Advertisement

ಗಣೇಶ್‌ ಸಿನ್ಮಾದ ಹೆಸರು “ಸಖತ್‌’

10:19 AM Feb 26, 2020 | Lakshmi GovindaRaj |

ಗಣೇಶ್‌ ಸದ್ಯ ಯೋಗರಾಜ್‌ಭಟ್‌ ಅವರ “ಗಾಳಿಪಟ 2′ ಸಿನಿಮಾದ ಜಪ ಮಾಡುತ್ತಿದ್ದಾರೆ. ಆ ಚಿತ್ರದ ಜೊತೆ ಜೊತೆಯಲ್ಲೇ ಇನ್ನೊಂದು ಸಿನಿಮಾ ಕಡೆಯೂ ಗಮನಹರಿಸಿದ್ದಾರೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಗಣೇಶ್‌ ಹಾಗು “ಸಿಂಪಲ್‌’ ಸುನಿ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಶುರುವಾಗಲಿದೆ ಎಂಬ ಸುದ್ದಿ ಇತ್ತು. ಆದರೆ, ಆ ಚಿತ್ರಕ್ಕೆ ಶೀರ್ಷಿಕೆ ಏನು ಎಂಬುದು ಪಕ್ಕಾ ಆಗಿರಲಿಲ್ಲ. ಈಗ ಶೀರ್ಷಿಕೆ ಪಕ್ಕಾ ಆಗಿದೆ.

Advertisement

ಆ ಚಿತ್ರಕ್ಕೆ “ಸಖತ್‌’ ಎಂದು ನಾಮಕರಣ ಮಾಡಲಾಗಿದೆ. “ಚಮಕ್‌’ ಚಿತ್ರದ ಬಳಿಕ ಗಣೇಶ್‌ ಹಾಗು ಸುನಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ. “ಸಖತ್‌’ ಎಂಬ ಶೀರ್ಷಿಕೆ ಕೇಳಿದಾಕ್ಷಣ, ಅದೊಂದು ಪಕ್ಕಾ ಮನರಂಜನೆಯ ಸಿನಿಮಾ ಅನ್ನೋದು ಪಕ್ಕಾ ಆಗುತ್ತೆ. ಸದಕ್ಕೆ ಚಿತ್ರದ ಪೂಜೆ ನೆರವೇರಿದೆ. ಚಿತ್ರದ ನಾಯಕಿಯಾಗಿ ಸುರಭಿ ಕೂಡ ಆಯ್ಕೆಯಾಗಿದ್ದಾರೆ. ಸುರಭಿಗೆ “ಸಖತ್‌’ ಕನ್ನಡದ ಮೊದಲ ಚಿತ್ರ.

ಅವರು ಈಗಾಗಲೇ ತಮಿಳು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು, ಈ ಹಿಂದೆ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರವನ್ನು ನಿರ್ಮಿಸಿದ್ದ ಸುಪ್ರೀತ್‌ ಅವರು, “ಸಖತ್‌’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುನಿ ಜೊತೆ ಸುಪ್ರೀತ್‌ಗೆ ಮೊದಲ ಸಿನಿಮಾ. “ಚಮಕ್‌’ ಮೂಲಕ ಎಲ್ಲರನ್ನೂ ರಂಜಿಸಿದ್ದ ಗಣೇಶ್‌ ಹಾಗು ಸುನಿ ಕಾಂಬಿನೇಷನ್‌, ಈಗ “ಸಖತ್‌’ ಚಿತ್ರದ ಮೂಲಕವೂ ಹೊಸತನ್ನು ನೀಡುವ ಉತ್ಸಾಹದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next