Advertisement

ಗಣೇಶ್‌ಗೆ ಸಿಕ್ಕ ಪಂಜಾಬಿ ಹುಡುಗಿ

11:14 AM Jun 26, 2018 | |

ಗಣೇಶ್‌ ಅಭಿನಯದ ಹೊಸ ಚಿತ್ರಕ್ಕೆ ನಾಗಣ್ಣ ನಿರ್ದೇಶಕರು ಎಂಬ ಸುದ್ದಿಯನ್ನು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಅದೊಂದು ಹಾರರ್‌ ಚಿತ್ರವಾಗಿದ್ದು, ಇದೇ ಮೊದಲ ಬಾರಿಗೆ ಗಣೇಶ್‌ ಅವರು ಹಾರರ್‌ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆಯೇ ಹೇಳಲಾಗಿತ್ತು.

Advertisement

ಈಗ ಹೊಸ ವಿಷಯವೇನೆಂದರೆ, ಆ ಚಿತ್ರಕೆ ನಾಯಕಿಯಾ ಆಯ್ಕೆಯಾಗಿದೆ. ಗಣೇಶ್‌ಗೆ ಜೋಡಿಯಾಗಿ ರೋನಿಕಾ ಸಿಂಗ್‌ ನಟಿಸುತ್ತಿದ್ದಾರೆ. ರೋನಿಕಾ ಸಿಂಗ್‌ಗೆ ಇದು ಕನ್ನಡದ ಮೊದಲ ಚಿತ್ರ. ಮೂಲತಃ ಪಂಜಾಬ್‌ ಬೆಡಗಿಯಾಗಿರುವ ರೋನಿಕಾ, ಈಗಾಗಲೇ ಪಂಜಾಬ್‌ ಭಾಷೆಯ “ರಮ್ತಾ ಜೋಗಿ’ ಸಿನಿಮಾದಲ್ಲಿ ನಟಿಸಿದ್ದಾರೆ.

ಇದೇ ಮೊದಲ ಸಲ ಕನ್ನಡಕ್ಕೆ ಕಾಲಿಟ್ಟಿರುವ ರೋನಿಕಾ ಸಿಂಗ್‌ ಗಣೇಶ್‌ಗೆ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲ, ಸುಂದರ್‌ ರಾಜ್, ಶೋಭ್‌ರಾಜ್‌ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಅರ್ಜುನ್‌ ಜನ್ಯ ಸಂಗೀತವಿದೆ.

ಗಣೇಶ್‌ ಸದ್ಯಕ್ಕೆ “ಆರೆಂಜ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ, ಗಣೇಶ್‌ ತಮ್ಮ ಗೋಲ್ಡನ್‌ ಮೂವೀಸ್‌ ಬ್ಯಾನರ್‌ನಲ್ಲಿ “ಗೀತಾ’ ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಜುಲೈ 2 ರಂದು ಗಣೇಶ್‌ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದು “ಗೀತಾ’ ಚಿತ್ರದ ಫ‌ಸ್ಟ್‌ಲುಕ್‌ ಹೊರಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next