Advertisement

ಗಾಂಧೀಜಿ ವ್ಯಕ್ತಿಯಲ್ಲ ಶಕ್ತಿ: ರಾಜಾರಾಮ

12:50 AM Jan 22, 2019 | Harsha Rao |

ಏತಡ್ಕ: ಗಾಂಧೀಜಿಯವರು ಕೇವಲ ವ್ಯಕ್ತಿ ಮಾತ್ರವಾಗಿರಲಿಲ್ಲ. ಅವರು ದೇಶದ ಶಕ್ತಿಯಾಗಿದ್ದರು ಎಂಬುದಾಗಿ ಏತಡ್ಕ ಶಾಲಾ ಅಧ್ಯಾಪಕ ರಾಜಾರಾಮ ಕೆ.ವಿ. ಹೇಳಿದರು.

Advertisement

ಏತಡ್ಕದ ಕುಂಬಾxಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜ ಮಂದಿರದಲ್ಲಿ ಗಾಂಧೀಜಿಯವರ ಐವತ್ತನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಜರಗಿದ ಗಾಂಧಿ ಸ್ಮೃತಿ ಕಾರ್ಯ ಕ್ರಮದಲ್ಲಿ ಗೋರೂರು ರಾಮಸ್ವಾಮಿ ಅಯ್ಯಂಗಾರ್‌ ಅನುವಾದಿಸಿದ ಗಾಂಧೀಜಿಯವರ ಆತ್ಮಕಥೆ “ನನ್ನ ಸತ್ಯಾನ್ವೇಷಣೆ’ ಕೃತಿಯ ಕುರಿತು ಅವರು ಮಾತನಾಡಿದರು.

ಸಾಮಾನ್ಯವಾಗಿ ಹುಟ್ಟಿ ಅಸಾಮಾನ್ಯ ಕಾರ್ಯಗಳನ್ನು ಸಾಧಿಸಿ, ಮಹಾತ್ಮನಾಗಿ ಲೋಕ ವಿಖ್ಯಾತರಾದ ಗಾಂಧೀಜಿಯವರ ಆತ್ಮ ಚರಿತ್ರೆಯನ್ನು ಗೋರೂರು ಅವರು ಗ್ರಾಮೀಣ ಸೊಗಡಿನಲ್ಲಿ ಸೊಗಸಾಗಿ ಅನುವಾದಿಸಿದ್ದಾರೆ ಎಂದರು. ವಿವಿಧ ಭಾಗಗಳಲ್ಲಿ ವಿಸ್ತಾರವಾಗಿ ಬರೆಯಲ್ಪಟ್ಟ ಕೃತಿಯ ಮುಖ್ಯಾಂಶಗಳನ್ನು ಸಭಿಕರ ಮುಂದಿರಿಸಿದರು.

ನಿವೃತ್ತ  ಪ್ರಾಂಶುಪಾಲ ದೂಮಪ್ಪ ಮೂಲ್ಯ ಮಾತನಾಡಿ ಕಾಲಘಟ್ಟದ ಅವಶ್ಯಕತೆ ಗನುಸಾರ ಮಹಾತ್ವರ ಜನನವಾಗುತ್ತದೆ ಎಂದು ಹೇಳಿ ಗಾಂಧೀಜಿಯವರ ಜೀವನದ ವಿವಿಧ ಮಜಲುಗಳ ಸಿಂಹಾವಲೋಕನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್‌ ಐವತ್ತು ವರ್ಷಗಳ ಹಿಂದೆ ಜರಗಿದ ಗಾಂಧಿ ಜನ್ಮ ಶತಮಾನೋತ್ಸವವನ್ನು ಸ್ಮರಿಸಿದರು.

ಶಾಲಾ ವಿದ್ಯಾರ್ಥಿನಿಯರಾದ ಅರ್ಚನಾ ಮತ್ತು ರಾಜಲಕ್ಷಿ$¾à ಗಾಂಧೀಜಿಯವರ ಬಗ್ಗೆ ಚಿಕ್ಕ ಚೊಕ್ಕ ಭಾಷಣ ಮಾಡಿದರು. ದೇಶಭಕ್ತಿ ಗೀತೆಗಳನ್ನು ಹಾಡಿದರು. ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್‌ ಸ್ವಾಗತಿಸಿದರು. ಕಾರ್ಯ ದರ್ಶಿ ಕೆ. ಸುಬ್ರಹ್ಮಣ್ಯ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಡಾ| ವೇಣುಗೋಪಾಲ ಕಳೆಯತ್ತೋಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next