ಜಮಖಂಡಿ: ಅಧಿಕಾರಿಗಳು ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವಂತೆ ಶಾಸಕ ಆನಂದ ನ್ಯಾಮಗೌಡ ಸೂಚನೆ ನೀಡಿದರು.
ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿಮಾತನಾಡಿದ ಅವರು, ಚುನಾಯಿತ ನಗರಸಭೆ ಸದಸ್ಯರ ಮಾತು ಕೇಳದಿದ್ದಲ್ಲಿ ಅಧಿಕಾರಿಗಳಿಂದ ನಗರ ಹೇಗೆ ಅಭಿವೃದ್ಧಿ ಹೊಂದಲು ಸಾಧ್ಯ. ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡದ ಅಧಿಕಾರಿಗಳ ಮಾಹಿತಿ ನೀಡಿ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ ಮಾತನಾಡಿ, ಮಾರ್ಚ್‌ದೊಳಗೆ ಕ್ರಿಯಾಯೋಜನೆ ಮಾಡಿಕೊಳ್ಳುವ ಅವಶ್ಯಕತೆ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಗೆ ಮುಂಚೆ ಬಜೆಟ್ ಸಭೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು. ವಾಹನ ಚಾಲಕರ ವೇತನ ಚರ್ಚೆಗೆ ಸಂಬಂಧಿ ಸಿದಂತೆ ನಗರಸಭೆ ಕಾಂಗ್ರೆಸ್ ಸದಸ್ಯ ಪರಮಾನಂದ ಗವರೋಜಿ ಮತ್ತು ಬಿಜೆಪಿ ಸದಸ್ಯ ಗುರುಪಾದ ಮೆಂಡಿಗೇರಿ ನಡುವೆ ಮಾತಿನ ಚಕಮಕಿಯಿಂದ ಕೆಲಕಾಲ ಸಭೆ ಸ್ಥಗಿತಗೊಂಡಿತು.
ನಗರಸಭೆ ಹಿರಿಯ ಸದಸ್ಯ ರಾಜು ಪಿಸಾಳ ಮಾತನಾಡಿ, ನಗರಸಭೆ ಬಜೆಟ್ ಕುರಿತು ನಮಗೆ ಯಾವುದೆ ಮಾಹಿತಿ ಇಲ್ಲ. ಬಜೆಟ್ ಸಭೆ ಮುಂದೂಡುವಂತೆ ಹೇಳಿದರು. ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಸಭೆಯಲ್ಲಿ ಆದ್ಯತೆ ನೀಡಬೇಕು ಎಂದರು. ಬಜೆಟ್ ಸಭೆ ಮುಂದೂಡುವ ಮೂಲಕ ನಿಗದಿತ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ನಗರಸಭೆ ಬಜೆಟ್ ಸಭೆಯನ್ನು ಮೂರ್‍ನಾಲ್ಕು ದಿನದ ನಂತರ ನಿಗದಿ ಪಡಿಸುವಂತೆ ಸೂಚಿಸಿದರು.
ನಗರಸಭೆ ಅಧ್ಯಕ್ಷ ಸಿದ್ದು ಮೀಸಿ ಮಾತನಾಡಿ, ಬಜೆಟ್ ಸಭೆ ಬಗ್ಗೆ ಮಾಹಿತಿ ಕುರಿತು ಎಲ್ಲ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ನಗರಸಭೆ ಬಜೆಟ್ ಸಭೆ ನಡೆಸಲಾಗುವುದು ಎಂದರು.
ನಗರಸಭೆ ಸದಸ್ಯ ಪ್ರಕಾಶ ಹಂಗರಗಿ ಮಾತನಾಡಿ,ತಾಲೂಕಿನ ಗದ್ಯಾಳ, ಗೋಠೆ ಗ್ರಾಮಗಳ ಜನರಿಗೆಆಶ್ರಯ ಕಾಲೋನಿಗಳಲ್ಲಿ ನಿವೇಶನಗಳನ್ನು ಯಾವಆಧಾರದ ಮೇಲೆ ನೀಡಲಾಗಿದೆ. ಲಕ್ಷಾಂತರ ರೂಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.ನಗರದ ಪ್ರಮುಖ ಸ್ಥಳಗಳಲ್ಲಿ ಸ್ವತ್ಛತೆ ಮರೀಚಿಕೆಯಾಗಿದೆ. ಸಮರ್ಪಕವಾಗಿ ಬೀದಿದೀಪಗಳು ನಿರ್ವಹಣೆಯಿಲ್ಲ. ನಗರದ ಯಾವುದೆ ವಾರ್ಡುಗಳಲ್ಲಿ ನಗರಸಭೆ ಅಧಿಕಾರಿಗಳು,ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತಿಲ್ಲ ಎಂದು ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.