ಮುಂಬಯಿ: ರಾಜಕುಮಾರ್ ಸಂತೋಷಿ ನಿರ್ದೇಶನದ ಟೈಟಲ್ ನಿಂದಲೇ ಗಮನ ಸೆಳೆದಿರುವ ʼಗಾಂಧಿ-ಗೋಡ್ಸೆ ಏಕ್ ಯುದ್ಧ್ʼ ಸಿನಿಮಾದ ಮೋಷನ್ ಪಿಕ್ಚರ್ ಮಂಗಳವಾರ ( ಡಿ27 ರಂದು) ರಿಲೀಸ್ ಆಗಿದೆ.
ʼಅಂದಾಜ್ ಅಪ್ನಾ ಅಪ್ನಾʼ,ʼ ಘಾಯಲ್ʼ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ರಾಜಕುಮಾರ್ ಸಂತೋಷಿ 2013 ರಲ್ಲಿ ʼ ಫಟಾ ಪೋಸ್ಟರ್ ನಿಖಲಾ ಹೀರೋʼ ಸಿನಿಮಾವನ್ನು ಮಾಡಿದ್ದರು. ಆ ಬಳಿಕ 9 ವರ್ಷದ ನಂತರ ʼಗಾಂಧಿ-ಗೋಡ್ಸೆ ಏಕ್ ಯುದ್ಧ್ʼ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
2023 ರ ಜನವರಿ 26ರಂದು ಈ ಸಿನಿಮಾ ತೆರೆಗೆ ಬರಲಿದ್ದು, ಮೊದಲ ಹಂತವಾಗಿ ಸಿನಿಮಾದ ಮೋಷನ್ ಪಿಕ್ಚರ್ ರಿಲೀಸ್ ಆಗಿದೆ.
ಮಹಾತ್ಮ ಗಾಂಧಿ ಮತ್ತು ನಾಥೂರಾಂ ಗೋಡ್ಸೆ ನಡುವಿನ ಸಿದ್ಧಾಂತಗಳ ಯುದ್ಧವನ್ನು ಮೋಷನ್ ಪಿಕ್ಚರ್ ನಲ್ಲಿ ತೋರಿಸಲಾಗಿದೆ. ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಸೇರಿದಂತೆ ಇತಿಹಾಸದ ಇತರ ಪ್ರಮುಖ ಪಾತ್ರಗಳ ಗ್ಲಿಂಪ್ಸ್ ಗಳನ್ನು ಮೋಷನ್ ಪಿಕ್ಚರ್ ನಲ್ಲಿ ತೋರಿಸಿದ್ದಾರೆ.
ಸಿನಿಮಾದಲ್ಲಿ ಗಾಂಧಿ ಅವರ ಪಾತ್ರವನ್ನು ದೀಪಕ್ ಅಂತನಿ ನಿರ್ವಹಿಸಿದರೆ, ಚಿನ್ಮಯ್ ಮಾಂಡ್ಲೇಕರ್ ನಾಥುರಾಮ್ ಗೋಡ್ಸೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂತೋಷಿ ಪ್ರೊಡಕ್ಷನ್ಸ್ , ಪಿವಿಆರ್ ಪಿಕ್ಚರ್ಸ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಎ.ಆರ್.ರಹೆಮಾನ್ ಮ್ಯೂಸಿಕ್ ನೀಡಿದ್ದಾರೆ. ಅಂದ ಹಾಗೆ ಈ ಸಿನಿಮಾ ಶಾರುಖ್ ಖಾನ್ ಅವರ ʼಪಠಾಣ್ʼ ಸಿನಿಮಾ ಬಿಡುಗಡೆಯಾದ ಒಂದು ದಿನ ಬಳಿಕ ರಿಲೀಸ್ ಆಗಲಿದೆ.