Advertisement

ಕಾಸರಗೋಡಿನ ಪೆರಡಾಲ ನವಜೀವನ ಶಾಲೆಯಲ್ಲಿ ಉದ್ಯಾನವನ ಹಾಗೂ ಗಾಂಧಿ ಪ್ರತಿಮೆ ಅನಾವರಣ

04:06 PM Apr 08, 2019 | keerthan |

ಬದಿಯಡ್ಕ: ಪೆರಡಾಲ ನವಜೀವನ ಹೈಯರ್‌ ಸೆಕೆಂಡರಿ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ “ಸಾಬರ್ಮತಿ’ ಉದ್ಯಾನವನ ಹಾಗೂ ಅಲ್ಲಿಯೇ ನಿರ್ಮಿಸಿದ ರಾಷ್ಟಪಿತ ಮಹಾತ್ಮಾಗಾಂಧಿಯವರ ಪ್ರತಿಮೆಯನ್ನು ಶಾಲಾ ವ್ಯವಸ್ಥಾಪಕ ಡಾ| ಸೂರ್ಯ ಎನ್‌. ಶಾಸ್ತ್ರಿ ಅನಾವರಣಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು,  ಗಾಂಧೀಜಿಯ ತತ್ವಗಳು ಹಾಗೂ ಆದರ್ಶಗಳು ಇಂದಿನ ಸಮಾಜಕ್ಕಿರುವ ಅಗತ್ಯತೆಯ ಕುರಿತಾಗಿ ವಿವರಿಸಿದರು. ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ, ಆರೋಗ್ಯ ರಂಗದಲ್ಲಿಯೂ ಸೇವೆಗೆ„ದ ಅಪ್ಪಟ ಗಾಂಧಿವಾದಿ ಡಾ| ಪಿ.ಎಸ್‌. ಶಾಸ್ತ್ರಿಯವರ ನೇತƒತ್ವದಲ್ಲಿ 1944ರಲ್ಲಿ ನವಜೀವನ ಶಾಲೆ ಆರಂಭಗೊಂಡಿತ್ತು. 75ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ 2018-19ನೇ ಸಾಲಿನ ಶೆ„ಕ್ಷಣಿಕ ವರ್ಷದ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಸವಿನೆನಪಿಗೋಸ್ಕರ ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಪ್ರತಿಮೆಯನ್ನು ನಿರ್ಮಿಸಿಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಶಾಲಾ ಪ್ರಾಂಶುಪಾಲ ಪಿ.ರಾಮಚಂದ್ರನ್‌, ಮುಖ್ಯೋಪಾಧ್ಯಾಯಿನಿ ಪಿ.ಕೆ.ತಂಗಮನಿ, ನಿವೃತ್ತ ಪ್ರಧಾನ ಅಧ್ಯಾಪಕ ಕೆ.ಶ್ಯಾಂಭಟ್‌, ಸ್ಟಾಫ್‌ ಸೆಕ್ರೆಟರಿ ಲತಾಬಾಯಿ, ಶಾಲಾ ಆಡಳಿತ ಸಮಿತಿಯ ರಮೇಶ್‌ ಭಟ್‌ ಕುಂಡೆಪ್ಪಾಡಿ, ನ್ಯಾಯವಾದಿ ನವೀನ ಬನಾರಿ, ವೆಂಕಟ್ರಮಣ ಭಟ್‌ ಪೆರ್ಮುಖ, ಕೃಷ್ಣಪ್ರಸಾದ ರೈ ಪೆರಡಾಲ, ಉದ್ಯಾನವನ ನಿರ್ಮಾಣ ಸಮಿತಿಯ ಎಂ.ಪಿ.ಕರುಣಾಕರನ್‌, ವೇಣುಗೋಪಾಲ ಕನಕಪ್ಪಾಡಿ, ವಿದ್ಯಾರ್ಥಿ ನಾಯಕ ಮುಹಮ್ಮದ್‌ ಅಜ್ಮಲ್‌, ಶಾಲಾ ಅಧ್ಯಾಪಕ ಅಧ್ಯಾಪಿಕೆಯರು ಹಾಗೂ ಹಿತೆ„ಷಿಗಳು ಸಮಾರಂಭದಲ್ಲಿ ಜೊತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next