ಹಾನಗಲ್ಲ: ಸತ್ಯ, ಶಾಂತಿ, ಅಹಿಂಸೆಯ ಪ್ರತಿರೂಪವಾದ ಮಹಾತ್ಮ ಗಾಂಧೀಜಿ ಅವರು ತಮ್ಮ ದಿಟ್ಟ ಹೋರಾಟ, ಚಳವಳಿಯ ಮೂಲಕ ಜಾಗತಿಕ ನಾಯಕರಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದ್ದಾರೆ.
ಗಾಂಧಿ ಜಯಂತಿ ಕುರಿತು ಪ್ರತಿಕಾ ಪ್ರಕಟಣೆ ನೀಡಿರುವ ಅವರು, ದಂಡಿ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿಯಂತಹ ಅನೇಕ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಪಾಲಿಸುವ ಮೂಲಕ ಸಾರ್ಥಕ ಜೀವನ ನಡೆಸಿದಾಗ ಮಾತ್ರ ಇಂತಹ ದಿನಾಚರಣೆಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದ್ದಾರೆ.
ಹಾನಗಲ್ಲ ತಾಲೂಕು ಆಡಳಿತ ಮಹನೀಯರ ಜಯಂತಿ ಅಂಗವಾಗಿ ಸ್ವತ್ಛತಾ ಅಭಿಯಾನ ನಡೆಸುವುದರೊಂದಿಗೆ ರಕ್ತದಾನ ಮಾಡುವ ಮೂಲಕ ಜೀವದಾನ ಹಬ್ಬ ಆಚರಿಸುತ್ತಿದೆ. ನಾವು ಮಾಡುವ ಅನ್ನದಾನ, ವಸ್ತ್ರದಾನ, ದವಸ ಧಾನ್ಯ ದಾನ, ಹಣ ದಾನಗಳು ತಾತ್ಕಾಲಿಕ ದಾನಗಳಾಗಿವೆ. ಆದರೆ, ರಕ್ತದಾನ ಒಬ್ಬರಿಗೆ ಜೀವದಾನ ಮಾಡಿದ ಶ್ರೇಷ್ಠ ದಾನವಾಗಿದೆ ಎಂದಿದ್ದಾರೆ. ಮಹಾತ್ಮ ಗಾಂ ಧೀಜಿ ಅವರ ಸ್ವತ್ಛ ಭಾರತದ ಕನಸು ಈಡೇರಿಸುವ ಉದ್ದೇಶದಿಂದ, ಸದೃಢ ಹಾಗೂ ಸ್ವತ್ಛ ಭಾರತ ನಿರ್ಮಾಣಕ್ಕೆ ಅಕ್ಟೋಬರ್ 3 ರಿಂದ 9ರ ವರೆಗೆ ಸ್ವತ್ಛತಾ ಸಪ್ತಾಹ ಆಚರಣೆಗೆ ಮುಂದಾಗಿದ್ದು, ತಹಶೀಲ್ದಾರ್ ನೇತೃತ್ವದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಬೆಳಿಗ್ಗೆ 7 ರಿಂದ 9 ಗಂಟೆ ವರೆಗೆ ಸ್ವತ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ:ಟಾಟಾ ಏಸ್-ಬೊಲೇರೋ ಭೀಕರ ಅಪಘಾತ :6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ
ಪಟ್ಟಣದ ಜನತೆಯ ಕುಡಿಯುವ ನೀರಿನ ಮೂಲವಾದ ಆನಿಕೆರೆ, ತಾರಕೇಶ್ವರ ದೇವಸ್ಥಾನ, ಮುಕ್ತಿಧಾಮ, ಕನಕದಾಸ ಉದ್ಯಾನವನ ಹಾಗೂ ಮುಖ್ಯ ರಸ್ತೆಗಳ ಸ್ವತ್ಛತಾ ಕಾರ್ಯಕ್ರಮ ಕೈಗೊಳ್ಳುತ್ತಿದ್ದಾರೆ. ಕಾರಣ ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ಸಹಕರಿಸುವಂತೆ ಸಿ.ಎಂ.ಉದಾಸಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ರಾಯಲ್ ಕದನದಲ್ಲಿ ಟಾಸ್ ಗೆದ್ದ ಸ್ಮಿತ್ ಪಡೆ ಬ್ಯಾಟಿಂಗ್ ಆಯ್ಕೆ