Advertisement
2018-19ನೇ ಸಾಲಿನ ಪ್ರಗತಿಯ ನ್ನಾಧರಿಸಿ, ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕ ಗಳನ್ನೊಳಗೊಂಡ ಮಾರ್ಗಸೂಚಿಗಳನ್ನೊಳ ಗೊಂಡ 150 ಅಂಕಗಳ ಪ್ರಶ್ನಾವಳಿಗಳನ್ನು ಪಂಚ ತಂತ್ರಾಂಶದಿಂದ ಉತ್ತರಿಸುವ ಮೂಲಕ ಗ್ರಾ.ಪಂ.ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅದರಲ್ಲಿ ರಾಜ್ಯದಲ್ಲಿ 5,925 ಗ್ರಾ.ಪಂ.ಗಳು ಅರ್ಜಿ ಸಲ್ಲಿಸಿದ್ದವು. ಈ ಗ್ರಾ.ಪಂ.ಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ತಾಲೂಕಿಗೆ ಐದು ಗ್ರಾ.ಪಂ.ಗಳನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಿ ಅನಂತರ ಜಿ.ಪಂ.ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿಯ ಮೂಲಕ ತಾಲೂಕಿಗೆ ಒಂದರಂತೆ ಗ್ರಾ.ಪಂ.ಗಳನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ .
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ, ಕಾರ್ಯದರ್ಶಿ ನೀಲು ಅವರ ಮಾರ್ಗದರ್ಶನದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶ್ರೀವಾಣಿ ಅಡಿಗ, ಉಪಾಧ್ಯಕ್ಷರಾಗಿ ಮಹಾಬಲೇಶ್ವರ ಆಚಾರ್ ಕುಂಭಾಸಿ, ಸದಸ್ಯರಾದ ರಾಧಾದಾಸ್, ಕಮಲಾಕ್ಷ ಪೈ, ರಾಘವೇಂದ್ರ ಮೊಗವೀರ, ಲಕ್ಷ್ಮಣ ಕಾಂಚನ್, ರಾಘವೇಂದ್ರ ಪೂಜಾರಿ, ಸಾಲು, ಸುಕನ್ಯಾ ಶೆಟ್ಟಿ, ಶ್ರೀಲತಾ ಪೂಜಾರಿ, ಗುರುರಾಜ್, ಬಾಬು, ಶಾರದಾ ಪೂಜಾರಿ, ಪುಷ್ಪಲತಾ ಹಾಗೂ ಸಿಬಂದಿ ಅವರು ಜನಸೇವೆಗಾಗಿ ಸದಾ ಸ್ಪಂದಿಸುತ್ತಿದ್ದಾರೆ.
Related Articles
ಸರಕಾರ ಶಿಫಾರಸು ಮಾಡಲಾದ ಗ್ರಾಮ ಪಂಚಾಯ ತ್‌ಗಳನ್ನು ಗಾಂಧಿ ಜಯಂತಿಯಂದು ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದೆ.
Advertisement
ಗ್ರಾಮಸ್ಥರಿಂದ ಸಹಕಾರಗ್ರಾಮದ ಮೂಲ ಸಮಸ್ಯೆಗಳಿಗೆ ಗ್ರಾ.ಪಂ. ಸರ್ವ ಸದಸ್ಯರು ಸದಾ ಸ್ಪಂದಿಸುವ ಜತೆಗೆ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿಸಬೇಕು ಎನ್ನುವ ಉದ್ದೇಶಕ್ಕೆ ಪೂರಕವಾಗಿ ಗ್ರಾಮಸ್ಥರಿಂದ ಪೂರ್ಣ ಪ್ರಮಾಣದ ಸಹಕಾರ ದೊರೆತಿರುವುದರಿಂದ ಕುಂಭಾಸಿ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಗೌರವ ಸಂದಿದೆ.
– ಮಹಾಬಲೇಶ್ವರ ಆಚಾರ್,ಉಪಾಧ್ಯಕ್ಷರು,ಗ್ರಾ.ಪಂ. ಕುಂಭಾಸಿ ಆಯ್ಕೆಯಿಂದ ಸಂತಸ
2018 -19 ನೇ ಸಾಲಿನ ಗ್ರಾ.ಪಂ.ನ ಪ್ರಗತಿಯನ್ನು ಆಧರಿಸಿ, ಕುಂದಾಪುರ ತಾಲೂಕಿನ ಸುಮಾರು ಐದು ಗ್ರಾ.ಪಂ.ಗಳಲ್ಲಿಯೇ ಅತೀ ಹೆಚ್ಚು ಅಂಕ ಗಳಿಸಿದ ಕುಂಭಾಸಿ ಗ್ರಾ.ಪಂ.ಆಯ್ಕೆಯಾಗಿರುವುದು ಸಂತಸ ತಂದಿದೆ. ಸಂಘಟನಾತ್ಮಕ ಕಾರ್ಯದಿಂದಾಗಿಯೇ ಇಂದು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ.
-ಜಯರಾಮ ಶೆಟ್ಟಿ, ಪಿಡಿ ಒ