ಮುಂಬಯಿ: ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಜನ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ಗಣೇಶ ವಿಗ್ರಹವನ್ನು ನೋಡಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದ್ಧೂರಿಯಾಗಿ ಏಕದಂತನ ಹಬ್ಬವನ್ನು ಆಚರಿಸಿಕೊಳ್ಳಲಾಗುತ್ತಿದೆ.
ಮನೆ- ಮಂದಿರದಲ್ಲಿ ಗಣೇಶನಿಗೆ ಪೂಜೆಯನ್ನು ಮಾಡಿ ಹಬ್ಬದ ವಿಶೇಷ ತಿಂಡಿ – ತಿನಸುಗಳನ್ನು ಮಾಡಿ ಸವಿಯಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಇಂಡಿಗೋ ಏರ್ ಲೈನ್ ಗಣಪತಿ ಹಬ್ಬಕ್ಕೆ ವಿಶೇಷ ಪೋಸ್ಟ್ ವೊಂದನ್ನು ಶುಭಕೋರಿದೆ. ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ಬಳಸಿಕೊಂಡು ಇಂಡಿಗೋ ಏರ್ ಲೈನ್ಸ್ ಗಣಪತಿಯನ್ನು ಸೃಷ್ಟಿಸಿದ್ದಾರೆ. “”ಬಪ್ಪಾ ಮನೆಗೆ ಬರುತ್ತಿದ್ದಾರೆ!” ಎಂದು ಬರೆದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಗಣಪತಿ ವಿಮಾನದ ಸೀಟ್ ನಲ್ಲಿ ಕೂತು ಮೋದಕವನ್ನು ಸೇವಿಸುತ್ತಿರುವ ಎಐ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 26 ಸಾವಿರಕ್ಕೂ ಅಧಿಕ ಮಂದಿ ಫೋಟೋವನ್ನು ಲೈಕ್ ಮಾಡಿದ್ದಾರೆ.
“ವಾವ್!! ಈ ಸುಂದರವಾದ ಪೋಸ್ಟ್. ಈ ಕಲ್ಪನೆಯ ಹಿಂದೆ ಯಾರೇ ಇದ್ದಾರೋ ಅವರನ್ನು ನಾನು ಪ್ರಶಂಸಿಸುತ್ತೇನೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಇಂಡಿಗೋದಲ್ಲಿ ಇನ್ಮುಂದೆ ಮೋದಕದ ಮೆನುವನ್ನು ಸೇರಿಸಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.