Advertisement

ವಿಪ್‌, ಪೊಲೀಸ್‌ ಕೇಸ್‌ ಅಡಕತ್ತರಿಯಲ್ಲಿ ಗಣೇಶ್‌

01:39 AM Feb 06, 2019 | Team Udayavani |

ಬೆಂಗಳೂರು: ಶಾಸಕ ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅಧಿವೇಶನಕ್ಕೆ ಹಾಜರಾಗುವ ವಿಚಾರದಲ್ಲಿ ಇದೀಗ ಪಕ್ಷದ ‘ವಿಪ್‌’ ಎಂಬ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಅತ್ತ ವಿಪ್‌ ಪಾಲಿಸಿ ಅಧಿವೇಶನಕ್ಕೆ ಹಾಜ ರಾದರೆ ಪೊಲೀಸರು ಬಂಧಿ ಸುವ ಸಾಧ್ಯತೆ ತಳ್ಳಿ ಹಾಕುವಂ ತಿಲ್ಲ. ಇತ್ತ ಒಂದೊಮ್ಮೆ ವಿಪ್‌ ಉಲ್ಲಂಘಿಸಿ ದರೆ ಪಕ್ಷದಿಂದ ಶಿಸ್ತು ಕ್ರಮದ ಜತೆಗೆ ಪಕ್ಷಾಂತರ ನಿಷೇಧ ಕಾಯ್ದೆಯ ತೂಗುಗತ್ತಿ ನೇತಾಡುವ ಸಾಧ್ಯತೆಯನ್ನೂ ಅಲ್ಲಗಳೆಯು ವಂತಿಲ್ಲ. ಒಂದು ವೇಳೆ ಬಂಧನವಾದರೂ, ಗಣೇಶ್‌ ಅವರು ವಿಧಾನಸಭೆ ಅಧಿವೇಶನ ದಲ್ಲಿ ಪಾಲ್ಗೊಳ್ಳಲು ಪೊಲೀಸರು ಅವಕಾಶ ಕಲ್ಪಿಸಬಹುದಾಗಿದೆ.

Advertisement

ಜೆ.ಎನ್‌. ಗಣೇಶ್‌ ಅಧಿವೇಶನಕ್ಕೆ ಹಾಜರಾದರೆ ಅವರನ್ನು ಬಂಧಿಸುವ ಎಲ್ಲ ಅವಕಾಶ, ಅಧಿಕಾರ ಪೊಲೀಸರಿಗಿದೆ. ಆದರೆ, ಅದಕ್ಕಾಗಿ ಸ್ಪೀಕರ್‌ ಅನುಮತಿ ಪಡೆಯುವ ಅಥವಾ ಅವರ ಗಮನಕ್ಕೆ ತರಬೇಕಾದ ಕಾನೂನು ನಿಯಮಗಳನ್ನು ಪೊಲೀಸರು ಪಾಲಿಸಬೇಕಾಗುತ್ತದೆ. ಅದೇ ರೀತಿ ಸಂಬಂಧಪಟ್ಟ ಶಾಸಕ ಅಧಿವೇಶನದಲ್ಲಿ ಭಾಗವಹಿಸುವುದಕ್ಕೆ ಬಾಧೆ ಆಗದಂ ತೆಯೂ ಪೊಲೀಸರು ನಡೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಶಾಸಕರನ್ನು ತಡೆದರೆ ಅದು ಹಕ್ಕುಚ್ಯುತಿ ಆಗುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

ಅಧಿವೇಶನಕ್ಕೆ ಹಾಜರಾಗುವ ಮೊದಲೇ ಶಾಸಕರನ್ನು ವಿಧಾನಸಭೆಯ ಸ್ಪೀಕರ್‌ರವರ ಅಧಿಕಾರ ವ್ಯಾಪ್ತಿಯ ಪ್ರದೇಶದಿಂದ ಹೊರ ಗಡೆ ಪೊಲೀಸರು ಬಂಧಿಸಿದರೆ, ಆ ಬಗ್ಗೆ ಸ್ಪೀಕರ್‌ ಅವರಿಗೆ ಮಾಹಿತಿ ಕೊಡಬೇಕಾಗು ತ್ತದೆ. ಒಂದೊಮ್ಮೆ ವಿಧಾನಸಭೆಯ ವ್ಯಾಪ್ತಿ ಯಲ್ಲಿ ಬಂಧಿಸುವ ಪ್ರಮೇಯ ಎದುರಾದರೆ ಅದಕ್ಕೆ ಸ್ಪೀಕರ್‌ ಅನುಮತಿ ಪಡೆಯಬೇಕು. ತಕ್ಷಣಕ್ಕೆ ಅನುಮತಿ ನೀಡುವ ವಿಚಾರ ಸ್ಪೀಕರ್‌ ವಿವೇಚನೆಗೆ ಬಿಟ್ಟಿದ್ದು. ಎರಡೂ ಪರಿಸ್ಥಿತಿಗಳಲ್ಲೂ ಶಾಸ ಕರು ಅಧಿವೇಶನಕ್ಕೆ ಹಾಜರಾ ಗಲು ಅಡಚಣೆ ಆಗದಂತೆ ಪೊಲೀಸರು ನಡೆದುಕೊಳ್ಳಬೇಕು.

ಹಾಗೊಂದು ವೇಳೆ ಪೊಲೀಸರು ಬಂಧಿಸಿ ದರೆ, ಅಧಿವೇಶನದಲ್ಲಿ ಹಾಜರಾ ಗಲು ಅವಕಾಶ ಮಾಡಿಕೊಡಬೇಕಾಗಬ ಹುದು. ಅದಕ್ಕಾಗಿ ಪೊಲೀಸರ ಕಣ್ಗಾವಲಿನಲ್ಲಿ ಕಲಾಪಕ್ಕೆ ಹಾಜರಾಗಬೇಕು, ಪೊಲೀಸರು ನಿರ್ದಿಷ್ಟಪ ಡಿಸಿದ ಸ್ಥಳದಲ್ಲಿ ವಾಸ್ತವ್ಯ ಹೂಡಬೇಕು ಇಲ್ಲವೇ ಶಾಸಕರು ವಾಸ್ತವ್ಯ ಮಾಡುವ ಸ್ಥಳದಲ್ಲಿ ಪೊಲೀಸರ ಕಾವಲು ಹಾಕುವಂತಹ ಷರತ್ತು ವಿಧಿಸಬಹುದು ಅಥವಾ ಅಧಿವೇಶನ ಮುಗಿದ ದಿನ ಅವರನ್ನು ಬಂಧಿಸಬಹುದು ಎಂದು ಕಾನೂನು ತಜ್ಞರು ಹೇಳುತ್ತಾರೆ.

ವಿಪ್‌ನಿಂದ ವಿನಾಯ್ತಿ ಕೇಳಬಹುದು: ನಿರ್ದಿಷ್ಟ ಕಾರಣಗಳನ್ನು ಕೊಟ್ಟು ಶಾಸಕರು ವಿಪ್‌ನಿಂದ ವಿನಾಯ್ತಿ ಕೇಳಬಹುದು. ಯಾವುದೋ ಕಾರಣಕ್ಕೆ ಅಧಿವೇಶನಕ್ಕೆ ಗೈರು ಹಾಜರಾಗಿ ವಿಪ್‌ ಉಲ್ಲಂಘಿಸಿದರೆ, ಅದಾದ 15 ದಿನಗಳಲ್ಲಿ ತಮ್ಮ ಗೈರಿಗೆ ವಿವರಣೆ ಅಥವಾ ಸ್ಪಷ್ಟನೆ ನೀಡುವ ಅವಕಾಶ ಶಾಸಕರಿಗೆ ಇರುತ್ತದೆ. ಅದನ್ನು ಪರಿಗಣಿಸಿ ಪಕ್ಷ ಅವರಿಗೆ ‘ಕ್ಷಮಾಪಣೆ’ ನೀಡಲೂಬಹುದು ಎಂಬುದು ಕಾನೂನು ತಜ್ಞರ ಅಭಿಪ್ರಾಯ.

Advertisement

ಜೆ.ಎನ್‌.ಗಣೇಶ್‌ ಅಧಿವೇಶನಕ್ಕೆ ಹಾಜರಾದರೆ ಅವರನ್ನು ಬಂಧಿಸುವ ಅಧಿಕಾರ, ಅವಕಾಶ ಪೊಲೀಸರಿಗಿದೆ. ಆದರೆ, ವಿಷಯವನ್ನು ಸ್ಪೀಕರ್‌ ಗಮನಕ್ಕೆ ತರಬೇಕಾಗುತ್ತದೆ. ಒಂದು ವೇಳೆ ಬಂಧಿಸಿದರೂ ಶಾಸಕರು ಅಧಿವೇಶನಕ್ಕೆ ಹಾಜರಾಗಲು ಯಾವುದೇ ಬಾಧೆ ಆಗದಂತೆಯೂ ಪೊಲೀಸರು ನೋಡಿಕೊಳ್ಳಬೇಕಾಗುತ್ತದೆ.
 ● ಅಶೋಕ್‌ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌

ಶಾಸಕರನ್ನು ಪೊಲೀಸರು ಬಂಧಿಸಬಹುದು. ಆದರೆ, ನಿರ್ದಿಷ್ಟ ಕಾರಣಗಳನ್ನು ನೀಡಿ ವಿಪ್‌ನಿಂದ ವಿನಾಯ್ತಿ ಕೇಳುವ ಮತ್ತು ವಿಪ್‌ ಉಲ್ಲಂಘನೆ ಮಾಡಿದರೆ 15 ದಿನಗಳಲ್ಲಿ ಅದಕ್ಕೆ ವಿವರಣೆ ಅಥವಾ ಸ್ಪಷ್ಟೀಕರಣ ನೀಡುವ ಅವಕಾಶವೂ ಶಾಸಕರು ಹೊಂದಿರುತ್ತಾರೆ.
 ● ಪ್ರೊ.ರವಿವರ್ಮಕುಮಾರ್‌,ಮಾಜಿ ಅಡ್ವೋಕೇಟ್‌ ಜನರ

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next