Advertisement

ಗಣೇಶ್‌ ಕಲರ್‌ಫ‌ುಲ್‌ ಫೈಟ್‌

11:37 AM Sep 26, 2018 | |

ಗಣೇಶ್‌ ಭರ್ಜರಿಯಾಗಿ ಹೊಡೆದಾಡಿದ್ದಾರೆ. ಅದು ಅಂತಿಂಥವರ ಜೊತೆಗಲ್ಲ. ದೊಡ್ಡ ವಿಲನ್‌ ಎದುರು. ಆ ಫೈಟ್‌ ಅನ್ನು ನೀವು “ಕಲರ್‌ಫ‌ುಲ್‌’ ಫೈಟ್‌ ಎನ್ನಬಹುದು. ಕುಂಕುಮ, ಅರಿಶಿನದಲ್ಲಿ ಮೈ ಮಿಂದೇಳುವ ಮಟ್ಟಕ್ಕೆ ಗಣೇಶ್‌ ಹಾಗೂ ವಿಲನ್‌ ಫೈಟ್‌ ಮಾಡಿದ್ದಾರೆ.

Advertisement

ಎಲ್ಲಾ ಓಕೆ ಗಣೇಶ್‌ ಫೈಟ್‌ ಮಾಡಿದ್ದು ಯಾಕೆ ಮತ್ತು ಯಾರ ಜೊತೆಗೆ ಎಂದರೆ ಅದಕ್ಕೆ ಉತ್ತರ “ಆರೆಂಜ್‌’ ಹಾಗೂ ದೇವ್‌ಗಿಲ್‌. ಪ್ರಶಾಂತ್‌ರಾಜ್‌ ನಿರ್ದೇಶನದ “ಆರೆಂಜ್‌’ ಚಿತ್ರದಲ್ಲಿ ಗಣೇಶ್‌ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಈ ಚಿತ್ರದಲ್ಲಿ ವಿಲನ್‌ ಆಗಿ ತೆಲುಗಿನ ದೇವ್‌ ಗಿಲ್‌ ನಟಿಸುತ್ತಿದ್ದಾರೆ.

“ಮಗಧೀರ’ ಚಿತ್ರದಲ್ಲಿ ವಿಲನ್‌ ಆಗಿ ನಟಿಸಿರುವ ದೇವ್‌ ಗಿಲ್‌, ಆ ನಂತರ ಕನ್ನಡದಲ್ಲಿ “ಸಾಗರ್‌’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ಕನ್ನಡದಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಈಗ “ಆರೆಂಜ್‌’ ಚಿತ್ರದಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. “ಝೂಮ್‌’ ನಂತರ ಪ್ರಶಾಂತ್‌ರಾಜ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಎರಡನೇ ಚಿತ್ರ “ಆರೆಂಜ್‌’. 

Advertisement

Udayavani is now on Telegram. Click here to join our channel and stay updated with the latest news.

Next