Advertisement

ಗಾಂಧಿ ಜನ್ಮದಿನದಲ್ಲಿ 48 ಕೈದಿಗಳ ಬಿಡುಗಡೆ

12:29 PM Oct 06, 2018 | |

ಬೆಂಗಳೂರು: ಮಹಾತ್ಮ ಗಾಂಧಿಯವರ 150ನೇ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇದೇ ಮೊದಲ ಬಾರಿಗೆ ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿದ್ದ 48 ಮಂದಿ ಅಲ್ಪಾವಧಿ ಶಿûಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಶುಕ್ರವಾರ ಬಿಡುಗಡೆ ಮಾಡಲಾಯಿತು.

Advertisement

ಬೆಂಗಳೂರಿನ ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹ ಆವರಣದಲ್ಲಿ ಆಯೋಜಿಸಿದ್ದ ಶಿûಾಬಂಧಿಗಳ ಅವಧಿಪೂರ್ವ ಬಿಡುಗಡೆ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಅವರು ಮಹಿಳೆ ಸೇರಿದಂತೆ 15 ಮಂದಿ ಕೈದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಡಿ.ಕೆ.ಸುರೇಶ್‌, ಬೆರಳೆಣಿಕೆ ಮಂದಿಯಷ್ಟೇ ಉದ್ದೇಶಪೂರ್ವಕವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಆದರೆ, ಅನಿರೀಕ್ಷಿತ ಘಟನೆ, ಸಂದರ್ಭದಲ್ಲಿ ಅಪರಾಧವೆಸಗಿ ಜೈಲು ಸೇರುವವರೇ ಹೆಚ್ಚು. ಹೀಗಾಗಿ ಯಾವುದೇ ಸಂದರ್ಭದಲ್ಲಿ ಆತುರದ ನಿರ್ಧಾರ, ದುಡುಕುತನ ತೋರದೆ ತಾಳ್ಮೆಯಿಂದ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಕಾರಾಗೃಹ ಇಲಾಖೆ ಪೊಲೀಸ್‌ ಉಪ ಮಹಾನಿರೀಕ್ಷಕ ಎಚ್‌.ಎಸ್‌ ರೇವಣ್ಣ ಮಾತನಾಡಿ, ನಿಜವಾಗಿಯೂ ಶಿಕ್ಷೆ ಅನುಭವಿಸುವವರು ಕೈದಿಗಳ ಸಂಬಂಧಿಗಳು. ತಪ್ಪು ಮಾಡುವ ಮೊದಲು ಒಂದು ಕ್ಷಣ ನಿಮ್ಮ ಹೆಂಡತಿ, ಮಕ್ಕಳು, ಸಂಬಂಧಿಗಳ ಬಗ್ಗೆ ಯೋಚಿಸಿ. ಮುಂದಿನ ದಿನಗಳಲ್ಲಿ ಒಳ್ಳೆ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಜೀವನ ನಡೆಸಿ ಎಂದು ಸಲಹೆ ನೀಡಿದರು.

ಇದೇ ವೇಳೆ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ 10 ಮಂದಿಗೆ ಪ್ರಶಸ್ತಿ ವಿತರಿಸಲಾಯಿತು. ಪರಪ್ಪನ ಅಗ್ರಹಾರ ಕಾರಾಗೃಹ ಮುಖ್ಯಅಧೀಕ್ಷಕ ಸೋಮಸೇಖರ್‌, ಅಧೀಕ್ಷಕ ರಮೇಶ್‌ ಇತರರು ಉಪಸ್ಥಿತರಿದ್ದರು.

Advertisement

ಎಲ್ಲೆಲ್ಲಿ, ಎಷ್ಟು?
-ಬೆಂಗಳೂರು -15 (ಮಹಿಳೆ ಸೇರಿ)
-ಮೈಸೂರು- 10
-ಕಲಬುರಗಿ- 03
-ಶಿವಮೊಗ್ಗ- 02
-ವಿಜಯಪುರ- 01
-ಬಳ್ಳಾರಿ-07
-ಧಾರವಾಡ-10
-ಒಟ್ಟು -48

ಮೂವರು ಬಾಂಗ್ಲಾದೇಶವರ ಬಿಡುಗಡೆ: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಿಡುಗಡೆಯಾದ 15 ಮಂದಿ ಕೈದಿಗಳ ಪೈಕಿ ಮೂವರು ಬಾಂಗ್ಲಾ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ. ಅಕ್ರಮ ವಾಸ ಹಾಗೂ ಪಾಸ್‌ಪೋರ್ಟ್‌ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಕಳೆದ ಕೆಲ ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳ ಬಿಡುಗಡೆಗೆ ಅನುಮತಿ ದೊರಕಿದೆ. ಆ ಹಿನ್ನೆಲೆಯಲ್ಲಿ ಆ ಮೂವರನ್ನು ಪ್ರಕರಣ ದಾಖಲಾದ ಠಾಣಾಧಿಕಾರಿಗಳಿಗೆ ಒಪ್ಪಿಸಲಾಗುವುದು. ಬಳಿಕ ಠಾಣಾಧಿಕಾರಿಗಳು ಮೂವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಿದ್ದಾರೆ ಎಂದು ಕಾರಾಗೃಹದ ಅಧಿಕಾರಿಗಳು ಹೇಳಿದರು.

ಪತ್ನಿ ಬಳಿ ಕ್ಷಮೆ ಯಾಚಿಸುವೆ: “ಕಷ್ಟ ಎಂದರೆ ಏನು ಎಂಬುದೇ ಗೊತ್ತಿರದ ನಾನು ಹಣದಾಸೆಗೆ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದೆ. ಇದೀಗ ಎರಡು ವರ್ಷಗಳ ಜೈಲು ಶಿಕ್ಷೆಯಿಂದ ಬುದ್ದಿ ಕಲಿತಿದ್ದು, ಪತ್ನಿ ಬಳಿ ಕ್ಷಮೆಯಾಚಿಸುತ್ತೇನೆ. ಮತ್ತೂಮ್ಮೆ ಈ ರೀತಿ ನಡೆದುಕೊಳ್ಳದಂತೆ ಹೇಳಿ ನನ್ನ ಪತ್ನಿ, ಮಗಳೊಂದಿಗೆ ಸುಖವಾಗಿ ಸಂಸಾರ ಮಾಡುತ್ತೇನೆ.’ ಇದು ಪತ್ನಿಗೆ ವರದಕ್ಷಿಣೆ ಕಿರುಕುಳ, ಹಲ್ಲೆ ನಡೆಸಿದ ಪ್ರಕರಣದಲ್ಲಿ ಕಳೆದೆರಡು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದ ಯಲಹಂಕದ ಅಸ್ಲಾಂ ಪಾಷಾ (30) ಮನದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next