Advertisement

ಶೀಘ್ರದಲ್ಲೇ ಮೇಲೇಳಲಿದೆ ಗಾಂಧಿಭವನ!

03:45 PM Jul 23, 2018 | |

ಬಳ್ಳಾರಿ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭವನ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.

Advertisement

ಗಾಂಧೀಜಿಯವರ ಚಿಂತನೆಗಳತ್ತ ಯುವ ಸಮುದಾಯವನ್ನು ಸೆಳೆಯುವುದು, ಗಾಂಧಿ ವಿಚಾರಧಾರೆಗಳನ್ನು ರಾಜ್ಯದುದ್ದಕ್ಕೂ ಪಸರಿಸುವುದು ಭವನದ ಮುಖ್ಯ ಉದ್ದೇಶ. ಗಾಂಧಿ ಭವನ ನಿರ್ಮಾಣಕ್ಕೆ ನಿವೇಶನ ದೊರೆತ ರಾಜ್ಯದ 10 ಜಿಲ್ಲೆಗಳಲ್ಲಿ ಕಾಮಗಾರಿ ಚಾಲನೆ ಪಡೆದುಕೊಂಡ ಏಕೈಕ ಜಿಲ್ಲೆ ಬಳ್ಳಾರಿಯಾಗಿದೆ.

ಅನುದಾನ ಮೀಸಲು: ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಂಡಿಸಿದ್ದ ನಾಲ್ಕನೇ (2016-17ನೇ) ಬಜೆಟ್‌ನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿತ್ತು. ಅದಕ್ಕಾಗಿ ಪ್ರತಿ ಜಿಲ್ಲೆಗೆ 3 ಕೋಟಿ ರೂ.ಗಳಂತೆ ಅಂದಾಜು 30 ಜಿಲ್ಲೆಗಳಿಗೆ 90 ಕೋಟಿ ರೂ.ಮೀಸಲಿರಿಸಲಾಗಿತ್ತು. 

ರೂಪುರೇಷೆ ಸಿದ್ಧ: ಆಯಾ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿಭವನ ನಿರ್ಮಾಣಕ್ಕೆ ಜಿಲ್ಲಾಡಳಿತವೇ ನಿವೇಶನ ಮಂಜೂರು ಮಾಡುವಂತೆ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಡಾ|ರಾಮ್‌ಪ್ರಸಾತ್‌ ಮನೋಹರ್‌ ಅವರು ಡಿಸಿ ಕಚೇರಿ ಆವರಣದ ಸ್ಪಂದನ ಕೇಂದ್ರ ಎದುರು ಖಾಲಿಯಿದ್ದ 2700 ಚದರಡಿ ವಿಸ್ತೀರ್ಣವುಳ್ಳ ನಿವೇಶನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೀಡಿದ್ದಾರೆ. 

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪನವರು ಗಾಂಧಿಭವನ ನಿರ್ಮಾಣದ ರೂಪುರೇಷೆ ಸಿದ್ಧಪಡಿಸಿ ಡಿಸಿ ಕಚೇರಿಗೆ ಸಲ್ಲಿಸಿದ್ದಾರೆ.

Advertisement

ಭೌಗೋಳಿಕಕ್ಕೆ ತಕ್ಕಂತೆ ವಿನ್ಯಾಸ: ಗಾಂಧಿಭವನದ ನಿರ್ಮಾಣಕ್ಕೆ ತಕ್ಕಂತೆ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮೈಸೂರು ಕರ್ನಾಟಕದ ಭೌಗೋಳಿಕತೆಗೆ ತಕ್ಕಂತೆ ಮೂರು ವಿನ್ಯಾಸಗಳನ್ನು ಸಿದ್ಧಪಡಿಸಲಾಗಿದೆ. ಅದಕ್ಕಾಗಿ ರಾಜ್ಯದಲ್ಲಿರುವ ಗಾಂಧಿವಾದಿಗಳೊಂದಿಗೆ ಚರ್ಚಿಸಿ, ಅವರ ಸಲಹೆ, ಸೂಚನೆಗಳನ್ನು ಪಡೆದು ಗಾಂಧಿಭವನದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಜತೆಗೆ ಸ್ಥಳೀಯ ಸಂಪನ್ಮೂಲವನ್ನೂ ಬಳಸಿಕೊಂಡು ಅಲ್ಲಿಯ ಪರಿಸರಕ್ಕೆ ತಕ್ಕಂತೆ ಭವನವನ್ನು ವಿನ್ಯಾಸಗೊಳಿಸಲು ನಿರ್ಧರಿಸಲಾಗಿದೆ. ಅದರ ನಿರ್ಮಾಣದ ಹೊಣೆಯನ್ನು ಸರ್ಕಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವಹಿಸಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಭವನದ ಮೇಲ್ವಿಚಾರಣೆ ಮತ್ತು ನಿರ್ವಹಣೆ ಮಾಡಲಿದೆ.

ಶೀಘ್ರ ಕಾಮಗಾರಿ ಪೂರ್ಣ: ರಾಜ್ಯದ ರಾಯಚೂರು, ಕೊಪ್ಪಳ, ಬೀದರ, ದಾವಣಗೆರೆ, ಹಾಸನ ಹಾಗೂ ಬಳ್ಳಾರಿ ಸೇರಿದಂತೆ ಕೇವಲ ಹತ್ತು ಜಿಲ್ಲೆಗಳಲ್ಲಿ ಮಾತ್ರ ಗಾಂಧಿ ಭವನಕ್ಕೆ ಖಾಲಿ ನಿವೇಶನ ದೊರತಿದೆಯಷೇr ಉಳಿದ ಜಿಲ್ಲೆಗಳಲ್ಲಿ ನಿವೇಶನ ಗುರುತಿಸುವಲ್ಲಿ ವಿಳಂಬವಾಗುತ್ತಿದೆ. ನಗರದಲ್ಲಿ ಗಾಂಧಿಭವನ ನಿರ್ಮಾಣ ಕಾರ್ಯವು ಕಳೆದ 3 ತಿಂಗಳಿಂದ ಆರಂಭಗೊಂಡಿದೆ. ನಿಗದಿತ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಕಟ್ಟಡ ನಿರ್ಮಾಣದ ಹೊಣೆ ಹೊತ್ತ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಎಂಜನಿಯರ್‌ಗಳು ತಿಳಿಸಿದ್ದಾರೆ.

ಅನುದಾನ ಪಾವತಿ: ಈಗಾಗಲೇ ಬಳ್ಳಾರಿಯ ಗಾಂಧಿಭವನ ನಿರ್ಮಾಣಕ್ಕೆ 2.80 ಕೋಟಿ ರೂ. ಕೆಆರ್‌ಐಡಿಎಲ್‌ನವರಿಗೆ ಪಾವತಿಸಲಾಗಿದೆ. 20 ಲಕ್ಷ ರೂ. ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದು, ಅವುಗಳನ್ನು ಗ್ರಂಥಾಲಯ ನಿರ್ಮಾಣ ಹಾಗೂ ಇನ್ನಿತರೆ ಉದೇಶಕ್ಕೆ ಗೌರವ ಸಲಹಾ ಸಮಿತಿಯ ಸಲಹೆಗಳನ್ನು ಪಡೆದುಕೊಂಡು ಬಳಸಲು ನಿರ್ಧರಿಸಲಾಗಿದೆ. 

ಏನೇನಿರಲಿದೆ ಭವನದಲಿ ನೇನಿರಲಿದೆ ಭವನದಲ್ಲಿ ?
ಗಾಂಧಿಭವನದ ಆವರಣದಲ್ಲಿ ಮಹಾತ್ಮಾಗಾಂಧೀಜಿ ಅವರ ಪುತ್ಥಳಿ ಸ್ಥಾಪಿಸಲಾಗುವುದು. ಸಭಾಂಗಣ, ಗಾಂಧೀಜಿ ಚಿಂತನೆಗಳು ಪ್ರಧಾನಾಂಶವಾಗಿರುವ ಚಿತ್ರ ಪ್ರದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ, ಗಾಂಧೀಜಿ ಮತ್ತು ಅವರ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಛಾಯಾಚಿತ್ರಗಳಿಗೆ ಪ್ರತ್ಯೇಕ ಕೊಠಡಿ, ಗಾಂಧೀಜಿ ಮತ್ತು ಸ್ವಾತಂತ್ರ್ಯ ಹೋರಾಟ ಹಾಗೂ ಅವರಿಗೆ ಸಂಬಂಧಿಸಿದ ಪುಸ್ತಕಗಳ ಸಂಗ್ರಹ ಮಾಡಿ ಮಿನಿ ಗ್ರಂಥಾಲಯ, ಯೋಗ ಸೇರಿದಂತೆ ಇನ್ನಿತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಐದು ಕೊಠಡಿಗಳನ್ನು
ನಿರ್ಮಿಸಲಾಗುತ್ತದೆ.

ಗೌರವ ಸಲಹಾ ಸಮಿತಿ ರಚನೆ ೌರವ ಸಲಹಾ ಸಮಿತಿ ರಚನೆ ಗಾಂಧಿ ಭವನದಲ್ಲಿ ನಿರಂತರವಾಗಿ ಗಾಂಧಿ ಮತ್ತು ಆಹಿಂಸಾ ಸಂಬಂಧಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಗೌರವ ಸಲಹಾ ಸಮಿತಿ ರಚಿಸಲಾಗುತ್ತದೆ. ಗಾಂಧಿವಾದ ಮತ್ತು ಚಟುವಟಿಕೆಗಳಲ್ಲಿ ನಂಬಿಕೆಯುಳ್ಳ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು, ಸಂಸ್ಥೆಗಳ ಪ್ರತಿನಿಗಳುಳ್ಳ ಏಳು ಜನರ ಸಮಿತಿ ರಚಿಸಿ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತದೆ. ಸದ್ಯ ಕೇಂದ್ರ ಕಚೇರಿಯ ಸಮಿತಿಯಿಂದ ಸಲಹೆ ಪಡೆಯಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಡಿಸಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತದೆ.

ಭರದಿಂದ ಸಾಗಿದೆ‌ ಕಾಮಗಾರಿ ಭರದಿಂದ ಸಾಗಿದೆ‌ ಕಾಮಗಾರಿ  ನಗರದ ಡಿಸಿ ಕಚೇರಿ ಆವರಣದಲ್ಲಿ ಗಾಂಧಿಭವನ ನಿರ್ಮಾಣ ಕಾಮಗಾರಿ ಚಾಲನೆ ಪಡೆದುಕೊಂಡಿದ್ದು, ಮೂರು ತಿಂಗಳಿಂದ ಭರದಿಂದ ಸಾಗಿದೆ. ನಿಗದಿತ ಅವ ಧಿ 2019 ಮೇ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಂಬಂಧಪಟ್ಟ ಇಂಜಿನಿಯರ್‌ಗಳು ತಿಳಿಸಿದ್ದಾರೆ. ನಂತರ ಗೌರವ ಸಲಹಾ ಸಮಿತಿ ರಚಿಸುವ ಮೂಲಕ ಗಾಂಧಿವಾದವನ್ನು ಪಸರಿಸುವ ನಿಟ್ಟಿನಲ್ಲಿ ಅಗತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.  ಬಿ.ಕೆ. ರಾಮಲಿಂಗಪ್ಪ, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next