Advertisement

ಸೂಳೇಭಾವಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

10:38 AM Oct 02, 2019 | Suhan S |

ಅಮೀನಗಡ: ರಾಜ್ಯ ಸರ್ಕಾರ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತ್‌ಗೆ ಲಭಿಸಿದೆ. ಅ. 2 ಮಹಾತ್ಮ ಗಾಂಧೀಜಿ ಜಯಂತಿ ದಿನದಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Advertisement

ಶೇ. 95 ಶೌಚಾಲಯ ನಿರ್ಮಾಣ: ಸೂಳೇಭಾವಿ ಗ್ರಾಮದಲ್ಲಿ 2011ರ ಜನಗಣತಿ ಪ್ರಕಾರ 10176 ಜನಸಂಖ್ಯೆ ಹೊಂದಿದೆ ಮತ್ತು 1869 ಮನೆಗಳು ಇವೆ. ಸೂಳೇಭಾವಿ ಗ್ರಾಪಂ ಅಡಿಯಲ್ಲಿ ಗ್ರಾಮದಲ್ಲಿ ಶೇ. 95 ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. 5 ಬಯಲು ಶೌಚಾಲಯಗಳಲ್ಲಿ ಮೂರು ಬಯಲು ಶೌಚಾಲಯಗಳು ಈಗಾಗಲೇ ನಿರ್ಮಾಣಗೊಂಡಿವೆ ಮತ್ತು ಇನ್ನೆರಡು ಬಯಲು ಶೌಚಾಲಯ ನಿರ್ಮಾಣ ಹಂತದಲ್ಲಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಶಾಲೆ ಕಾಲೇಜು ವಿದ್ಯಾರ್ಥಿಗಳಿಂದ ಶೌಚಾಲಯ ಬಳಕೆ ಮಾಡುವಂತೆ ಗ್ರಾಮದಲ್ಲಿ ಜಾಗೃತಿ ಮಾಡಲಾಗಿದೆ.

ಗ್ರಾಪಂ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಸಾರ್ವಜನಿಕರಿಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮತ್ತು ಶೌಚಾಲಯ ಬಳಕೆ ಮಾಡುವಂತೆ ಗ್ರಾಮದಲ್ಲಿ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಶೌಚಾಲಯದಲ್ಲಿ ಶೇ. 95 ಶೌಚಾಲಯ ನಿರ್ಮಾಣ ಮಾಡುವ ಗುರಿ ತಲುಪಲು ಸಾಧ್ಯವಾಗಿದೆ.

ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಜನರ ಸಹಕಾರದಿಂದ ಗ್ರಾಪಂ ಪಂಚಾಯತಿಗೆ ಗಾಂಧಿ  ಗ್ರಾಮ ಪುರಸ್ಕಾರ ಲಭಿಸಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರಶಸ್ತಿ ಸಹಕಾರಿಯಾಗಿದೆ. -ನಾಗೇಂದ್ರಸಾ ನಿರಂಜನ,ಅಧ್ಯಕ್ಷರು ಗ್ರಾಪಂ ಸೂಳೇಭಾವಿ

ಗ್ರಾಮದ ಅಭಿವೃದ್ಧಿ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಸೂಳೇಭಾವಿ ಗ್ರಾಪಂ ಸದಸ್ಯರ ಉತ್ತಮ ಕಾರ್ಯ ನಿರ್ವಹಣೆ ಕಾರಣ. ರಾಷ್ಟ್ರಮಟ್ಟದ ಪ್ರಶಸ್ತಿಯೂ ಲಭಿಸಲಿ.-ಎಸ್‌.ಜಿ. ನಂಜಯ್ಯನಮಠ,ಮಾಜಿ ಶಾಸಕರು

Advertisement

 ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಸಿಬ್ಬಂದಿಗಳ ಸಹಕಾರದಿಂದ ಗ್ರಾಪಂ ಗಾಂಧಿ ಗ್ರಾಮ ಪ್ರಶಸ್ತಿಗೆ

ಭಾಜನವಾಗಿದೆ. ಗ್ರಾಮದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಸಹಕಾರಿಯಾಗುತ್ತದೆ. ಎಂ.ಎ. ದಖನಿ,ಪಿಡಿಒ ಸೂಳೇಭಾವಿ

Advertisement

Udayavani is now on Telegram. Click here to join our channel and stay updated with the latest news.

Next