Advertisement

Gandhi: ಸ್ಮಾರಕ ಕಾಲೇಜಿನಲ್ಲೇ ಗಾಂಧೀ ಅಧ್ಯಯನ

11:40 PM Oct 01, 2023 | Team Udayavani |

ಈಗಿನ ಉಡುಪಿ ಜಿಲ್ಲೆಯ ಭೌಗೋಳಿಕ ವ್ಯಾಪ್ತಿಯ ಮೊದಲ ಕಾಲೇಜು ಉಡುಪಿಯ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜು. ಇದು ಗಾಂಧೀ ಸ್ಮರಣೆ ಯೊಂದಿಗೆ ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ 1949ರಲ್ಲಿ ಅರ್ಪಿತವಾದ ಶಾಶ್ವತ ಸ್ಮಾರಕವಾಗಿದೆ. ಸಂಸ್ಥಾಪಕ ಡಾ| ಟಿಎಂಎ ಪೈ ಅವರು ಗಾಂಧೀಜಿಯವರು ತೋರಿಸಿಕೊಟ್ಟ ರಚನಾತ್ಮಕ ಕಾರ್ಯ ಕ್ರಮ, ಸ್ವದೇಶಿ, ಸ್ವಸಹಾಯ, ಸ್ವಾವ ಲಂಬನೆ ಸಹಿತವಾದ ಶಿಕ್ಷಣ ಪದ್ಧತಿ ಯನ್ನು ಕಾಲೇಜಿನಲ್ಲಿ ಮಾತ್ರವಲ್ಲದೆ ಇತರೆಡೆಗಳಲ್ಲಿಯೂ ಅನುಸರಿಸಿದರು.

Advertisement

1953-54ರಲ್ಲಿ ಪ್ರಥಮ ಪ್ರಾಂಶು ಪಾಲ ಪ್ರೊ| ಸುಂದರ ರಾವ್‌ ಅಧ್ಯಯನ ಕ್ಕಾಗಿ “ಗಾಂಧಿಯನ್‌ ಸೆಕ್ಷನ್‌’ ಆರಂಭಿಸಿದ್ದರು. ಇದುವೇ ಗಾಂಧಿ ಅಧ್ಯಯನ ವೃತ್ತ (ಸ್ಟಡಿ ಸರ್ಕಲ್‌) ಆಯಿತು. ಪ್ರಾಧ್ಯಾಪಕ ರಾಗಿದ್ದ ಕು.ಶಿ. ಹರಿದಾಸ ಭಟ…, ಶ್ರೀಶ ಬಲ್ಲಾಳ್‌, ಪಾದೂರು ಗುರುರಾಜ ಭಟ್‌, ಕುಪ್ಪುಸ್ವಾಮಿ ಮುಂತಾದವರು ಗಾಂಧೀಜಿಯ ತತ್ತ್ವಾದರ್ಶಗಳ ಅಧ್ಯ ಯನಕ್ಕೆ ಬುನಾದಿ ಹಾಕಿದ್ದರು. ಮೊದಲು ಗಾಂಧೀಜಿ ಹಾಗೂ ಗಾಂಧಿ ವಿಚಾರ ಧಾರೆ ಬಗ್ಗೆ ಗ್ರಂಥಗಳನ್ನು ಸಂಗ್ರಹಿಸಿ ಪರಾ ಮರ್ಶನಕ್ಕೆ ಅವಕಾಶ ಒದಗಿಸಿತು.

2007ರಲ್ಲಿ ಮೂಡಿಬಂದ ಗಾಂಧಿ ಅಧ್ಯಯನ ಕೇಂದ್ರವನ್ನು ಹಿರಿಯ ಸಾಹಿತಿ ಡಾ| ಯು. ಆರ್‌. ಅನಂತ ಮೂರ್ತಿ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಡಾ| ಎಂ. ವಿ. ಕಾಮತ್‌, ಹಿರಿಯ ಬ್ಯಾಂಕರ್‌ ಕೆ.ಕೆ. ಪೈ ಅವರ ಮಾರ್ಗದರ್ಶನದಿಂದ ವಿವಿಧ ಪುಸ್ತಕಗಳನ್ನು ಸಂಗ್ರಹಿಸಲಾಯಿತು. ಪ್ರಮುಖ ವಿಚಾರ ಸಂಕಿರಣಗಳನ್ನು ನಡೆಸಲಾಯಿತು. ಗಾಂಧೀಜಿ ಯವರು ಕರಾವಳಿ ಭಾಗಕ್ಕೆ 1934ರ ಫೆಬ್ರವರಿ 24-25ರಂದು ಭೇಟಿ ನೀಡಿದ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿಸ್ತೃತವಾದ ಅಧ್ಯಯನ ವನ್ನು ಕೈಗೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟದ ಬಗ್ಗೆ ನಿಖರ ವಾದ ಮಾಹಿತಿ ಇರುವ ಸಂಸ್ಥೆಯಾಗಿ ಮೂಡಿಬಂದಿದೆ.

ಗಾಂಧೀಜಿ ಫಿಲಾಸಫಿ ಮಾತ್ರವಲ್ಲದೆ ರಚನಾತ್ಮಕ ಕಾರ್ಯ ಕ್ರಮಗಳ ಬಗ್ಗೆ ಅನುಸಂಧಾನ, ಭಾರತದ ನಿರ್ಮಾತೃಗಳ ಬಗ್ಗೆ ಅಧ್ಯಯನ, ಜನರ ಅರಿವಿಗೆ ಬಾರದ ಸ್ವಾತಂತ್ರ್ಯ ಹೋರಾಟ ಗಾರರ ಮಾಹಿತಿ ಸಂಗ್ರಹ, ದಾರ್ಶನಿಕರು ಮತ್ತು ಮಹಾ ಮಾನವತಾವಾದಿಗಳ ಕುರಿತಾಗಿ ಸ್ಟಡಿ ಸರ್ಕಲ್‌ ಆಯೋಜನೆ ಮುಂತಾದ ಚಟುವಟಿಕೆಗಳು ನಡೆಯುತ್ತವೆ.
ಗಾಂಧಿ ಅಧ್ಯಯನ ಬಗ್ಗೆ ಅರಿವು ತರಗತಿ ಹಾಗೂ ಸರ್ಟಿಫಿಕೇಟ್‌ ಕೋರ್ಸ್‌ ಗಳನ್ನು ನಡೆಸಲಾಗುತ್ತಿದೆ. ಪ್ರಾಂಶು ಪಾಲ ಪ್ರೊ| ಲಕ್ಷ್ಮೀ ನಾರಾಯಣ ಕಾರಂತರ ನೇತೃತ್ವದಲ್ಲಿ ಕೇಂದ್ರದ ಸಂಯೋಜಕ ಹಾಗೂ ಮುಖ್ಯಸ್ಥ ಯು. ವಿನೀತ್‌ ರಾವ್‌ ಉಸ್ತು ವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಯಾರೇ ಆದರೂ ಗಾಂಧೀಜಿ ಮತ್ತು ಅವರ ಸಾಹಿತ್ಯ, ವಿಚಾರಧಾರೆ, ಸ್ವಾತಂತ್ರ್ಯ ಚಳವಳಿ ಬಗ್ಗೆ ಮಾಹಿತಿಗಾಗಿ ಬಂದರೆ ಮಾಹಿತಿ ಸಿಗದೆ ಖಾಲಿ ಕೈಯಲ್ಲಿ ಮರಳಬಾರದು ಎಂಬ ಚಿಂತನೆ ಈ ಸಂಸ್ಥೆಯ ಹಿಂದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next