Advertisement

ಜಿಲ್ಲೆಯ ಆರು ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

01:35 PM Oct 06, 2020 | Suhan S |

ಚಿಕ್ಕಬಳ್ಳಾಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸ್ವಚ್ಛತೆ, ಗ್ರಾಮ ನೈರ್ಮಲ್ಯ ಕಾಪಾಡಿ ಕಂದಾಯ ವಸೂಲಿಗೆ ಆದ್ಯತೆ ನೀಡಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಜಿಲ್ಲೆಯ 6 ಗ್ರಾಪಂಗಳು ರಾಜ್ಯ ಮಟ್ಟದ ಗಾಂಧಿಗ್ರಾಮ ಪುರಸ್ಕಾರಕ್ಕೆ ಭಾಜನವಾಗಿವೆ.

Advertisement

ಪಿಡಿಒಗಳಿಗೆಸಂತಸ: ನರೇಗಾಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ದ್ದು ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ.ಮತ್ತೂಂದಡೆಜಿಲ್ಲೆಯ6ಗ್ರಾಪಂಗಳು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾ ಗಿರುವುದು ಆಯಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ರೀತಿಯ ಸಂತಸ ಉಂಟಾದರೇ ಇತ್ತೀಚಿಗೆ ಅಧಿಕಾರಅವಧಿಯನ್ನುಪೂರ್ಣಗೊಳಿಸಿರುವ ಗ್ರಾಪಂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರಲ್ಲಿ ಸಂತೋಷ ಮನೆ ಮಾಡಿದೆ.

ಚುನಾವಣೆ ನೀತಿ ಸಂಹಿತೆ: ಜಿಲ್ಲೆಯಲ್ಲಿ ಆಯ್ಕೆಯಾಗಿರುವ 6 ಗ್ರಾಪಂಗಳಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿಗಳು 2019-20ನೇ  ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಅಭಿನಂದಿಸಲಿದ್ದಾರೆ. ವಿಧಾನ ಪರಿಷತ್ತಿನ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಗಾಂಧಿಗ್ರಾಮ ಪುರಸ್ಕಾರ ವಿತರಣೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಡೆಯಲಿದೆ ಎಂದು ತಿಳಿದು ಬಂದಿದೆ.

ಸಿಎಂ-ಸಚಿವರಿಂದ ಪ್ರಶಸ್ತಿ ಪ್ರದಾನ: ಜಿಲ್ಲೆಯಲ್ಲಿ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗ್ರಾಪಂಗಳ ಪಿಡಿಒಗಳು, ತಾಪಂ ಇಒ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಿಗೆ ಸಿಎಂ ಯಡಿಯೂರಪ್ಪ, ಆರ್‌ಡಿಪಿಆರ್‌ ಇಲಾಖೆ ಸಚಿವ ಕೆ.ಎಸ್‌.ಈಶ್ವರಪ್ಪ, ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಖ್‌,ಉಮಾಮಹಾದೇವನ್‌ ಸಹಿತ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಶಸ್ತಿಪ್ರದಾನ ನಡೆಯಲಿದೆ ಎಂದು ತಿಳಿದು ಬಂದಿದೆ.

ಯಾವ ಗ್ರಾಪಂಗಳಿಗೆ ಪುರಸ್ಕಾರ? : ಜಿಲ್ಲೆಯ 6 ತಾಲೂಕುಗಳಿಂದ ತಲಾ ಒಂದು ಗ್ರಾಪಂ ಅನ್ನು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಡ್ಲಘಟ್ಟ ತಾಲೂಕಿನ ಇ.ತಿಮ್ಮಸಂದ್ರ, ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಮರಳಿ, ಚಿಂತಾಮಣಿ ತಾಲೂಕಿನ ಕೋನಪಲ್ಲಿ, ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ, ಗೌರಿಬಿದನೂರು ತಾಲೂಕಿನ ನಗರಗೆರೆ, ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಪಂಗಳು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಪ್ರಸಕ್ತ ಸಾಲಿನಲ್ಲಿ ಕೈಗೊಂಡಿರುವ ಪ್ರಗತಿ ಆಧರಿಸಿ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳ ಮಾರ್ಗಸೂಚಿ ಒಳಗೊಂಡಂತೆ 150 ಅಂಶಗಳ ಪ್ರಶ್ನಾವಳಿ ಪಂಚತಂತ್ರ ತಂತ್ರಾಂಶದಿಂದ ಉತ್ತರಿಸುವ ಮೂಲಕ ಗ್ರಾಪಂಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅತಿ ಹೆಚ್ಚು ಅಂಕ ಪಡೆದ ಪ್ರತಿ ತಾಲೂಕಿನ 5 ಗ್ರಾಪಂಗಳನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಿ ಶಿಫಾರಸ್ಸಿಗೆ ಆಯಾ ಜಿಲ್ಲೆಗಳ ಸಿಇಒಗೆ ಪಟ್ಟಿಕಳುಹಿಸಲಾಗಿತ್ತು. ಅಭಿವೃದ್ಧಿಕಾಮಗಾರಿ, ಸಾಧ® ಗುರುತಿಸಿ ಆರ್‌ಡಿಪಿಆರ್‌ ಗಾಂಧಿಗ್ರಾಮ ಪುರಸ್ಕಾರಕ್ಕೆ ಪಟ್ಟಿ ಬಿಡುಗಡೆ ಮಾಡಿದೆ.

Advertisement

ಜಿಲ್ಲೆಯ 6 ಗ್ರಾಪಂಗಳಿಂದ ಇಲಾಖೆಪ್ರಶ್ನಾವಳಿಗಳನ್ನು ತಂತ್ರಾಂಶದ ಮೂಲಕ ಉತ್ತರಿಸಿಹಿಂದಿನ ಸಿಇಒಅವರ ಶಿಫಾರಸ್ಸಿನ ಮೇರೆಗೆ ಗಾಂಧಿಗ್ರಾಮ ಪುರಸ್ಕಾ ರಕ್ಕೆಆಯ್ಕೆಮಾಡಲಾಗಿದೆ. ಅ.2 ರಂದುಪ್ರಶಸ್ತಿ ವಿತರಿಸಬೇಕಾಗಿತ್ತು. ಆದರೆ, ಆಗಿಲ್ಲಪ್ರಸಕ್ತ ಸಾಲಿನಲ್ಲಿಕೋವಿಡ್‌ಇರುವುದರಿಂದ ಗ್ರಾಪಂಗಳಿಗೆ ಪ್ರಶಸ್ತಿ ಪತ್ರ ಮಾತ್ರ ವಿತರಣೆಯಾಗಲಿದ್ದು ತಲಾ 5 ಲಕ್ಷ ರೂ.ಗಳಅನುದಾನ ಲಭಿಸುವುದಿಲ್ಲ. ಶಿವಶಂಕರ್‌, ಚಿಕ್ಕಬಳ್ಳಾಪುರ ಜಿಪಂ ಸಿಇಒ

ಗ್ರಾಪಂ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷ ತಂದಿದೆ.ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು, ಶಿಡ್ಲಘಟ್ಟ ತಾಪಂಇಒ, ನರೇಗಾ ಸಹಾಯಕ ನಿರ್ದೇಶಕರು,ಹಿಂದಿನ ಸಿಇಒಅವರ ಸಲಹೆ ಸೂಚನೆಯಡಿಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಗುರುತಿಸಿ ಪ್ರಶಸ್ತಿಗೆ ಆಯ್ಕೆಯಾಗಿದೆ. ತನ್ವೀರ್‌ ಅಹಮದ್‌, ಈ.ತಿಮ್ಮಸಂದ್ರ ಗ್ರಾಪಂ ಪಿಡಿಒ, ಶಿಡ್ಲಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next