Advertisement

ಹೊಸ ತೇಜಿಗೆ ನಾಂದಿಯಾಗಲಿ ವಿಘ್ನ ವಿನಾಶಕನ ಚತುರ್ಥಿ

11:04 PM Aug 21, 2020 | mahesh |

ಮಣಿಪಾಲ: ಭಾದ್ರಪದ ಶುಕ್ಲ ಚತುರ್ಥಿ ಮತ್ತೆ ಬಂದಿದೆ.  ಬಾಲಗಂಗಾಧರ ತಿಲಕರು ಸಾರ್ವಜನಿಕವಾಗಿ ವಿಜೃಂಭಣೆಯಿಂದ ಗಣೇಶ ಚತುರ್ಥಿಯ ಆಚರಣೆಯನ್ನು ಆರಂಭಿಸಿದ್ದು ಸಾಂಸ್ಕೃತಿಕ ಮತ್ತು ಧಾರ್ಮಿಕ ಜನಜೀವನಕ್ಕೆ ಹೊಸ ತೇಜಿ, ಚೈತನ್ಯವನ್ನು ಒದಗಿಸುವುದಕ್ಕಾಗಿ. ಅಂದಿನಿಂದ ಇಂದಿನ ವರೆಗೆ ವಿಘ್ನವಿನಾಶಕನ ಚತುರ್ಥಿಯ ಆಚರಣೆಯು ಆ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತ ಬಂದಿದೆ. ದೇಶದ ಉದ್ದಗಲಕ್ಕೆ ಚೌತಿಯ ಸಂಭ್ರಮವು ಹಲವು ವಾರಗಳ ಕಾಲ ಜನಜೀವನಕ್ಕೆ, ಸಂಸ್ಕೃತಿಗೆ ಮಾತ್ರವಲ್ಲದೆ ಆರ್ಥಿಕತೆಗೂ ವೇಗವನ್ನು ನೀಡುವಂಥದ್ದು.

Advertisement

ಪ್ರಸ್ತುತ ಕೊರೊನಾ ಸಂಕಷ್ಟವು ಹಲವು ತಿಂಗಳುಗಳಿಂದ ಹಲವು ಆಯಾಮಗಳಲ್ಲಿ ಜನರ ಬದುಕು, ಆರ್ಥಿಕತೆ, ಆರೋಗ್ಯ, ಸಹಜತೆಗಳನ್ನು ಬಾಧಿಸಿದೆ. ಅದು ಸಂಪೂರ್ಣವಾಗಿ ಮಾಯವಾಗುವ ಲಕ್ಷಣಗಳಿಲ್ಲ. ನಾವೇ ಅದಕ್ಕೆ ಹೊಂದಿಕೊಂಡು ಹೊಸತಾದ ಒಂದು ಜೀವನ ಮಾದರಿಯನ್ನು ರೂಪಿಸಿಕೊಳ್ಳಬೇಕಿದೆ. ನಿಧಾನವಾಗಿ ಆ ಹೊಸ ಸಹಜತೆಯು ನಮ್ಮ ಬದುಕಿನೊಳಕ್ಕೆ ಪ್ರವೇಶ ಪಡೆಯುತ್ತಿರುವುದನ್ನೂ ಇತ್ತೀಚೆಗಿನ ದಿನಗಳಲ್ಲಿ ನಾವು ಗಮನಿಸುತ್ತಿದ್ದೇವೆ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಕೈ ತೊಳೆದುಕೊಳ್ಳುವುದು ಇತ್ಯಾದಿಗಳನ್ನು ಪಾಲಿಸಿಕೊಂಡೇ ದಿನಚರಿಗಳಲ್ಲಿ ತೊಡಗಿಕೊಳ್ಳುವುದು, ಕಚೇರಿಗಳಲ್ಲಿ ಉದ್ಯೋಗ ನಿರ್ವಹಣೆ, ವ್ಯಾಪಾರ – ವ್ಯವಹಾರಗಳನ್ನು ಕೈಗೊಳ್ಳುವುದು, ಹಬ್ಬಗಳನ್ನು ಸಂಭ್ರಮಿಸುವುದು ನಮಗೆ ರೂಢಿಯಾಗುತ್ತಿದೆ.

ಗಣಪತಿಯು ವಿಘ್ನ ನಿವಾರಕನೆಂದು ಪ್ರಸಿದ್ಧ. ಹಿಂದೆಂದೂ ಕಂಡಿರದ ಕೊರೊನಾದಂತಹ ಸಾಂಕ್ರಾಮಿಕದ ನಡುವೆಯೇ ಸಹಜ ಜನಜೀವನವನ್ನು ಕಂಡುಕೊಳ್ಳಲು, ಆರ್ಥಿಕ ತೇಜಿಯು ಮರುಕಳಿಸಲು, ವ್ಯಾಪಾರ ವ್ಯವಹಾರಗಳ ವೇಗವರ್ಧಿಸಲು ಇಂದಿನ ಗಣೇಶ ಚತುರ್ಥಿಯು ನಾಂದಿಯಾಗಲಿ ಎಂಬುದು ಉದಯವಾಣಿ ಕಳಕಳಿ.

Advertisement

Udayavani is now on Telegram. Click here to join our channel and stay updated with the latest news.

Next