ಬೆಂಗಳೂರು: “ಲಗಾನ್’ ಚಿತ್ರದಲ್ಲಿ ಅಸ್ಪ ೃಶ್ಯನನ್ನು ತಂಡಕ್ಕೆ ಸೇರಿಸಿಕೊಂಡದ್ದಕ್ಕೆ, ಆಮಿರ್ ಖಾನ್ ಮೇಲ್ವರ್ಗದವರ ಬಯುYಳ ಕೇಳುತ್ತಾರೆ. ಕೊನೆಗೆ ಆಮಿರ್ ಒಗ್ಗಟ್ಟಿನ ಪಾಠ ಹೇಳಿ, ಪಂದ್ಯ ಗೆಲ್ಲುವ ಕತೆ ಅಲ್ಲಿನ ಸಿನೆಮಾ ಕತೆ. ಆದರೆ ಶತಮಾನದ ಹಿಂದೆ ಇಂಥದ್ದೇ ಅಸ್ಪ ೃಶ್ಯ ಸುಂಟರಗಾಳಿ ನೈಜವಾಗಿ ಕನ್ನಡಿಗ ಕ್ರಿಕೆಟಿಗನ ಬದುಕಿಗೇ ತಟ್ಟಿತ್ತೆಂಬುದು ನಿಮಗೆ ಗೊತ್ತೇ? ಆಗ ಆತನ ಪರ “ಬ್ಯಾಟ್’ ಬೀಸಿದ್ದು ಲಗಾನ್‌ನ “ಭುವನ್’ ಅಲ್ಲ; ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ. ಬಾಪೂವಿನ ಅಸ್ಪ ೃಶ್ಯ ವಿರೋಧಿ ಕರೆ ಈ ಕನ್ನಡಿಗನಿಗೆ ಅಸ್ತಿತ್ವ ತಂದುಕೊಟ್ಟು ಮುಂದೆ ಈತ ದೇಶದ ತಂಡವನ್ನು ಗೆಲ್ಲಿಸುತ್ತಲೇ ಹೋದ!
ಕನ್ನಡಿಗ ಪಲ್ವಂಕರ್ ಬಾಲೂ! ನಾಡಿನ ಚರಿತ್ರೆ ಯಲ್ಲಿ ಈತನ ಹೆಸರನ್ನು ಕೇಳಿದವರು ಬೆರಳೆಣಿಕೆ ಮಂದಿಯಷ್ಟೇ. 1876ರಲ್ಲಿ ಧಾರವಾಡದಲ್ಲಿ ಹುಟ್ಟಿದ ಬಾಲೂ, ಅಸ್ಪ ೃಶ್ಯತೆಯ ಕಹಿ ಉಂಡ ಭಾರತದ ಮೊದಲ ಕ್ರಿಕೆಟಿಗ. ಈಗ ಬಾಲೂವಿನ ಜೀವನ ಕತೆ ಆಧರಿಸಿ ಬಾಲಿವುಡ್ ಸಿನೆಮಾ ಕಟ್ಟುತ್ತಿದೆ. “ಪಾನ್ ಸಿಂಗ್ ತೋಮರ್’ ಖ್ಯಾತಿಯ ನಿರ್ದೇಶಕ ತಿಗ್ಮಾಂಶು ಧುಲಿಯಾ, ಕನ್ನಡಿಗ ಕ್ರಿಕೆಟಿಗನ ಬಯೋಪಿಕ್‌ಗಾಗಿ 100 ವರ್ಷಗಳ ಹಿಂದಿನ ಕತೆಯ ಜಾಡನ್ನು ಹಿಡಿದು ಹೊರಟಿ¨ªಾರೆ. ಅಲ್ಲದೇ ಕೋಲ್ಕತಾದ ಉಪನ್ಯಾಸಕ ಕೌಶಿಕ್ ಬಂಡೋಪಾಧ್ಯಾಯ ಅವರು ಇಂದು (ಅ.2) ಬಿಡುಗಡೆ ಆಗುತ್ತಿರುವ “ಮಹಾತ್ಮ ಆನ್ ದಿ ಪಿಚ್’ ಕೃತಿಯಲ್ಲಿ ಕನ್ನಡಿಗ ಬಾಲೂವಿನ ಕುರಿತು ಉÇÉೇಖೀಸಿ¨ªಾರೆ.
ಬಾಲೂ ಬಗ್ಗೆ ಕೌಶಿಕ್ “ಉದಯವಾಣಿ’ ಜತೆ ಅತ್ಯಮೂಲ್ಯ ಮಾಹಿತಿ ತೆರೆದಿಟ್ಟರು.
ಯಾರು ಈ ಬಾಲೂ?: ಧಾರವಾಡದಲ್ಲಿ ಹುಟ್ಟಿದರೂ ಹೊಟ್ಟೆಪಾಡಿಗಾಗಿ ಇವರ ಕುಟುಂಬ ಪೂನಾಕ್ಕೆ ನಡೆಯಿತು. ಬ್ರಿಟಿಷರ ಯುದೊœàಪಕರಣ ಕಾರ್ಖಾನೆಯಲ್ಲಿ ಇವರ ತಂದೆ ಕಾರ್ಮಿಕರು. ಪೂನಾದ ಜಮಖಾನ ಕ್ರಿಕೆಟ… ಕ್ಲಬ್‌ನಲ್ಲಿ ಪಿಚ್‌ನ ಕಸ ಗುಡಿಸಲು ತಿಂಗಳಿಗೆ 3 ರೂ. ಸಂಬಳಕ್ಕೆ ಸೇರಿಕೊಂಡ ಬಾಲೂ, ದಲಿತನೆಂಬ ಕಾರಣಕ್ಕೆ ಬಾಲ್ ಬಾಯ್ ಆಗಿಯೂ ಚೆಂಡನ್ನು ಹೆಕ್ಕಿಕೊಟ್ಟರು. ಆಗ ದೇಶದಲ್ಲಿ 3 ತಂಡಗಳಿದ್ದವು; ಹಿಂದೂ, ಪಾರ್ಸಿ, ಯುರೋಪಿಯನ್. ಮೇಲ್ವರ್ಗದ ಆಟಗಾರರೇ ಇದ್ದ ಹಿಂದೂ ತಂಡ ಬಾಲೂವನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲಿಲ್ಲ. ಆದರೆ ನೆಟ್ ಪ್ರಾಕ್ಟೀಸ್ ವೇಳೆ ಬಾಲೂವಿನ ಸ್ಪಿನ್ ಮೋಡಿಗೆ ಬೆರಗಾದ ಪಾರ್ಸಿ ಕ್ಯಾಪ್ಟನ್ ಜೆ.ಜಿ. ಗ್ರೇಗ್, ಔಟ್ ಮಾಡಿದರೆ 8 ಆಣೆ ನೀಡುವುದಾಗಿ ಅವರಿಗೆ ಆಮಿಷ ತೋರಿಸುತ್ತಿದ್ದರು. ಬಾಲೂ ಸ್ಪಿನ್‌ಗೆ ಗ್ರೇಗ್ ಪದೇ ಪದೇ ಔಟಾಗಿ ತಿಂಗಳ ಸಂಬಳಕ್ಕಿಂತ ಮೂರ್ನಾಲ್ಕು ಪಟ್ಟು ಹಣವನ್ನು ಬಾಲೂ ಎಂಟಾಣೆಯಿಂದಲೇ ದುಡಿಯುತ್ತಿದ್ದರು. ಕೊನೆಗೆ ಗ್ರೇಗ್ ಅವರೇ ಹಿಂದೂ ತಂಡಕ್ಕೆ ಬಾಲೂವನ್ನು ಸೇರಿಸಿ ಕೊಳ್ಳಲು ಶಿಫಾರಸು ಮಾಡಿದ್ದರು.
ಅಸ್ಪ ೃಶ್ಯ ನೋವು: ಹಿಂದೂ ತಂಡ ಸೇರಿದರೂ ಮೇಲ್ವರ್ಗದ ಆಟಗಾರರು ಆರಂಭದಲ್ಲಿ ಇವರನ್ನು ಒಪ್ಪಿಕೊಳ್ಳಲಿಲ್ಲ. ಬಾಯಾರಿದರೂ ಇವರಿಗೆ ನೀರು ಸಿಗುತ್ತಿರಲಿಲ್ಲ. ಮೇಲ್ವರ್ಗದ ಆಟಗಾರರು ಪೆವಿಲಿಯನ್‌ನಲ್ಲಿ ಊಟ ಮಾಡುತ್ತಿದ್ದರೆ ಬಾಲೂ ಕ್ರೀಡಾಂಗಣದ ಹೊರಗೆ ಕುಳಿತು ಊಟ ಮಾಡಬೇಕಿತ್ತು. ಬಾಲೂ ಕೆಲವು ಸಲ ಪೆಟ್ಟು ಮಾಡಿಕೊಂಡರೂ ಅವರನ್ನು ಮುಟ್ಟಿ ವೈದ್ಯರು ಚಿಕಿತ್ಸೆ ನೀಡುತ್ತಿರಲಿಲ್ಲ. ಶಾರ್ಟ್ ಲೆಗ್‌ನಲ್ಲಿ ಹೆಲ್ಮೆಟ್ ಇಲ್ಲದೆಯೇ ನಿಲ್ಲುತ್ತಿದ್ದ ಅವರ ಧೈರ್ಯಕ್ಕೆ ಅಂದಿನವರೆಲ್ಲ ಬೆರಗಾಗಿದ್ದರು. ಬ್ಯಾಟಿಂಗ್ ಎನ್ನುವುದು ಮೇಲ್ವರ್ಗದ ಕಲೆ ಎನ್ನುತ್ತಾ ದಿನವಿಡೀ ಬೌಲಿಂಗ್ ಕೊಟ್ಟು ಇವರನ್ನು ದಣಿಸುತ್ತಿದ್ದರು. ಒಂದೇ ದಿನದಲ್ಲಿ 63 ಓವರ್ ಬೌಲಿಂಗ್ ಮಾಡಿದ ಸಾರ್ವಕಾಲಿಕ ದಾಖಲೆಯೂ ಬಾಲೂ ಹೆಸರಿನಲ್ಲಿದೆ! “ಸಹ ಆಟಗಾರರ ಈ ಶಿಕ್ಷೆಯನ್ನೇ ವರವಾಗಿ ಸ್ವೀಕರಿಸಿದ ಬಾಲೂ, ಮುಂದೆ ಅದ್ಭುತ ಸ್ಪಿನ್ನರ್ ಆದರು. 1911ರ ಇಂಗ್ಲಂಡ್ ಪ್ರವಾಸದಲ್ಲಿ ಇವರದ್ದೇ ನಿರ್ಣಾಯಕ ಪಾತ್ರ. ಹಿಂದೂ ತಂಡ ಇವರ ಬೌಲಿಂಗ್‌ನಿಂದಲೇ 3 ಸಲ ಚಾಂಪಿಯನ್ ಆಯಿತು. ಒಟ್ಟು 33 ಪ್ರಥಮ ದರ್ಜೆ ಪಂದ್ಯಗಳಲ್ಲಿ 179 ವಿಕೆಟ್ ಕಿತ್ತರು. ತಲಾ 5 ವಿಕೆಟ್‌ಗಳನ್ನು 17 ಇನ್ನಿಂಗ್ಸ್‌ನಲ್ಲಿ, 4 ಪಂದ್ಯಗಳಲ್ಲಿ ತಲಾ 10 ವಿಕೆಟ್‌ಗಳನ್ನು ಪಡೆದು ಗೆಲುವಿನ ರೂವಾರಿಯಾಗಿ, ಪ್ರತಿಭೆಯಿಂದಲೇ ಜಾತಿಯನ್ನು ಮರೆಸಿದರು’ ಎಂದು ಅವರ ಕತೆ ಹೇಳುತ್ತಾರೆ ಲೇಖಕ ಕೌಶಿಕ್.
1 ಗಂಟೆಯ ಕ್ಯಾಪ್ಟನ್!: ಪ್ರತಿ ಸಲವೂ ಇವರನ್ನು ತಂಡದಿಂದ ಕಿತ್ತುಹಾಕುವ ಮೇಲ್ವರ್ಗದ ರಾಜಕೀಯ ನಡೆದಾಗಲೂ ಬಾಲೂ ಭರ್ಜರಿ ಬೌಲಿಂಗ್ ಪ್ರದರ್ಶನ ಅವರನ್ನು ತಂಡದಲ್ಲಿ ಗಟ್ಟಿ ಮಾಡುತ್ತಲೇ ಇತ್ತು. ಕೊನೆಕೊನೆಗೆ ಬಹುತೇಕ ಸದಸ್ಯರು ಬಾಲೂವನ್ನು ಒಪ್ಪಿಕೊಂಡರು. ಕ್ಯಾಪ್ಟನ್ ಸ್ಥಾನ ಕೈತಪ್ಪಲೂ “ದಲಿತ’ನೆಂಬ ಜಾತಿಫಲಕವೇ ಕಾರಣವಾಯಿತು. ಶಿವರಾಮ್, ಗಣಪತ್, ವಿಟuಲ್ ಎಂಬ ತಮ್ಮ ಮೂವರು ಸೋದರರೂ ತಂಡದಲ್ಲಿ ಸ್ಥಾನ ಪಡೆದಾಗ ಬಾಲೂವಿಗೆ ಉಪನಾಯಕನ ಪಟ್ಟ ಸಿಕ್ಕಿತ್ತು. “ಬಾಲೂ ಬೌಲಿಂಗ್ ಮಾಡುವಾಗ, ಹುರ್ರಾ ಹುರ್ರಾ ಬಾಲೂ ಎಂದು ಕೂಗಿ ಪ್ರೇಕ್ಷಕರು ಹುರಿ ದುಂಬಿಸುತ್ತಿದ್ದರು. ಅಂದು ನಾಯಕರಾಗಿದ್ದ ಎಂ.ಡಿ. ಪೈ, ಬಾಲೂ ಒಮ್ಮೆಯಾದರೂ ಕ್ಯಾಪ್ಟನ್ ಆಗಲಿ ಎಂಬ ಕಾರಣಕ್ಕಾಗಿ 1 ತಾಸು ಮೈದಾನದ ಹೊರಗೆ ಉಳಿದು ನಾಯಕತ್ವ ಬಿಟ್ಟುಕೊಟ್ಟಿದ್ದರು’ ಎನ್ನುತ್ತಾರೆ ಕೌಶಿಕ್. ಬಾಲೂ ಸೋದರ ವಿಟuಲ್ ಮುಂದೊಂದು ದಿನ ಹಿಂದೂ ತಂಡದ ಕ್ಯಾಪ್ಟನ್ ಆಗಿದ್ದರು.
ಗಾಂಧೀಜಿ ಬೆಂಬಲ
“ಮಹಾತ್ಮಾ ಗಾಂಧೀಜಿ ದ. ಆಫ್ರಿಕದಿಂದ 1915ರಲ್ಲಿ ವಾಪಸಾದಾಗ ಬಾಲೂ ಹೆಸರು ಪ್ರಸ್ತಾವಿಸಿ ಕ್ರಿಕೆಟಿನಲ್ಲಿನ
ಅಸ್ಪ ೃಶ್ಯತೆಯನ್ನು ಖಂಡಿಸಿದ್ದರು. ಹಿಂದೂ ತಂಡದ ಸದಸ್ಯರು ಗಾಂಧೀಜಿಯವರ ಮಾತಿಗೆ ಗೌರವ ಕೊಟ್ಟು, ಬಾಲೂವನ್ನು ಸಂಪೂರ್ಣವಾಗಿ ಒಪ್ಪಿಕೊಂಡರು. ಡಾ| ಬಿ.ಆರ್. ಅಂಬೇಡ್ಕರ್, ಬಾಲೂವನ್ನು ದಲಿತರ ಹೀರೊ ಎಂದು ಬಣ್ಣಿಸಿದ್ದರು. ಆ ಕಾಲದಲ್ಲಿ ಅಂಬೇಡ್ಕರ್‌ಗಿಂತ ಬಾಲೂ ಪ್ರಬಲ ದಲಿತ ನಾಯಕರಾಗಿದ್ದರು. ಆದರೆ ಗಾಂಧೀಜಿ ಅನುಯಾಯಿ ಆಗಿದ್ದ ಬಾಲೂ, ಅಂಬೇಡ್ಕರ್ ಅವರ ಕೆಲವು ರಾಜಕೀಯ ನಡೆ ಒಪ್ಪದೆ ಅವರ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಿ, ಸೋತಿದ್ದರು. ಅವರು 1955ರಲ್ಲಿ ಮಡಿದರು’ ಎಂದು ಕೌಶಿಕ್ ವಿವರಿಸಿದ್ದಾರೆ.
- ಕೀರ್ತಿ ಕೋಲ್ಗಾರ್