Advertisement

Gita ಪ್ರಸ್‌ಗೆ 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ

09:10 PM Jun 18, 2023 | Team Udayavani |

ನವದೆಹಲಿ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಗೀತಾ ಮುದ್ರಣಾಲಯಕ್ಕೆ 2021ನೇ ಸಾಲಿನ “ಗಾಂಧಿ ಶಾಂತಿ ಪ್ರಶಸ್ತಿ’ಯನ್ನು ನೀಡಲು ತೀರ್ಮಾನಿಸಲಾಗಿದೆ.

Advertisement

ಸಾಮಾಜಿಕ ಸೌಹಾರ್ದತೆ, ಶಾಂತಿ ಮತ್ತು ಮಹಾತ್ಮ ಗಾಂಧಿಯವರ ತತ್ವಗಳನ್ನು ಪೋಷಿಸಿ, ಅದನ್ನು ಜನಪ್ರಿಯಗೊಳಿಸುವಲ್ಲಿ ಸಂಸ್ಥೆಯ ಪಾತ್ರ ಘನವಾದದ್ದು ಎಂದು ಪರಿಗಣಿಸಿ ಈ ಗೌರವ ಕೊಡಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತೀರ್ಪುಗಾರರ ಸಮಿತಿ ಈ ತೀರ್ಮಾನ ಪ್ರಕಟಿಸಿದೆ. ಪ್ರಶಸ್ತಿಯು ಒಂದು ಕೋಟಿ ರೂ. ನಗದು, ಪ್ರಶಸ್ತಿ ಪತ್ರ, ಫ‌ಲಕ, ಗುಡಿ ಕೈಗಾರಿಕೆಗಳ ಅತ್ಯುತ್ಕೃಷ್ಟ ಉತ್ಪನ್ನಗಳನ್ನು ಒಳಗೊಂಡಿದೆ.

ಈ ಹಿಂದೆ ಇಸ್ರೋ, ಬೆಂಗಳೂರಿನ ಅಕ್ಷಯ ಪಾತ್ರ ಫೌಂಡೇಷನ್‌, ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್‌, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಡಾ. ನೆಲ್ಸನ್‌ ಮಂಡೇಲಾ, ತಾಂಜೇನಿಯಾ ಮಾಜಿ ಅಧ್ಯಕ್ಷ ಡಾ.ಜೂಲಿಯಸ್‌ ನೈರೇರೆ ಸೇರಿದಂತೆ ದೇಶ-ವಿದೇಶಗಳ ಗಣ್ಯರು, ಸಂಸ್ಥೆಗಳಿಗೆ ಈ ಗೌರವ ಪ್ರಾಪ್ತವಾಗಿದೆ.

1923ರಲ್ಲಿ ಸ್ಥಾಪನೆಗೊಂಡಿರುವ ಗೀತಾ ಪ್ರಸ್‌ ಜಗತ್ತಿನ ಹಳೆಯ ಮುದ್ರಣಾಲಯಗಳಲ್ಲಿ ಒಂದು. 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದ ಹೆಗ್ಗಳಿಕೆಗ ಈ ಸಂಸ್ಥೆಗೆ ಇದೆ. ಈ ಪೈಕಿ 16.21 ಕೋಟಿ ಭಗವದ್ಗೀತೆ ಪುಸ್ತಕವೇ ಸೇರಿದೆ.

ಪ್ರಧಾನಿ ಅಭಿನಂದನೆ:
ಪ್ರಧಾನಿ ನರೇಂದ್ರ ಮೋದಿ ಗೀತಾ ಪ್ರಸ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “100 ವರ್ಷಗಳ ಅವಧಿಯಲ್ಲಿ ಗೀತಾ ಮುದ್ರಣಾಲಯ ಸಾಮಾಜಿಕ ಸೌಹಾರ್ದತೆ ಬಲಪಡಿಸುವಲ್ಲಿ ಮತ್ತು ಸಾಂಸ್ಕೃತಿಕ ವಿನಿಮಯ ಕ್ಷೇತ್ರದಲ್ಲಿ ಅಭಿನಂದನಾರ್ಹ ಸಾಧನೆ ಮಾಡಿದೆ. ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆಯಾದುದಕ್ಕೆ ಅಭಿನಂದನೆ’ಗಳು ಎಂದು ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next