Advertisement

ಗಾಂಧೀಜಿ ಬೋಧನೆಗಳು ಬದುಕಿಗೆ ದಾರಿದೀಪ: ರಾಧಾಕೃಷ್ಣನ್‌

09:04 PM Jun 15, 2019 | sudhir |

ಮಂಜೇಶ್ವರ: ಸಮಾಜದಲ್ಲಿ ಅನಾಚಾರಗಳು ಹಾಗೂ ಸ್ವತ್ಛಂದತೆಗಳು ತಾಂಡವವಾಡುತ್ತಿದ್ದು, ಯಾವ ಹಾದಿಯಲ್ಲಾದರೂ ಹಣ ಮತ್ತು ಅಧಿಕಾರವನ್ನು ಕೈವಶಪಡಿಸಬೇಕೆಂಬ ಮನುಷ್ಯನ ಹಪಾಹಪಿ ಹಿಂಸೆ, ದಬ್ಟಾಳಿಕೆ ಹಾಗೂ ದಮನಗಳಿಗೆ ಜನರನ್ನು ಪ್ರೇರೇಪಿಸುತ್ತವೆ. ಕೇವಲ ಬೆರಳೆಣಿಕೆಯಷ್ಟು ಜನರು ಇದರ ಫಲಾನುಭವಿಗಳಾದರೆ, ಕೋಟ್ಯಂತರ ಜನರು ಇದರಿಂದಾಗಿ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಹಿಂಸೆ, ಕೊಲೆ, ಮಾದಕ ವಸ್ತುಗಳ ಬಳಕೆ ಜನರಲ್ಲಿ ಮನುಷ್ಯತ್ವವನ್ನು ಇಲ್ಲವಾಗಿಸುತ್ತವೆ ಎಂದು ಹಿರಿಯ ಗಾಂಧೀವಾದಿ, ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ| ಎನ್‌.ರಾಧಾಕೃಷ್ಣನ್‌ ಹೇಳಿದರು.

Advertisement

ಹಿಂಸೆ, ಕೊಲೆ, ಮದ್ಯ-ಮಾದಕವಸ್ತಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತರ ಸಂಗಮ ಹಾಗೂ ವಿನೋಭಾ ವೆಂಕಟೇಶ್‌ ರಾವ್‌ ಶಾಂತಿಸೇನಾ ಫೌಂಡೇಶನ್‌ ವಾರ್ಷಿಕ ಅವಲೋಕನ ಸಭೆಯನ್ನು ಗುರುವಾರ ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿಯ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್‌.ಪಾಟೀಲ್‌ಅವರು ಅಧ್ಯಕ್ಷತೆ ವಹಿಸಿದ್ದರು.

ಶಾಂತಿ ಸ್ಥಾಪನ ದಿನ
1957ರಲ್ಲಿ ಆಚಾರ್ಯ ವಿನೋಭಾವೆ ಅವರಿಂದ ಮಂಜೇಶ್ವರದಲ್ಲಿ ಆರಂಭಿಸಲ್ಪಟ್ಟ ಶಾಂತಿಸೇನೆಯು ಕ್ರಿಯಾತ್ಮಕವಾಗಿ ಮುನ್ನಡೆಯಲು ತೀರ್ಮಾನಿಸಿದೆ. ಹೊಸ ತಲೆಮಾರಿಗೆ ಹಸ್ತಾಂತರಿಸಲ್ಪಟ್ಟ ಗಾಂಧೀಜಿಯವರ ಶಾಂತಿಸೇನಾ ಪರಿಕಲ್ಪನೆಯನ್ನು ರಾಷ್ಟ್ರವ್ಯಾಪಿ ಹರಡುವ ನಿಟ್ಟಿನಲ್ಲಿ ಶಾಂತಿಸೇನೆಯ ಸ್ಥಾಪನಾ ದಿನವಾದ ಆಗಸ್ಟ್‌ 23 ರಂದು ಮಂಜೇಶ್ವರದಲ್ಲಿ ರಾಷ್ಟ್ರೀಯ ಶಾಂತಿಸೇನಾ ದಿನವನ್ನು ಆಚರಿಸಲು ತೀರ್ಮಾನಿಸಿದ್ದು, ದೇಶ-ವಿದೇಶಗಳ ಪ್ರತಿನಿಧಿಗಳು ಭಾಗವ ಹಿಸುವ ನಿರೀಕ್ಷೆದೆಯೆಂದು ಡಾ| ಎನ್‌.ರಾಧಾಕೃಷ್ಣನ್‌ ಹೇಳಿದರು.

ಮುಖ್ಯ ಅತಿಥಿಗಳಾಗಿ ವಿ.ಕೆ.ಮೋಹನನ್‌, ಆರ್‌.ಪಿ.ರವೀಂದ್ರನ್‌, ಫಾದರ್‌ ಸ್ಕರಿಯಾ, ಶಿವನ್‌ ಅರುಣಾಚಲಂ, ರಂಜಿತ್‌ ಸರಕಾರ್‌, ಮಮತಾ ದಿವಾಕರ್‌, ಜೀನ್‌ ಲವೀನಾ ಮೊಂತೇರೋ, ಶಂಶಾದ್‌ ಶುಕೂರ್‌, ಕ್ಯಾಪ್ಟನ್‌ ನಂಬ್ಯಾರ್‌, ಪ್ರೋ.ಮೇರಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿವಾಕರ್‌ ಎಸ್‌ ಜೆ ಸ್ವಾಗತಿಸಿ, ಉಮ್ಮರ್‌ ಬೋರ್ಕಳ ವಂದಿಸಿದರು.

Advertisement

ಮರು ವ್ಯಾಖ್ಯಾನ
ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬದುಕು ಮತ್ತು ಬೋಧನೆಗಳೇ ದಾರಿದೀಪವಾಗಿವೆ. ಈ ನಿಟ್ಟಿನಲ್ಲಿ ಗಾಂಧೀಜಿಯವರನ್ನು ಕಂಡು ಕೇಳರಿಯದ ಹೊಸ ತಲೆಮಾರಿಗೆ ಗಾಂಧೀಜಿಯವರ ಚಿಂತನೆಗಳು ಸೀÌಕೃತವಾಗುವ ರೀತಿಯಲ್ಲಿ ಮರು ವ್ಯಾಖ್ಯಾನಗೊಳಿಸಬೇಕಾದ ಜವಾಬ್ದಾರಿ ನಮಗಿದೆ ಎಂದು ಡಾ| ಎನ್‌.ರಾಧಾಕೃಷ್ಣನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next