Advertisement

ಗಾಂಧೀಜಿ ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನ

03:37 PM Oct 07, 2019 | Suhan S |

ಮೈಸೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿರುವ ಮಹಾತ್ಮ ಗಾಂಧಿ, ಜೀವನ ಮತ್ತು ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಇಲಾಖೆ ಜಂಟಿ ನಿರ್ದೇಶಕ ಬಸವರಾಜು ಕಂಬಿ ಉದ್ಘಾಟಿಸಿದರು.

Advertisement

ಕಲಾ ಮಂದಿರದ ಸುಚಿತ್ರ ಕಲಾ ಗ್ಯಾಲರಿ ಎದುರು ಗಾಂಧೀಜಿ 150ನೇ ಜಯಂತಿ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿರುವ ಜೀವನ ಮತ್ತು ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನ ಅ.8ರವರಗೆ 3 ದಿನಗಳು ಉಚಿತ ಪ್ರದರ್ಶನ ನಡೆಯಲಿದೆ. ಗಾಂಧೀಜಿ ವಿಚಾರಧಾರೆ ಹಾಗೂ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಜಿಯವರ ತಂದೆ- ತಾಯಿಯ ಪೋಟೋ ಜೊತೆ ಪರಿಚಯ, ಬಾಲ್ಯ ಹಾಗೂ ಶಿಕ್ಷಣ, ವಕೀಲ ವೃತ್ತಿ ಹಾಗೂ ಪತ್ನಿ ಕಸ್ತೂರ್‌ ಬಾ ಬಗ್ಗೆ ಪರಿಚಯಿಸುತ್ತದೆ. ಸಬರಮತಿ ಆಶ್ರಮ, ಜಲಿಯನ್‌ ವಾಲಾಬಾಗ್‌ ಘಟನೆ, ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷ ಸ್ಥಾನ ಅಲಂಕಾರ, ಉಪ್ಪಿನ ಕಾಯ್ದೆ ಉಲ್ಲಂ ಸಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಗಾಂಧೀಜಿ ಮತ್ತು ಜಿನ್ನಾ ಮಾತುಕತೆ, ಭಾರತ ಬಿಟ್ಟು ತೊಲಗಿ ಚಳವಳಿ ಮುಂದಾಳತ್ವ ಹಾಗೂ ಲಾರ್ಡ್‌ ಮತ್ತು ಲೇಡಿ ಮೌಂಟ್‌ ಬ್ಯಾಟನ್‌, ಭಾರತೀಯರ ಕೈಗೆ ಅಧಿಕಾರ ಹಸ್ತಾಂತರ ವಿಚಾರವಾಗಿ ಗಾಂಧೀಜಿ ಅವರಿಂದ ಮಾರ್ಗದರ್ಶನ ಕೇಳಿದ ಚಿತ್ರಗಳು ಪ್ರದರ್ಶನದಲ್ಲಿದೆ. ಪ್ರಾರ್ಥನಾ ಸಭೆ, ಶಾಂತಿ ಮಂತ್ರ, ಪ್ರಾಣಿ ಪ್ರೀತಿ, ಸರಳತೆ, ದೂರದೃಷ್ಟಿ ಹಾಗೂ ವಿಚಾರಧಾರೆಗಳ ನೈಜತೆಯನ್ನು ಈ ಪ್ರದರ್ಶನ ಪ್ರತಿಬಿಂಬಿಸುತ್ತದೆ.

ಒಟ್ಟಾರೆಯಾಗಿ ಬಾಲ್ಯ, ಶಿಕ್ಷಣ, ಹೋರಾಟ, ಸತ್ಯಾ ಗ್ರಹಗಳು ಪ್ರಮುಖರೊಂದಿಗಿನ ಮಾತುಕತೆಯ ಛಾಯಾಚಿತ್ರಗಳನ್ನು ಕಾಣಬಹುದು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಕರಾದ ರಾಜು ಆರ್‌., ಮಹೇಶ್‌ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next