Advertisement

ಗಂಡುಲಿ: ಟ್ರೇಲರ್‌ನಿಂದಲೇ ಗರ್ಜಿಸಲು ಸಿದ್ದ

01:10 PM Dec 22, 2021 | Team Udayavani |

“ಗಂಡುಲಿ’- ಹೀಗೊಂದು ಚಿತ್ರ ಸದ್ದಿಲ್ಲದೇ ತಯಾರಾಗಿದ್ದು, ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವನ್ನು ವಿನಯ್‌ ರತ್ನಸಿದ್ದಿ ನಿರ್ದೇಶಿಸಿದ್ದಾರೆ.‌

Advertisement

“ಗಂಡುಲಿ’ ಚಲನಚಿತ್ರವು ಕುಟುಂಬ ಸಮೇತ ಕೂತು ನೋಡುವಂತ ಚಲನಚಿತ್ರವಾಗಿದ್ದು, ಇದು ಆ್ಯಕ್ಷನ್‌, ಸಸ್ಪೆನ್ಸ್ ಕಾಮಿಡಿ ಮತ್ತು ಫ್ಯಾಮಿಲಿ ಸೆಂಟಿ ಮೆಂಟ್‌ ಇರುವ ಸಿನಿಮಾ ಎಂಬುದು ಚಿತ್ರತಂಡದ ಮಾತು.

ವಿನಯ್‌ ಸಿದ್ಧಿ ಅವರು ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿ ದ್ದಾರೆ. ಚಿತ್ರದ ಟೈಟಲ್‌ ಸಾಂಗ್‌ ಅನ್ನು ಅನಿರುದ್ಧ್ ಶಾಸ್ತ್ರಿವರು ಹಾಡಿದ್ದು, ಡುಯೆಟ್‌ ಸಾಂಗ್‌ ಅನ್ನು ವಿಜಯ್‌ ಪ್ರಕಾಶ್‌ ರವರು ಹಾಡಿದ್ದಾರೆ.ನಾಯಕನ ತಾಯಿಯ ಪಾತ್ರದಲ್ಲಿ ಸುಧಾ ನರಸಿಂಹರಾಜು ಕಾಣಿಸಿಕೊಂಡಿದ್ದು, ಧರ್ಮೇಂದ್ರ ಅರಸ್‌ ರವರು ಬಹು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ;- ಮಹಾನಗರ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ: ಆರೊಪಿಗಳ ಬಂಧನಕ್ಕೆ ಆಗ್ರಹ

ಇವರೆಲ್ಲರೂ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ನಾಯಕ ನಟನಾಗಿ ವಿನಯ್‌ ರತ್ನಸಿದ್ದಿ ರವರು ಕಾಣಿಸಿಕೊಂಡಿದ್ದು, ನಾಯಕಿ ಪಾತ್ರದಲ್ಲಿ ಛಾಯಾದೇವಿ ಬಣ್ಣ ಹಚ್ಚಿದ್ದಾರೆ. ಇನ್ನು ಉಳಿದ ತಾರಾಗಣದಲ್ಲಿ ಶಿವಮೊಗ್ಗ ರಾಮಣ್ಣ, ಸುಬ್ಬೆಗೌಡ್ರು, ಶಿವು, ವಿಜಯ್, ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೆ. ಆರ್‌. ಪೇಟೆ, ಹೇಮಗಿರಿ, ಮೈಸೂರು, ಏರ್‌ಪೋರ್ಟ್‌ ರೋಡ್‌, ಕನಕಪುರ ಇನ್ನು ಮುಂತಾದ ಸುಂದರವಾದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next