Advertisement

ಮೋಟಗೊಂಡನಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

05:16 PM Oct 02, 2019 | Suhan S |

ಮಾಗಡಿ: ಸ್ವಚ್ಛತೆ, ನೈರ್ಮಲ್ಯ ಕಂದಾಯ ವಸೂಲಿ ಇನ್ನಿತರೆ ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಗ್ರಾಮ ಪಂಚಾಯ್ತಿಗೆ 2018-2019 ನೇ ಸಾಲಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಮಾಗಡಿ ತಾಲೂಕಿನ ಸೋಲೂರು ಹೋಬಳಿ ಮೋಟಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.

Advertisement

ಬುಧವಾರ ಬೆಂಗಳೂರಿನ ಬ್ಯಾಂಕೆಟ್‌ ಹಾಲ್‌ನಲ್ಲಿ ನಡೆಯಲಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಗ್ರಾಪಂ ಅಧ್ಯಕ್ಷರು, ತಾಪಂ ಇಒ ಹಾಗೂ ಜಿಪಂ ಸಿಇಒ ಇವರಿಗೆ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಪಂಚಾಯ್ತಿಯ ಸಮಗ್ರ ಪ್ರಗತಿ, ಸಾಂಸ್ಥಿಕ ಮತ್ತು ಸೂಚ್ಯಾಂಕಗಳ ಆಧಾರದ ಮೇಲೆ, ರಾಜ್ಯದ ಎಲ್ಲಾ 175 ತಾಲೂಕುಗಳಿಗೂ ಒಂದೊಂದು ಪುರಸ್ಕಾರ ನೀಡಲು ಆಯ್ಕೆ ಮಾಡಿದೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಕಾರ್ಯಗಳ ಸಾಂಸ್ಥಿಕ ಮತ್ತು ಪ್ರಗತಿಯ 150 ಅಂಕ ಗಳ 80 ಪ್ರಶ್ನೆಗಳನ್ನು ಹಂಚಿ ತಂತ್ರಾಂಶದ ಮೂಲಕ ಸೂಕ್ತ ದಾಖಲೆಗಳ ಸಮೇತ ಕೇಳಲಾಗಿತ್ತು.

ಪುರಸ್ಕಾರ ಪ್ರಶಸ್ತಿ 5 ಲಕ್ಷ ರೂ., ಪಾರಿತೋಷಕ ಹಾಗೂ ಅಭಿನಂದನಾ ಪತ್ರ ಒಳಗೊಂಡಿದೆ. ಗ್ರಾಮ ಪಂಚಾಯ್ತಿ ಆಡಳಿತಾತ್ಮಕ ಸಂಘಟನಾತ್ಮಕ ಕಾರ್ಯಕ್ಕೆ ಪುರಸ್ಕಾರ ಲಭಿಸಿದೆ. ಇನ್ನೊಷ್ಟು ಉತ್ತಮ ಕಾರ್ಯಕ್ಕೆ ಪ್ರೇರಣೆ ಆಗಿದೆ ಎಂದು ಪಿಡಿಒ ನರಸಿಂಹಮೂರ್ತಿ ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next