Advertisement

‘ಗಾಂಧೀಜಿ ಜೀವನ ಸಂದೇಶ ಪ್ರಸ್ತುತ’

04:17 PM Oct 03, 2017 | Team Udayavani |

ಬಂಟ್ವಾಳ: ಮಹಾತ್ಮಾ ಗಾಂಧೀಜಿ ಅವರ ಜೀವನ ಸಂದೇಶ ಈ ಕಾಲಕ್ಕೆ ಪ್ರಸ್ತುತ. ಅವರು ಕಂಡ ಕನಸು ನನಸಾಗಿಸುವತ್ತ ಇಲಾಖೆಯ ನೌಕರರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಹೇಳಿದರು.

Advertisement

ಅ.2ರಂದು ರಾಷ್ಟ್ರೀಯ ಹಬ್ಬಗಳ ಆಚರಣೆಯ ತಾಲೂಕು ಸಮಿತಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಗಾಂಧೀ
ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.16 ಸಾವಿರ 94ಸಿಸಿ ಹಕ್ಕುಪತ್ರ ಒದಗಿಸುವ ಮೂಲಕ ಬಂಟ್ವಾಳ ತಾಲೂಕು ಮುಂಚೂಣಿಯಲ್ಲಿದ್ದು, ಮಹಾತ್ಮಗಾಂಧೀಜಿಯವರ ತತ್ವದ ನೈಜ ಅನುಷ್ಠಾನವಾದಂತಾಗಿದೆ ಎಂದು ಅವರು ಹೇಳಿದರು.

ಪತ್ರಕರ್ತ ಹರೀಶ್‌ ಮಾಂಬಾಡಿ ಮಾತನಾಡಿ, ಇಂದು ಮಹಾತ್ಮಾ ಗಾಂಧಿ ಜಯಂತಿಯ ಜತೆಗೆ ಮಾಜಿ ಪ್ರಧಾನಿ
ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಇಬ್ಬರೂ ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಪರಿಶ್ರಮಿಸಿದವರು. ದ್ವೇಷಮಯ ಪರಿಸ್ಥಿತಿಯ ಸಂದರ್ಭ ಸತ್ಯ, ಅಹಿಂಸೆಯ ಗಾಂಧೀ ತತ್ವ ಹಾಗೂ ರೈತರನ್ನು ಗುರುತಿಸುವಂತೆ ಮಾಡಿದ ಶಾಸ್ತ್ರೀಜಿಯವರ ಮಾತು ಪ್ರೇರಣದಾಯಕವಾಗಿದೆ ಎಂದರು.

ಪತ್ರಕರ್ತ ಫಾರೂಕ್‌ ಬಂಟ್ವಾಳ ಮಾತನಾಡಿ, ಗಾಂಧೀಜಿ ಮತ್ತು ಶಾಸ್ತ್ರಿಯವರು ತಮ್ಮ ನಡವಳಿಕೆ ಮೂಲಕ ದೇಶದ ಸಾಮಾನ್ಯ ಜನರನ್ನೂ ಪ್ರೇರೇಪಿಸುವಂತೆ ಮಾಡಿದವರು ಎಂದು ಹೇಳಿದರು. ತಾ.ಪಂ. ಸದಸ್ಯ ಪ್ರಭಾಕರ್‌ ಪ್ರಭು, ಉಪತಹಶೀಲ್ದಾರ್‌ ಸೀತಾರಾಮ, ಗ್ರೆಟ್ಟಾ ಮಸ್ಕರೇನಸ್‌, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಭೂಮಿ ಶಾಖೆಯ ಕಂದಾಯ ನಿರೀಕ್ಷಕಿ ಸುಧಾ ಎಂ., ಕಂದಾಯ ನಿರೀಕ್ಷಕ ದಿವಾಕರ ಮುಗಳಿಯ, ತಾಲೂಕು ಕಚೇರಿ ಸಿಬಂದಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ಕಂದಾಯ ನಿರೀಕ್ಷಕ ನವೀನ್‌ ಬೆಂಜನಪದವು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next