Advertisement
2018-19ನೇ ಸಾಲಿನಲ್ಲಿ ಪಂಚಾಯತ್‌ನ ಪಾರದರ್ಶಕ ಆಡಳಿತ, ಆರ್ಥಿಕ ಪ್ರಗತಿ, ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನ ಪರಿಗಣಿಸಿ ಗ್ರಾಮೀಣಾಭಿವೃದ್ಧಿ ,ಪಂಚಾಯತ್‌ರಾಜ್ ಇಲಾಖೆಯು ಕಡ್ತಲ ಪಂಚಾಯತ್‌ನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅ. 2ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
Related Articles
ಗ್ರಾಮೀಣ ಪಂಚಾಯತ್ ರಸ್ತೆಯು ಅಭಿವೃದ್ಧಿಗೊಂಡಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಬಹುದೆಂಬ ಚಿಂತನೆಯೊಂದಿಗೆ ಶಾಸಕ ಸುನಿಲ್ ಕುಮಾರ್ ಅವರಲ್ಲಿ ಮನವಿ ಮಾಡಿ ನಗರೋತ್ಥಾನ ಯೋಜನೆಯಡಿ ಅನುದಾನ ಮಂಜೂರುಗೊಳಿಸಿ ಕಡ್ತಲ
ಪೇಟೆಯ ರಸ್ತೆ ವಿಸ್ತರಣೆ ಜತೆ ವಿಭಾಜಕ ಅಳವಡಿಸಿ ವಿದ್ಯುದೀಕರಣ ಗೊಳಿಸಲಾಗಿದೆ.
Advertisement
ಗ್ರಾಮದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗಿದ್ದು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಆಂದೋಲನ ನಡೆಸುವ ಜತೆಗೆ ಜನಜಾಗೃತಿ ಮೂಡಿಸಲಾಗಿದೆ.
ಸಮಗ್ರ ಅಭಿವೃದ್ಧಿಸುಮಾರು 15 ಕೋ. ರೂ. ವೆಚ್ಚದಲ್ಲಿ ಪಂಚಾಯತ್ ವ್ಯಾಪ್ತಿಯ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದ್ದು, 5 ವಿಶಾಲ ಸೇತುವೆಗಳನ್ನು ವಿವಿಧ ಅನುದಾನ ಬಳಸಿ ನಿರ್ಮಿಸಲಾಗಿದೆ. ತೀಥೊìಟ್ಟು, ಪಟ್ಟಿಬಾವು, ದಬುìಜೆ, ಕೋಂಬೆ, ಬೆಂಬರಬೈಲುಗಳಲ್ಲಿ ಸೇತುವೆ ನಿರ್ಮಿಸಲಾಗಿದೆ. ಮುಂದಿನ ಯೋಜನೆಗಳು
ಪಂಚಾಯತ್ ವ್ಯಾಪ್ತಿಯಲ್ಲಿ ಮಾದರಿ ಶ್ಮಶಾನ ನಿರ್ಮಾಣ, ಮಾದರಿ ಅಂಗನ ವಾಡಿ, ತೀಥೊìಟ್ಟು ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಾಣ, ಉದ್ಯಾನವನ, ಕುಕ್ಕಜೆ ಪೇಟೆಗೆ ಇಂಟರ್‌ಲಾಕ್ ಅಳವಡಿಕೆ, ಎಲ್ಲ ಸರಕಾರಿ ಕಚೇರಿ ಒಳಗೊಂಡ ಗ್ರಾಮ ಸೌಧ ನಿರ್ಮಾಣ, ಸೋಲಾರ್ ಅಳವಡಿಕೆ, ನಗದುರಹಿತ ವ್ಯವಹಾರ ಅಳವಡಿಸುವ ಯೋಜನೆ ಪಂಚಾಯತ್ ಆಡಳಿತ ಹೊಂದಿದೆ. ಸೇವಾ ಮನೋಭಾವ
ಪಂಚಾಯತ್ ಆಡಳಿತದ ನಿರಂತರ ಸೇವಾ ಮನೋಭಾವದಿಂದಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದ್ದು ಇದೀಗ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಪಂಚಾಯತ್ ಸದಸ್ಯರ ಸಹಕಾರ, ಪಿಡಿಒರವರ ಅಭಿವೃದ್ಧಿ ಪರ ಚಿಂತನೆ, ಸಿಬಂದಿ ವರ್ಗದ ಸೇವಾ ಮನೋಭಾವ, ಗ್ರಾಮಸ್ಥರ ಸಹಕಾರ, ಸಲಹೆ ಸೂಚನೆಯಿಂದಾಗಿ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ.
-ಅರುಣ್ ಕುಮಾರ್ ಹೆಗ್ಡೆ, ಅಧ್ಯಕ್ಷರು, ಗ್ರಾ.ಪಂ. ಕಡ್ತಲ ಇನ್ನಷ್ಟು ಅಭಿವೃದ್ಧಿ ಕಾರ್ಯ
ಉತ್ತಮ ಆಡಳಿತ ಮಂಡಳಿ ಹಾಗೂ ಜನತೆಯ ಸೂಕ್ತ ಸ್ಪಂದನೆಯಿಂದಾಗಿ ಸರಕಾರದ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲಾಗುವುದು.
-ಫರ್ಜಾನಾ ಎಂ, ಪಿಡಿಒ,ಗ್ರಾ.ಪಂ. ಕಡ್ತಲ