Advertisement
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಸರಳಾ ಕಾಂಚನ್ ಮತ್ತು ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆರೋನಿಕಾ ಅವರು “ಇದು ಪಂಚಾಯತ್‌ರಾಜ್ ಸಂಘಟನೆ ಮಾಡುತ್ತಿರುವ ಸಮಾಜಮುಖೀ ಕಾರ್ಯ’ ಎಂದು ಶ್ಲಾ ಸಿದರು.
ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಅವರು ಮಾತನಾಡಿ “ಸಂಘಟನೆಯ ವತಿಯಿಂದ ಈ ಬಾರಿ ಎರಡು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇನ್ನೊಂದು ಮನೆ ಕಾರ್ಕಳ ಕಾಂತಾವರದ ಮಹಿಳೆಯೋರ್ವರಿಗೆ ನಿರ್ಮಿಸಿಕೊಡಲಾಗುವುದು. ಈಗ ಗುದ್ದಲಿ ಪೂಜೆ ನಡೆದ ಮನೆ 4 ಲ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಅಕ್ಟೋಬರ್ 2ಕ್ಕೆ ಗಾಂಧಿ ಜಯಂತಿಯಂದು ಉದ್ಘಾಟನೆಗೊಳ್ಳಲಿದೆ. ಇದಕ್ಕೆ ಗಾಂಧಿ ಕುಟೀರ ಎಂದು ಹೆಸರಿಡಲಾಗುವುದು’ ಎಂದು ತಿಳಿಸಿದರು. ಅಶಕ್ತ ಕುಟುಂಬ
“ನಳಿನಿ ಅವರ ಮೂವರು ಮಕ್ಕಳಲ್ಲಿ 34 ವರ್ಷ ಪ್ರಾಯದ ಪ್ರಶಾಂತ್ ದೈಹಿಕ ಅಶಕ್ತತೆಯಿಂದಾಗಿ ಹಾಸಿಗೆ ಬಿಟ್ಟು ಏಳದ ಸ್ಥಿತಿಯಲ್ಲಿದ್ದಾರೆ. ನಳಿನಿ ಅವರ ಪತಿ ಮೃತಪಟ್ಟಿದ್ದಾರೆ. ಮಡಲಿನ ಗುಡಿಸಲಿನಲ್ಲಿ ವಾಸವಿದ್ದರು. ಕಳೆದ ಮಳೆಗಾಲಕ್ಕೆ ನೆರೆ ಬಂತು. ಗುಡಿಸಲಿನಲ್ಲಿ ವಾಸಿಸಲು ಅಸಾಧ್ಯವಾಯಿತು. ಹಾಗಾಗಿ ಸದ್ಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ’ ಎಂದು ಗ್ರಾ.ಪಂ.ನ ಸ್ಥಳೀಯ ಸದಸ್ಯೆ ಅಮೃತಾ ಉಮೇಶ್ ಕೋಟ್ಯಾನ್ ಅವರು ತಿಳಿಸಿದರು.
Related Articles
Advertisement