Advertisement

ಗಣೇಶ್‌ “99′ಹಾಡು ಹಬ್ಬ

05:57 AM Mar 03, 2019 | |

ಗಣೇಶ್‌ ಸದ್ದಿಲ್ಲದೇ ಒಂದರ ಮೇಲೊಂದು ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. “ಗೀತಾ’, “ಗಿಮಿಕ್‌’ ಹಾಗೂ “99′ ಚಿತ್ರಗಳಲ್ಲಿ ಗಣೇಶ್‌ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಷ್ಟೇ ಆರಂಭಗೊಂಡಿದ್ದ  “99′ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಒಂದು ಹಾಡಷ್ಟೇ ಬಾಕಿ ಇದೆ. ಈಗ ಚಿತ್ರದ ಮೊದಲ ಹಾಡು ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. “ಹೀಗೆ ದೂರ ಹೋಗುವ ಮುನ್ನ’ ಎಂಬ ಹಾಡನ್ನು ಸೋಮವಾರ ರಿಲೀಸ್‌ ಮಾಡಲು ಚಿತ್ರತಂಡ ತೀರ್ಮಾನಿಸಿದೆ.

Advertisement

ಕವಿರಾಜ್‌ ಸಾಹಿತ್ಯವಿರುವ ಈ ಹಾಡಿಗೆ ವಿಜಯ್‌ ಪ್ರಕಾಶ್‌ ಧ್ವನಿಯಾಗಿದ್ದಾರೆ. ರಾಮು ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ವಿಶೇಷವೆಂದರೆ ಇದು ಅರ್ಜುನ್‌ ಜನ್ಯಾ ಸಂಗೀತದ 100ನೇ ಚಿತ್ರ. ಈಗಾಗಲೇ ಆನಂದ್‌ ಆಡಿಯೋ ಹಾಡುಗಳ ಹಕ್ಕನ್ನು ಖರೀದಿಸಿದ್ದು, ಅರ್ಜುನ್‌ 100ನೇ ಸಿನಿಮಾಕ್ಕೆ 50 ಲಕ್ಷ ರೂಪಾಯಿ ನೀಡಿದೆ.

ಈ ಬಗ್ಗೆ ಮಾತನಾಡುವ ನಿರ್ಮಾಪಕ ರಾಮು ಅವರು, “ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಎಲ್ಲಾ ಹಾಡುಗಳು ಚೆನ್ನಾಗಿವೆ. ಇದು ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನದ 100ನೇ ಚಿತ್ರ ಎಂಬುದು ಮತ್ತೂಂದು ವಿಶೇಷ. ಆನಂದ್‌ ಆಡಿಯೋ 50 ಲಕ್ಷ ನೀಡಿ ಹಾಡುಗಳ ಹಕ್ಕನ್ನು ಖರೀದಿಸಿದೆ’ ಎನ್ನುವುದು ರಾಮು ಮಾತು. ಚಿತ್ರದ ಎಂಟು ಹಾಡುಗಳ ಪೈಕಿ, ಐದು ಹಾಡುಗಳನ್ನು ಖ್ಯಾತ ಗಾಯಕಿ ಶ್ರೇಯಾ ಘೋಶಾಲ್‌ ಹಾಡಿದ್ದಾರೆ.

ಹೆಸರಾಂತ ಗಾಯಕರಾದ ವಿಜಯ್‌ ಪ್ರಕಾಶ್‌, ಅರ್ಜಿತ್‌ ಸಿಂಗ್‌, ಮೋಹಿತ್‌ ಚೌಹಾನ್‌, ಪಲಾಕ್‌ ಮುಚ್ಚಲ್‌, ಅರ್ಮಾನ್‌ ಮಲ್ಲಿಕ್‌ ಧ್ವನಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ಆಡಿಯೋ ರಿಲೀಸ್‌ ಆಗಲಿದ್ದು, ಯುಗಾದಿ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಚಿತ್ರದ ಎಂಟು ಹಾಡುಗಳನ್ನು ಕವಿರಾಜ್‌ ಅವರೆ ಬರೆದಿದ್ದಾರೆ. ಗಣೇಶ್‌ ನಾಯಕರಾಗಿರುವ ಈ ಚಿತ್ರಕ್ಕೆ ಭಾವನ ನಾಯಕಿ. ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್‌ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next