Advertisement

ನಗರದ ವಿವಿಧೆಡೆ ಗಾಂಧಿ-ಶಾಸ್ತ್ರೀಜಿ ಜಯಂತಿ ಆಚರಣೆ

04:55 PM Oct 03, 2020 | Suhan S |

ದಾವಣಗೆರೆ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ದಿ. ಲಾಲ್‌ ಬಹದ್ದೂರ್‌ ಶಾಸ್ತ್ರೀ ಜಯಂತಿಯನ್ನು ಶುಕ್ರವಾರ ಮಹಾನಗರದ ವಿವಿಧ ಶಾಲಾ-ಕಾಲೇಜು, ಸಂಘ ಸಂಸ್ಥೆಗಳು ಅರ್ಥಪೂರ್ಣವಾಗಿ ಆಚರಿಸಿದವು. ಮಹಾನಗರದಲ್ಲಿ ಅಲ್ಲಲ್ಲಿ ನಡೆದ ಕಾರ್ಯಕ್ರಮ ವಿವರ ಇಂತಿದೆ:

Advertisement

ಕಸಾಪ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಯವರ ಜಯಂತಿಯನ್ನು ನಗರದ ಕುವೆಂಪು ಕನ್ನಡ ಭವನದಲ್ಲಿ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ್‌ ಕುರ್ಕಿ, ಎ.ಆರ್‌. ಉಜ್ಜಿನಪ್ಪ, ಬಿ. ದಿಳೆಪ್ಪ, ಜಿ.ಆರ್‌. ಷಣ್ಮುಖಪ್ಪ, ಬಿ. ವಾಮದೇವಪ್ಪ, ಸಾಲಿಗ್ರಾಮ ಗಣೇಶ್‌ ಶೆಣೈ, ಕೆ. ರಾಘವೇಂದ್ರ ನಾಯರಿ, ಬಿ.ವಿ. ರಾಜಶೇಖರ್‌, ಬಿ.ಎಂ. ಮುರುಗಯ್ಯ ಕುರ್ಕಿ, ಬಿ.ಎಸ್‌. ಜಗದೀಶ್‌, ಎಂ. ಬಸವರಾಜ್‌ ಇದ್ದರು.

ವಿಕರವೇ: ವಿಶ್ವ ಕರ್ನಾಟಕ ರಕ್ಷ‌ಣಾ ವೇದಿಕೆಯ ಜಿಲ್ಲಾ ಘಟಕದಿಂದ ವೇದಿಕೆ ಕಚೇರಿ ಎದುರು ಗಾಂಧೀಜಿ ಹಾಗೂ ಶಾಸ್ತ್ರೀಯವರ ಜಯಂತಿ ಆಚರಿಸಲಾಯಿತು. ರಾಜ್ಯಾಧ್ಯಕ್ಷ‌ ಕೆ.ಜಿ.ಯಲ್ಲಪ್ಪ ಮಾತನಾಡಿದರು. ಅಮ್ಜದ್‌ ಅಲಿ, ನಾರಾಯಣರಾವ್‌, ಆಜಮ್‌ ರಜ್ವಿ, ಶ್ರೀನಿವಾಸ್‌ ಇಂಡಿ, ಚಂದ್ರಶೇಖರ್‌ ಕೆ.ಗಣಪಾ, ಬಿ.ಸಂದೀಪ್‌, ಅಶೋಕ್‌ ರಾಜ್‌, ಕೆ.ಸಿ. ಕೇಶವಮೂರ್ತಿ, ಬುನಿಯನ್‌ ಭಾಸ್ಕರ್‌, ಸುರೇಶ್‌ ಹಾದಿಮನಿ, ಬಿ. ಮಾರುತಿ, ಕೆ.ವೈ. ಅಭಿಷೇಕ್‌, ಕೆ.ವೈ. ಅಲೋಕ್‌ ಇದ್ದರು.

ಕಟ್ಟಡ ಕಾರ್ಮಿಕರ ಸಂಘ: ಜಿಲ್ಲಾ ಕಾಂಗ್ರೆಸ್‌ ಇಂಟೆಕ್‌ ಕಟ್ಟಡ ಕಾರ್ಮಿಕರ ಸಂಘದ ವಿಭಾಗದಿಂದ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್‌ ಶಾಸ್ತ್ರೀ ಜಯಂತಿ ಆಚರಿಸಲಾಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವಕ್ತಾರ ಡಿ.ಬಸವರಾಜ್‌ ಮಾತನಾಡಿದರು. ಪ್ರಮುಖರಾದ ಕೆ.ಎಂ. ಮಂಜುನಾಥ್‌, ಅಬ್ದುಲ್‌ಘನಿ ತಾಹೀರ್‌, ಕೆ.ಜಿ. ರಹಮತ್‌ವುಲ್ಲಾ, ಲಿಯಾಕತ್‌ ಅಲಿ, ಅಲ್ಲಾವಲಿ ಮುಜಾಹಿದ್‌, ಬಿ. ವಿನಾಯಕ ಇದ್ದರು.

ಅನ್‌ಮೋಲ್‌: ಅನ್‌ಮೋಲ್‌ ವಿದ್ಯಾಸಂಸ್ಥೆಯಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕೋಟ್ರೇಶ್‌ ಯು., ಉಮೇಶ್‌ಎಸ್‌.ಎಂ.,ಸಾರ್ವಜನಿಕ ಸಂಪರ್ಕಾಧಿಕಾರಿ ಲಿಂಗರಾಜ್‌, ನಿಲಯ ಪಾಲಕ ಆನಂದ್‌, ಅಕೌಂಟೆಂಟ್‌ ವಿಜಯ ಎಂ. ಇನ್ನಿತರರು ಭಾಗವಹಿಸಿದ್ದರು.

Advertisement

ಬಾಪೂಜಿ ಸಿ.ಬಿ.ಎಸ್‌.ಇ .ಶಾಲೆ: ಬಾಪೂಜಿ ಸಿ.ಬಿ.ಎಸ್‌.ಇ .ಶಾಲೆಯಲ್ಲಿ ಗಾಂಧಿ ಮತ್ತು ಶಾಸ್ತ್ರೀ ಜಯಂತಿ ಆಚರಿಸಲಾಯಿತು. ಪ್ರಾಂಶುಪಾಲ ಸಮರೇಂದ್ರ ಪಾಣಿಗ್ರಹಿ, ಶೈಕ್ಷಣಿಕ ಮಾರ್ಗದರ್ಶಕ ಸಿ. ಮಂಜಪ್ಪ ರವರ ಉಪಸ್ಥಿತಿಯಲ್ಲಿ ಸರಳವಾಗಿ ಆಚರಿಸಲಾಯಿತು. ಸುಮಂಗಲ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಎಲ್ಸಿ ಲೂಯಿಸ್‌ ಮತ್ತು ಸುಮ ಕುಲಕರ್ಣಿ ಹಾಗೂ ಶಾಲೆಯ ಬೋಧಕ ಹಾಗೂ ಬೋಧಕೇತರ ವರ್ಗದವರು ಇದ್ದರು.

ಸರಕಾರಿ ಕಾಲೇಜು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು. ಪ್ರಾಂಶುಪಾಲ ಶಂಕರಯ್ಯ, ಪ್ರಾಧ್ಯಾಪಕರಾದ ಭೀಮಣ್ಣ ಸುಣಗಾರ, ಗಿರಿಸ್ವಾಮಿ, ಗುರುಮೂರ್ತಿ, ತಿಪ್ಪಾರೆಡ್ಡಿ ರಾಜಮೋಹನ್‌, ವೀರೇಶ್‌, ಮೊಹಮ್ಮದ್‌ ಖಾನ್‌, ರುದ್ರಪ್ಪ, ದಾದಾಪೀರ್‌, ಸುರೇಶ್‌, ಮಂಜಣ್ಣ, ಮರಳುಸಿದ್ದಪ್ಪ, ಲಕ್ಷ್ಮಣ. ಬಿ.ಎಚ್‌., ವೆಂಕಟೇಶ್‌ ಬಾಬು, ದಿನೇಶ್‌, ತಿರುಮಲ, ಕೊಟ್ರಪ್ಪ, ಶಾಂತಕುಮಾರಿ, ವ್ಯವಸ್ಥಾಪಕ ಮಂಜುಳಮ್ಮ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ದಾವಣಗೆರೆ ವಿವಿ: ದಾವಣಗೆರೆ ವಿಶ್ವವಿದ್ಯಾನಿಲಯ ಆವರಣದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಪ್ರಭಾರ ಕುಲಸಚಿವೆ ಪ್ರೊ.ಎಚ್‌.ಎಸ್‌. ಅನಿತಾ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಜಯಂತ್ಯುತ್ಸವಕ್ಕೆ ಚಾಲನೆ ನೀಡಿದರು. ಕಲಾ ನಿಕಾಯದ ಡೀನ್‌ ಪ್ರೊ. ಕೆ.ಬಿ.ರಂಗಪ್ಪ, ವಿಜ್ಞಾನ ನಿಕಾಯದ ಡೀನ್‌ ಪ್ರೊ. ವಿ.ಕುಮಾರ್‌, ಪ್ರೊ.ಲಕ್ಷ್ಮಣ, ಡಾ. ವೆಂಕಟೇಶ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next