Advertisement
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಹಿಂದೂ ಯುವ ಸೇವೆಯ 27ನೇ ವರ್ಷದ ಮಂಗಳೂರು ಗಣೇಶೋತ್ಸವ ಸಹಿತ ಬಹುತೇಕ ಭಾಗಗಳಲ್ಲಿ ಗಣೇಶನ ವಿಗ್ರಹಗಳನ್ನು ರವಿವಾರ ಸಂಜೆಯೇ ಮೆರವಣಿಗೆ ಮೂಲಕ ತರಲಾಯಿತು. ಈ ನಡುವೆ ಮನೆಗಳಲ್ಲಿ ಪೂಜೆ ನಡೆಸುವವರು ಅಲಂಕಾರ, ಪೂಜೆಗೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದುದು ಸಾಮಾನ್ಯವಾಗಿತ್ತು.
ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಎಲ್ಲರೂ ಕೈ ಜೋಡಿಸಬೇಕಾಗಿದೆ. ಗಣೇಶನ ಮೂರ್ತಿಯನ್ನು ತಯಾರಿಸಲು ಉಪಯೋಗಿಸುವಂತಹ ಲೋಹದ ಸಂಬಂಧ ಬಣ್ಣಗಳಲ್ಲಿ ಸೀಸ, ಇನ್ನಿತರ ವಿಷಕಾರಿ ರಾಸಾಯನಿಕಗಳಿರುತ್ತವೆ. ಪ್ರತಿ 100 ಗ್ರಾಂ ಲೋಹದ ಬಣ್ಣದಲ್ಲಿ 12 ಗ್ರಾಂ ಗಳಷ್ಟು ಸೀಸದ ಅಂಶ ಇದ್ದು, ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಇಂತಹ ಮೂರ್ತಿಗಳನ್ನು ಖರೀದಿ ಮಾಡದೆ ಇದ್ದರೆ ಉತ್ತಮ. ಜತೆಗೆ ಈ ಲೋಹ ಸಂಬಂಧಿ ಬಣ್ಣಗಳಿಂದ ಎಲ್ಲ ತರಹದ ಜೀವಿಗಳಿಗೂ ಅಪಾಯವಾಗುವುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹೀಗಾಗಿ ಮೂರ್ತಿಗಳ ವಿಸರ್ಜನೆಯಿಂದ ಕೆರೆ ಬಾವಿ ಕೊಳಗಳಲ್ಲಿ ನೀರು ಮಲಿನವಾಗದಂತೆ ಎಚ್ಚರ ವಹಿಸಬೇಕಾಗಿದೆ. ಬಕೇಟ್‌ಗಳಲ್ಲಿ ವಿಸರ್ಜಿಸಿ ಮನೆಯಲ್ಲಿ ಆಚರಿಸುವವರೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿರುವ ಮೂರ್ತಿಗಳನ್ನೇ ಕೊಂಡುಕೊಳ್ಳಿ. ಗಣೇಶನ ವಿಗ್ರಹಗಳನ್ನು ಗೊತ್ತು ಪಡಿಸಿದ ಜಾಗದಲ್ಲಿ, ಮನೆಗಳಲ್ಲಿ ಬಕೇಟ್‌ಗಳಲ್ಲಿ ವಿಸರ್ಜಿಸಿ. ಹೂ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೆರೆ, ನದಿ ಅಥವಾ ಸಮುದ್ರದ ನೀರಿಗೆ ಹಾಕಬೇಡಿ. ದೇಗುಲಗಳಲ್ಲಿ ಪೂಜೆಗಳಿಗೆ ಸಿದ್ಧತೆ
ಗಣೇಶ ಹಬ್ಬಕ್ಕಾಗಿ ಎಲ್ಲೆಡೆ ಸಂಭ್ರಮದ ತಯಾರಿ ನಡೆಯುತ್ತಿದೆ. ವಿವಿಧ ದೇವಸ್ಥಾನಗಳಲ್ಲಿ ಈಗಾಗಲೇ ಹಬ್ಬದ ಸಿದ್ಧತೆ ಮುಗಿದಿದೆ. ಪೊಲೀಸ್ ಲೇನ್ ಶ್ರೀ ಮುನೀಶ್ವರ ಮಹಾಗಣಪತಿ ದೇವಸ್ಥಾನ, ಕದ್ರಿ ದೇವಸ್ಥಾನ, ಕುದ್ರೋಳಿ ಕ್ಷೇತ್ರ, ಬಿಕರ್ನಕಟ್ಟೆ ಶ್ರೀ ಕ್ಷೇತ್ರ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಮಣ್ಣಗುಡ್ಡೆ ಹರಿದಾಸ್ ಲೇನ್ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ದೇವಸ್ಥಾನ ಸಹಿತ ವಿವಿಧೆಡೆ ಶ್ರೀ ಸಿದ್ಧಿವಿನಾಯಕನಿಗೆ ವಿವಿಧ ಪೂಜೆ ಪುರಸ್ಕಾರಗಳು ನಡೆಯಲಿವೆ.
Related Articles
Advertisement