Advertisement

ಗಾಂಧಿ ಕಟ್ಟೆ : ಗಾಂಧಿ ಪ್ರತಿಮೆಗೆ ಗೌರವಾರ್ಪಣೆ

03:17 PM Oct 03, 2017 | |

ನಗರ: ಮಹಾತ್ಮಾ ಗಾಂಧೀಜಿಯವರು ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ್ದ ಚಾರಿತ್ರಿಕ ಗಾಂಧಿ ಕಟ್ಟೆಯಲ್ಲಿ ಸೋಮವಾರ ಗಾಂಧಿ ಪ್ರತಿಮೆಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

Advertisement

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ಗಾಂಧಿ ಕಟ್ಟೆ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಪ್ರತಿಮೆಗೆ ಹಾರಾರ್ಪಣೆ ಮಾಡಿದರು.

ಸಹಾಯಕ ಕಮಿಷನರ್‌ ಡಾ| ರಘುನಂದನ ಮೂರ್ತಿ, ತಹಶೀಲ್ದಾರ್‌ ಅನಂತ ಶಂಕರ್‌, ತಾ. ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು , ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಪುತ್ತೂರು ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ಹಿರಿಯ ನ್ಯಾಯವಾದಿ ಬಿ. ಪುರಂದರ ಭಟ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌
ಬಡಗನ್ನೂರು, ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಮಾಜಿ ನಗರಸಭಾ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ, ಸೇವಾದಳದ ಮುಖಂಡ ಜೋಕಿಂ ಡಿ’ಸೋಜಾ, ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಅಮಲ ರಾಮಚಂದ್ರ, ತಾ| ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಗಾಂಧಿಕಟ್ಟೆ ಅಭಿವೃದ್ಧಿ ಸಮಿತಿಯ ಕೃಷ್ಣ ಪ್ರಸಾದ್‌ ಶೆಟ್ಟಿ, ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.

ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್‌ ರೈ ವಂದಿಸಿದರು. ರಮೇಶ್‌ ಬಾಬು ಕಾರ್ಯಕ್ರಮ ನಿರ್ವಹಿಸಿದರು.

ಗಾಂಧಿ ಕಟ್ಟೆ ಅಭಿವೃದ್ಧಿ: ಚರ್ಚೆ
ಗಾಂಧಿ ಕಟ್ಟೆ ಅಭಿವೃದ್ಧಿ ಕುರಿತು ಈ ಸಂದರ್ಭ ಶಾಸಕರು ಸಹಾಯಕ ಕಮಿಷನರ್‌ ಜತೆ ಮಾತುಕತೆ ನಡೆಸಿದರು. ಅಶ್ವತ್ಥ ಮರದ ರೆಂಬೆಗಳನ್ನು ಮಾತ್ರ ಕಡಿಯುವುದು ಮತ್ತು ಗಾಂಧಿ ಕಟ್ಟೆಯನ್ನು ಅಭಿವೃದ್ಧಿ ಪಡಿಸುವುದು ಉತ್ತಮ ಎಂದು ಶಾಸಕರು ಹೇಳಿದರು. ಗಾಂಧಿ ಕಟ್ಟೆಯನ್ನು ಈಗಿನ ಸ್ಥಳದಿಂದ ಐದು ಅಡಿ ಹಿಂದಕ್ಕೆ ಕೊಂಡೊಯ್ದು ನಿರ್ಮಿಸುವ ಪ್ರಸ್ತಾವನೆ ಇದೆ ಎಂದು ಹಿಂದೂಸ್ಥಾನ್‌ ಪ್ರಮೋಟರ್ಸ್‌ ಆ್ಯಂಡ್‌ ಬಿಲ್ಡರ್ಸ್‌ ಸಂಸ್ಥೆಯ ಪ್ರತಿನಿಧಿ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಹೇಳಿದರು. ಮರು ನಿರ್ಮಾಣ ಯೋಜನೆಗೆ ಸರಕಾರದ ಕಡೆಯಿಂದ ಅನುದಾನ ಒದಗಿಸಿ ಕೊಡುವಂತೆ ಗಾಂಧಿ ಕಟ್ಟೆ ಅಭಿವೃದ್ಧಿ ಸಮಿತಿಯ ಕೃಷ್ಣ ಪ್ರಸಾದ್‌ ಆಳ್ವ ಅವರು ಸಹಾಯಕ ಕಮಿಷನರ್‌ ಅವರಿಗೆ ವಿನಂತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next