Advertisement

Mangaluru ವಿ.ವಿ. ಗಣೇಶೋತ್ಸವ ವಿವಾದ : ರಾಜ್ಯಪಾಲರಿಗೆ ಸಂಸದ, ಶಾಸಕರ ಮನವಿ

11:57 PM Sep 09, 2023 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿ ಟೋರಿಯಂನಲ್ಲಿ ಗಣಪತಿ ಉತ್ಸವವನ್ನು ಆಚರಿಸುವ ವಿಚಾರದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಪದ್ಧತಿಯನ್ನು ಮುಂದುವರಿಸುವುದು ಸೂಕ್ತ. ಅದರಂತೆ ಸೆ. 19ರಂದು ಮಂಗಳ ಸಭಾಂಗಣದಲ್ಲಿ ಗಣೇಶೋತ್ಸವ ನಡೆಸಲು ಅನುವು ಮಾಡಿಕೊಡಬೇಕು ಎಂದು ಕರಾವಳಿ ಸಂಸದ, ಶಾಸಕರು, ಸಿಂಡಿಕೇಟ್‌ ಮಾಜಿ ಸದಸ್ಯರು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

Advertisement

2022ರ ಡಿ. 20ರಂದು ನಡೆದ ಸಿಂಡಿಕೇಟ್‌ ಸಭೆಯಲ್ಲಿ ಸುದೀರ್ಘ‌ ಚರ್ಚೆ ಮಾಡಿ ಗಣೇಶೋತ್ಸವವನ್ನು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇ ಶನಾಲಯದ ಮೂಲಕವೇ ನಡೆಸ ಬೇಕೆಂದು ನಿರ್ಣಯಿಸಲಾಗಿತ್ತು. ಆದರೆ ಮಂಗಳಾ ಆಡಿಟೋರಿಯಂನಲ್ಲಿ ಪೂಜಿಸದೆ ಸೂಕ್ತವಲ್ಲದ ಸ್ಥಳಕ್ಕೆ ಸ್ಥಳಾಂತರಿಸುವ ನಿರ್ಧಾರವು ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ತಿಳಿಸಲಾಗಿದೆ.

ಸಂಸದ ನಳಿನ್‌ ಕುಮಾರ್‌ ಕಟೀಲು, ದ.ಕ. ಮತ್ತು ಉಡುಪಿ ಜಿಲ್ಲೆಯ ಶಾಸಕರಾದ ಸುನೀಲ್‌ ಕುಮಾರ್‌, ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಭಾಗೀರಥಿ ಮುರುಳ್ಯ, ಗುರ್ಮೆ ಸುರೇಶ್‌ ಶೆಟ್ಟಿ, ನಿಕಟ ಪೂರ್ವ ಸಿಂಡಿಕೇಟ್‌ ಸದಸ್ಯ ರಮೇಶ ಕೆ. ನಿಯೋಗದಲ್ಲಿದ್ದರು.

ವಿದ್ಯಾರ್ಥಿಗಳು ಪ್ರತೀ ವರ್ಷವು ಪಾವತಿಸುವ ಸಾಂಸ್ಕೃತಿಕ ನಿಧಿಯಲ್ಲಿ ಗಣೇಶೋತ್ಸವಕ್ಕೆ ಖರ್ಚು ಮಾಡಲು ಹಣವಿದ್ದರೂ ಹಣವಿಲ್ಲವೆಂದು ಸಮಾಜಕ್ಕೆ ತಪ್ಪು ಸಂದೇಶ ನೀಡು ತ್ತಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next