೂ ಉನ್ನತ ಪ್ರದರ್ಶನ ನಿರ್ದೇಶಕ ಆಗಿ ಹಾಕಿ ಇಂಡಿಯಾ ನನ್ನನ್ನು ಆಯ್ಕೆ ಮಾಡಿದೆ. 18 ವರ್ಷ ವಯೋಮಿತಿಯೊಳಗಿನ ಭಾರತ ತಂಡವನ್ನು ಕಟ್ಟುವುದು, ಗ್ರಾಮೀಣ ಪ್ರದೇಶದಿಂದ ಪ್ರತಿಭಾಶೋಧ ನಡೆಸಿ ಯುವ ಆಟಗಾರರನ್ನು ಆಯ್ಕೆ ಮಾಡುವುದು, ಅವರಿಗೆ ವಸತಿ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲವು ನನ್ನ ಹೊಣೆ ಆಗಿರುತ್ತದೆ.
Related Articles
ನನ್ನ ಜೀವನದ ಅವಿಸ್ಮರಣೀಯ ನೆನಪುಗಳಲ್ಲಿ ಒಂದಾಗಿದೆ. ಬ್ರಿಜೇಶ್ ಪಟೇಲ್ ನೀಡಿದ ಸಹಕಾರವನ್ನು ಎಂದಿಗೂ ಮರೆಯಲು
ಸಾಧ್ಯವಾಗುವುದಿಲ್ಲ. ಸಬ್‌ಏರ್ ಅಳವಡಿಕೆ, ಚಿನ್ನಸ್ವಾಮಿ ಮೇಲ್ಛಾವಣಿಗೆ ಸೋಲಾರ್, ನೀರಿನ ಶುದ್ಧೀಕರಣ ಘಟಕ ಸೇರಿದಂತೆ ಅನೇಕ ಕೆಲಸಗಳು ನನ್ನ ಆಡಳಿತ ಅವಧಿಯಲ್ಲೇ ಆಗಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗವಾಗಿ ನಾನು ಒಬ್ಬ ಅಭಿವೃದ್ಧಿ ಕೆಲಸದಲ್ಲಿ ಕೈ ಜೋಡಿಸಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ಮತ್ತು ಸಾರ್ಥಕದ ವಿಷಯ.
Advertisement
ಅವಧಿ ಮುನ್ನವೇ ಹೊರ ನಡೆಯುತ್ತಿದ್ದೀರಿ? ಇದಕ್ಕೆ ಕೆಎಸ್‌ಸಿಎ ಅನುಮತಿ ಸಿಕ್ಕಿದೆಯಾ? 2018ರ ವರೆಗೆ ಕೆಎಸ್‌ಸಿಎ ಜತೆಗೆ ಒಪ್ಪಂದವಿದೆ. ಅವಧಿಗೆ ಮೊದಲೇ ಇಲ್ಲಿಂದ ಹೊರಹೋಗುತ್ತಿದ್ದೇನೆ. ಇದಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿಗೆ ನೀಡಿದೆ. ಅವರಿಗೆ ನನ್ನ ಸೇವೆ ಮುಂದುವರಿಸುವ ಆಸೆ ಇತ್ತು. ಆಡಳಿತಾಧಿಕಾರಿ
ಆಗಿ ಮಾಡಿದ್ದೇನು?
ಸಾಯ್(ಭಾರತೀಯ ಕ್ರೀಡಾ ಪ್ರಾಧಿಕಾರ) ಕ್ರೀಡಾ ಆಡಳಿತಾಧಿಕಾರಿ ಮತ್ತು ನಿರ್ವಾಹಕರಾಗಿ ಒಟ್ಟಾರೆ 20 ವರ್ಷಗಳ ಅನುಭವ. 1986-2006ರವರೆಗೆ ಒಟ್ಟಾರೆ ಮಣಿಪುರ, ಬೆಂಗಳೂರು, ಪಟಿಯಾಲ, ನವದೆಹಲಿಯಲ್ಲಿ ಸೇವೆ. ಈ ಅವಧಿಯಲ್ಲಿ ಇವರು ತಂಡಗಳು, ಅಕಾಡೆಮಿ, ದೈಹಿಕ ಶಿಕ್ಷಣ, ಮೂಲ ಸೌಲಭ್ಯ ಸೇರಿದಂತೆ ಹಲವು ಕೆಲಸಗಳನ್ನು ಕಾರ್ಯಕಾರಿ ನಿರ್ದೇಶಕ ಹುದ್ಧೆಯಡಿ ನಿರ್ವಹಿಸಿದ್ದಾರೆ. ಆ ಬಳಿಕ ಅಂದರೆ 2009ರ ಅರ್ಧದಲ್ಲಿ ಇವರು ರಾಜ್ಯ ಕ್ರಿಕೆಟ್ ಸಂಸ್ಥೆ ಸಿಇಒ ಆಗಿ ಕೆಲಸ ಆರಂಭಿಸಿದರು. ಹಲವಾರು ಯಶಸ್ವಿ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು. ಹಾಕಿ ಆಟಗಾರ, ಕೋಚ್ ಆಗಿ
ಸಾಧಿಸಿದ್ದೇನು?
1972ರಲ್ಲಿ ಇವರನ್ನೊಳಗೊಂಡ ತಂಡ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿತ್ತು. 1973ರಲ್ಲಿ ಇವರ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಹಾಕಿನಲ್ಲಿ ಬೆಳ್ಳಿ, 1971ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಮೊದಲ ಹಾಕಿ ವಿಶ್ವಕಪ್‌ನಲ್ಲಿ ಕಂಚು, 1970 ಮತ್ತು 1974 ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ, 1972ರಲ್ಲಿ ವಿಶ್ವ ಇಲೆವೆನ್, 1970 ಮತ್ತು 1974ರಲ್ಲಿ ಏಷ್ಯ ಇಲೆವೆನ್ ತಂಡ ಪ್ರತಿನಿಧಿಸಿದರು. 1974-1976ರವರೆಗೆ ಇಟಲಿ ಕ್ಲಬ್ ತಂಡಕ್ಕೆ ಕೋಚ್. 1980ರಲ್ಲಿ ಇವರ ತರಬೇತಿಯಡಿ ಪಳಗಿದ ಭಾರತ ತಂಡಕ್ಕೆ ಚಿನ್ನ, 1988ರಲ್ಲಿ ಸಿಯೋಲ್‌ನಲ್ಲಿ ನಡೆದ ಒಲಿಂಪಿಕ್ಸ್ ವೇಳೆ ಭಾರತ ತಂಡಕ್ಕೆ ಕೋಚ್, 1990ರಲ್ಲಿ ವಿಶ್ವಕಪ್ ಪಂದ್ಯದಲ್ಲೂ ಇವರು ಭಾರತ ತಂಡಕ್ಕೆ ಕೋಚ್ ಆಗಿ ಕೆಲಸ ನಿರ್ವಹಿಸಿದ್ದಾರೆ. – ಹೇಮಂತ್ ಸಂಪಾಜೆ