Advertisement

ಗೀತಾ ಜೊತೆ ಗಣೇಶ್‌ ಬ್ಯುಸಿ

05:49 AM Jan 02, 2019 | |

ಇತ್ತೀಚೆಗಷ್ಟೇ “ಆರೆಂಜ್‌’ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸದ್ಯ “ಗೀತಾ’ ಜೊತೆ ಬ್ಯುಸಿಯಾಗಿದ್ದಾರೆ. ಹೌದು, ಗಣೇಶ್‌ ಅಭಿನಯಿಸುತ್ತಿರುವ ಮುಂಬರುವ ಚಿತ್ರ “ಗೀತಾ’ದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಕೊಲ್ಕತ್ತಾ, ಮನಾಲಿ ಸುತ್ತಮುತ್ತ ಚಿತ್ರತಂಡ ಸುಮಾರು 15ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸಿದೆ.

Advertisement

ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ವಾರದಿಂದ “ಗೀತಾ’ದ ದ್ವಿತೀಯ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆಯಲಿದೆ. ಸೈಯದ್‌ ಸಲಾಂ ಹಾಗೂ ಶಿಲ್ಪಾ ಗಣೇಶ್‌ ಅವರು ನಿರ್ಮಿಸುತ್ತಿರುವ, “ಗೀತಾ’ ಚಿತ್ರದಲ್ಲಿ ಗಣೇಶ್‌ ಅವರಿಗೆ ನಾಯಕಿಯರಾಗಿ ಶಾನ್ವಿ ಶ್ರೀವಾಸ್ತವ್‌, ಪಾರ್ವತಿ, ಪ್ರಯಾಗ ಮಾರ್ಟಿನ್‌ ಜೋಡಿಯಾಗುತ್ತಿದ್ದಾರೆ.

ಉಳಿದಂತೆ ಪಾರ್ವತಿ, ಸುಧಾರಾಣಿ, ಅಚ್ಯುತರಾವ್‌,ದೇವರಾಜ್‌, ರಂಗಾಯಣ ರಘು ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. “ಗೀತಾ’ ಚಿತ್ರಕ್ಕೆ ವಿಜಯ ನಾಗೇಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಜ್ಞಾನೇಶ್‌ ಮಠದ್‌ ಅವರ ಸಂಕಲನವಿದೆ.  

Advertisement

Udayavani is now on Telegram. Click here to join our channel and stay updated with the latest news.

Next