ಪ್ರತಿಷ್ಠಾಪಿಸದೇ ಸರಳ ರೀತಿಯಲ್ಲಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.
Advertisement
ಸಾರ್ವಜನಿಕರು, ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ಈ ಕೆಳಕಂಡ ಎಲ್ಲ ಮಾರ್ಗಸೂಚಿಗಳನ್ನು ಪರಿಪಾಲಿಸುವ ನಿಭಂದನೆಗೊಳಪಟ್ಟು ಈ ಮೂಲಕ ಆದೇಶಿಸಲಾಗಿದೆ.
ಎರಚದೆ ಅತೀ ಸರಳವಾಗಿ ಆಚರಿಸಬೇಕು. ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯ ಎತ್ತರ ಗರಿಷ್ಠ 2 ಅಡಿ (ಪೀಠ
ಸಹಿತ) ಮೀರದಂತೆ ಹಾಗೂ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಎತ್ತರ ಗರಿಷ್ಠ 4 ಅಡಿ (ಪೀಠ ಸಹಿತ) ಮೀರತಕ್ಕದ್ದಲ್ಲ ಹಾಗೂ ಕಡ್ಡಾಯವಾಗಿ ಪಿಒಪಿ ಬಳಸದೇ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು.
Related Articles
ಪಾಲಿಕೆ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರು ತಯಾರಿಸಿದ ಮೊಬೆ„ಲ್ ಟ್ಯಾಂಕ್ ಗಳಲ್ಲಿ ವಿಸರ್ಜನೆ ನೆರವೇರಿಸಬೇಕು. ಶ್ರೀ ಗಣೇಶೋತ್ಸವ ಕಾಲಕ್ಕೆ ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ದೇವಸ್ಥಾನಗಳಲ್ಲಿ ಜಾಹೀರಾತು ಪ್ರದರ್ಶನಗಳ ಕಾರಣಗಳಿಂದ ಯಾವುದೇ ರೀತಿಯ ಜನದಟ್ಟಣೆಯಾಗದಂತೆ
ಕಟ್ಟುನಿಟ್ಟಾಗಿ ನೋಡಿಕೊಳ್ಳುವುದು. ಕೋವಿಡ್-19 ಸಾಂಕ್ರಾಮಿಕ ರೋಗ ಕುರಿತು ಜಾಗƒತಿ ಮೂಡಿಸುವ ಸಾಮಾಜಿಕ, ಆರೋಗ್ಯ ಸಂದೇಶಗಳನ್ನು ಬಿಂಬಿಸುವ ಜಾಹೀರಾತುಗಳಿಗೆ ಪ್ರಾಧಾನ್ಯತೆ ನೀಡಬೇಕು.
Advertisement
ಸಾಂಸ್ಕೃತಿಕ/ ಮನರಂಜನಾ/ ಭಜನೆ/ ಕೀರ್ತನೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಬದಲಾಗಿ ಆರೋಗ್ಯಕ್ಕೆ ಸಂಬಂಧಿ ಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೊರೊನಾ, ಮಲೇರಿಯಾ, ಡೆಂಘೀ ಇತ್ಯಾದಿ ರೋಗಗಳನ್ನು ತಡೆಗಟ್ಟಲು ಆದ್ಯತೆ ನೀಡಬೇಕು. ಸಾರ್ವಜನಿಕ ನೈರ್ಮಲ್ಯದ ಬಗ್ಗೆ ಜಾಗƒತಿ ಮೂಡಿಸುವುದು ಮತ್ತು ಧ್ವನಿವರ್ಧಕದಿಂದಶಬ್ದ ಮಾಲಿನ್ಯ ಉಂಟಾಗದಂತೆ ನಿಯಮಗಳನ್ನು ಪಾಲಿಸಬೇಕು. ಗಣೇಶೋತ್ಸವ ಆಚರಣೆ ಕಾಲಕ್ಕೆ ಆರತಿ ಸಮಯದಲ್ಲಿ ಗರಿಷ್ಠ 5 ಜನ ಸೇರಬೇಕು. ಸಾರ್ವಜನಿಕರಿಗೆ ಶ್ರೀ ಗಣೇಶನ ದರ್ಶನದ ಸೌಲಭ್ಯವನ್ನು ಕೇಬಲ್ ನೆಟ್‌ವರ್ಕ್, ವೆಬ್‌ಸೆ„ಟ್ ಮತ್ತು ಫೇಸ್‌ಬುಕ್ ಇತ್ಯಾದಿಗಳ ಮೂಲಕ ಆನ್ ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು. ಶ್ರೀ ಗಣೇಶ ಮುರ್ತಿಯನ್ನು ಪ್ರತಿಷ್ಠಾಪಿಸಿದ ದೇವಸ್ಥಾನಗಳಲ್ಲಿ ನಿತ್ಯ ಸ್ಯಾನಿಟೆ„ಸೇಷನ್ ಮಾಡುವುದು ಹಾಗೂ ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿ ಗಳಿಗೆ ಸ್ಯಾನಿಟೆ„ಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ದರ್ಶನಕ್ಕಾಗಿ ಬರುವ ಭಕ್ತರಿಗೆ ಕನಿಷ್ಠ 6 ಅಡಿ
ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಪಾಲನೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದೇವಸ್ಥಾನಕ್ಕೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮವನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಗಣೇಶೋತ್ಸವದಲ್ಲಿ ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜನೆಯ ಕಾಲಕ್ಕೆ ಯಾವುದೇ ರೀತಿಯ ಮೆರವಣಿಗೆಯನ್ನು ಹೊರಡಿಸಬಾರದು. ಶ್ರೀ ಗಣೇಶ ವಿರ್ಸಜನೆಯ ಸ್ಥಳದಲ್ಲಿ ಆರತಿ ಬೆಳಗುವ ಪೂಜಾ ವಿಧಿ
ವಿಧಾನವನ್ನು ಮನೆ ಹಾಗೂ ದೇವಸ್ಥಾನಗಳಲ್ಲಿಯೇ ನೆರವೇರಿಸಬೇಕು. ಗಣೇಶ ವಿಸರ್ಜನೆಯ ಸ್ಥಳದಲ್ಲಿ ಅಗತ್ಯ ಸಮಯದವರೆಗೆ ಮಾತ್ರ ಇದ್ದು, ಹೆಚ್ಚಿನ ವೇಳೆ ಆ ಸ್ಥಳದಲ್ಲಿ ನಿಲ್ಲಬಾರದು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಣ್ಣ ಮಕ್ಕಳು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯದಿಂದ/ ಕೋಮ್ ಆರ್ಬಿಡ್‌ಗಳಿಂದ ಬಳಲುತ್ತಿರುವವರು ಶ್ರೀ ಗಣೇಶ ಪ್ರತಿಷ್ಠಾಪನೆ/ವಿಸರ್ಜನೆಯ ಸ್ಥಳಗಳಿಗೆ ಹೋಗದಂತೆ ನೋಡಿಕೊಳ್ಳುವುದು. ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ಎಲ್ಲ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಏಕಕಾಲಕ್ಕೆ ಮಾಡಬಾರದು.
ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಕಡ್ಡಾಯವಾಗಿ ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ನಗರದ ವ್ಯಾಪ್ತಿಯಲ್ಲಿ ಪಾಲಿಕೆಯಿಂದ ಈಗಾಗಲೇ
ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್ ಟ್ಯಾಂಕ್ ಗಳಲ್ಲಿ ಹಾಗೂ ಜಿಲ್ಲೆಯ ಇನ್ನುಳಿದ ಸ್ಥಳಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ/ಸ್ಥಳೀಯ ಸಂಸ್ಥೆಗಳ ವತಿಯಿಂದ ಪೂರೈಸಲಾದ ಮೊಬೈಲ್ ಟ್ಯಾಂಕ್‌ಗಳನ್ನು ಬಳಸಿಕೊಂಡು ನೆರವೇರಿಸಬೇಕು. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.