ಎಚ್.ಡಿ.ಕೋಟೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಓರ್ವ ಸಂತನಾಗಿ ಬುದ್ಧ, ಬಸವಣ್ಣ ಅವರಂತೆ ಅಹಿಂಸೆ, ಸತ್ಯದ ತತ್ವದಡಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ಮಾನವತವಾದಿ ಎಂದು ತಹಶೀಲ್ದಾರ್ ಆರ್.ಮಂಜುನಾಥ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಪುರುಷರ ಆದರ್ಶ ಮೌಲ್ಯಗಳು ಕೇವಲ ಔಪಚಾರಿಕವಾಗಿರದೆ ಅವರ ಅಲೋಚನೆಗಳನ್ನು ಮೈಗೂಡಿಸಿಕೊಂಡು ನೀರೆರೆಯುವಂತಾಗಬೇಕು ಹಾಗೂ ಮಹಾತ್ಮ ಗಾಂಧೀಜಿ ಅವರ ಬದುಕಿನ ಮೌಲ್ಯಗಳು ಉನ್ನತೀಕರಣಗೊಳ್ಳಬೇಕು, ಆನಿಟ್ಟಿನಲ್ಲಿ ಮಹಾಪುರುಷರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಗಾಂಧೀಜಿ ಅವರು ಕಂಡಂತೆ ಆದರ್ಶ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ನುಡಿದರು.
ದೇಶ ಕಂಡ ಶ್ರೇಷ್ಠ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಶುಭಾಶಯ ಕೋರಿ ಸಿಹಿ ಹಂಚಲಾಯಿತು. ಜಿಪಂ ಸದಸ್ಯ ವೆಂಕಟಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷ ಪ್ರಮೋದ್, ಉಪತಹಶೀಲ್ದಾರ್ ಆನಂದ್, ಪುಟ್ಟಸ್ವಾಮಿ, ಶಿರಸ್ತೇದಾರ್ ಹೊ.ರಮೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಂದ್ರಪ್ಪ, ಕೇತ್ರ ಶಿಕ್ಷಣಾಕಾರಿ ಎಸ್.ಸುಂದರ್, ಸೆಸ್ಕ್ ಎಇಇ ಚಿದಂಬರ ಇತರರು ಇದ್ದರು.