Advertisement

ಹೂವು-ಹಣ್ಣು-ಕಬ್ಬು ಮಾರುಕಟ್ಟೆಗೆ ಲಗ್ಗೆ; ಶೃಂಗಾರಗೊಂಡಿವೆ‌ ಮಂಟಪಗಳು

10:43 PM Sep 01, 2019 | Sriram |

ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಗ್ರಹ ಪ್ರತಿಷ್ಠಾಪನೆ ಸಮಿತಿಗಳು ಸಕಲ ಸಿದ್ಧತೆ ನಡೆಸಿವೆ.

Advertisement

ಹಣ್ಣುಹಂಪಲು ಮಾರಾಟಗಾರರು ವ್ಯಾಪಾರ ದಲ್ಲಿ ನಿರತರಾಗಿದ್ದು, ಹಾಸನ, ಅರಕಲಗೂಡು ಸಹಿತ ವಿವಿಧೆಡೆಗಳಿಂದ ಕಬ್ಬು, ವಿವಿಧ ಬಗೆಗಳ ಹೂವುಗಳ ಮಾರಾಟಗಾರರು ತಾಲೂಕಿಗೆ ಆಗಮಿಸಿದ್ದಾರೆ.

ಜಗಮಗಿಸುವ ಅಲಂಕಾರ
ವಿಘ್ನ ನಿವಾರಕನ ಆರಾಧನೆಗೆ ವಿಗ್ರಹ ತಯಾರಿ ಪೂರ್ಣಗೊಂಡಿದ್ದು, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಗಣೇಶನ ಹಿರಿಮೆ-ಗರಿಮೆ ಸಾರುವ ರೂಪಕಗಳ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ವಿದ್ಯುತ್‌ ದೀಪಾಲಂಕಾರದ, ವರ್ಣ ಚಿತ್ತಾರಗಳ ತಯಾರಿ ಜತೆಗೆ ಬಗೆ ಬಗೆಯ ಹೂವಿನ ಅಲಂಕಾರ ಸಿದ್ಧತೆಗಳು ಜೋರಾಗಿವೆ.

ಹೂಗಳ ರಾಶಿ
ತಾ|ಗೆ ಪ್ರತಿ ವರ್ಷ ಹೊರ ಜಿಲ್ಲೆಗಳಿಂದ ಹೂಗಳು ಮಾರಾಟಕ್ಕಾಗಿ ಬರುತ್ತವೆ. ಈ ವರ್ಷವೂ ಹಾಸನ, ಅರಕಲಗೂಡಿನಿಂದ ಕುಟುಂಬವೊಂದು 500 ಮಾರು ಹೂಗಳ ರಾಶಿ ತಂದಿದೆೆ. ಲಾಭ-ನಷ್ಟ ನೋಡದೆ ವ್ಯಾಪಾರ ಮಾಡುತ್ತಿದ್ದು, ಮಳೆಯಿಂದಾಗಿ ಹೂ ಸಂರಕ್ಷಿಸುವುದು ಸವಾಲಾಗಿದೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಹಣ್ಣು, ತರಕಾರಿಗಳ ವ್ಯಾಪಾರ ಜೋರಾಗಿದ್ದು, ದರ ಪ್ರತಿ ಬಾರಿಯಂತೆ ಕೊಂಚ ಏರಿಕೆಯಾಗಿದೆ.

ಹೂವು / ಹಣ್ಣು ದರ
ಮಲ್ಲಿಗೆ -250 ರೂ. (ಚೆಂಡು)
ಗೊಂಡೆ ಹೂ-80 ರೂ. (ಮಾರು)
ಸೇವಂತಿಗೆ-50 ರೂ.
ಗುಲಾಬಿ ಮಾಲೆ-60 ರೂ.
ಮಾರಿ ಗೋಲ್ಡ್‌-80 ರೂ.
ಕಾಕಡ-60 ರೂ.
ಕೆಂಪು ಸೇವಂತಿಗೆ-60 ರೂ.
ಸೇಬು 100/150 ರೂ. (ಕೆ.ಜಿ.)
ಮುಸುಂಬಿ-80 ರೂ.
ದಾಳಿಂಬೆ-100 ರೂ.
ದ್ರಾಕ್ಷಿ -100 ರೂ.
ಬಾಳೆ ಹಣ್ಣು- 80/100 ರೂ.
ಕಬ್ಬು (ಒಂದು ದಂಡು)-40 ರೂ.

Advertisement

ಬಂಟ್ವಾಳ: ಗಣೇಶ ಚತುರ್ಥಿ ಅಂಗವಾಗಿ ಅಪಾರ ಪ್ರಮಾಣದಲ್ಲಿ ಹೂವು, ಹಣ್ಣು, ತರಕಾರಿ, ಕಬ್ಬು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಸಾರ್ವಜನಿಕ ಶ್ರೀ ಗಣೇಶೋತ್ಸವ, ಮನೆ ಮನೆಯಲ್ಲಿ ನಡೆಯುವ ಗಣೇಶ ಪೂಜೆಗೆ ಕಬ್ಬು, ಹಣ್ಣು ಹಂಪಲು, ಅಲಂಕಾರಕ್ಕೆ ಹೂ, ವಿವಿಧ ಭಕ್ಷಗಳಿಗೆ ಅಗತ್ಯ ಸಾಮಗ್ರಿಗಳ ಮಾರಾಟದ ಭರಾಟೆ ಜೋರಾಗಿದೆ. ತರಕಾರಿ, ಹೂವು, ಹಣ್ಣು, ಕಬ್ಬು ದುಬಾರಿಯಾಗಿವೆ. ಮಲ್ಲಿಗೆ ಹೂವು ಖರೀದಿಗೆ ಮುಂಗಡ ಬುಕ್ಕಿಂಗ್‌ ಮಾಡಬೇಕಾಗಿದೆ. ನಗರ ಮತ್ತು ಗ್ರಾಮಾಂತರದ ಎಲ್ಲ ತರಕಾರಿ ಅಂಗಡಿ, ಜೀನಸು ಅಂಗಡಿ, ಹೊಟೇಲ್‌ಗ‌ಳ ಮುಂಭಾಗ ದಲ್ಲಿ ಮಾರಾಟಕ್ಕೆ ಕಬ್ಬಿನ ರಾಶಿಯೇ ಇದೆ.

 ಹಬ್ಬದ ದಿನ ವ್ಯಾಪಾರ
ಹಾಸನ, ಹೊನ್ನಾಳಿ, ಹೊಸಳ್ಳಿ, ಮಂಡ್ಯದ ಖ್ಯಾತನ ಹಳ್ಳಿಗಳಿಂದ ಹೂವು, ಹಣ್ಣು, ತರಕಾರಿಯನ್ನು ಲಾರಿಯಲ್ಲಿ ತರುತ್ತೇವೆ. ಲೋಡ್‌-ಅನ್‌ಲೋಡ್‌, ಡ್ಯಾಮೇಜ್‌ ಇತ್ಯಾದಿ ಭರಿಸಬೇಕಾಗಿದೆ. ಹಬ್ಬದ ದಿನ ಇಲ್ಲಿ ವ್ಯಾಪಾರ ಮಾಡುತ್ತೇವೆ.
 - ರಂಗಪ್ಪ, ಹೊನ್ನಾಳಿಯ ವ್ಯಾಪಾರಿ

ಹೂವು / ಹಣ್ಣು ದರ
ಮಲ್ಲಿಗೆ – 600 ರೂ. (ಅಟ್ಟಿ)
ಇತರ ಹೂವುಗಳು-
30-60 ರೂ. (ಮೊಳ)
ಕಬ್ಬು (ಒಂದು ದಂಡು)-50 ರೂ.
ಎರಡಕ್ಕಿಂತ ಹೆಚ್ಚು-40 ರೂ.

Advertisement

Udayavani is now on Telegram. Click here to join our channel and stay updated with the latest news.

Next