Advertisement

ಬಾಪೂ ಓಡಾಡಿದ್ದ ಜಾಗ

10:25 AM Dec 08, 2019 | mahesh |

ಗಾಂಧಿ ಭವನ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪಿನಲ್ಲಿ ಸ್ಥಾಪನೆಯಾದ ಕಟ್ಟಡ. ಗಾಂಧಿ ತತ್ತ್ವವನ್ನು ಸಾರುವ ಸಲುವಾಗಿ “ಗಾಂಧಿ ಸ್ಮಾರಕ ನಿಧಿ’ ಹೆಸರಿನಲ್ಲಿ ಪ್ರಾರಂಭವಾದ (ಡಾ. ರಾಜೇಂದ್ರ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ) ಇದು, ಮುಂದೆ “ಗಾಂಧಿ ಭವನ’ವೆಂದು ಮರು ಮಕರಣಗೊಂಡಿತು.

Advertisement

ಹಿನ್ನೆಲೆ
ಗಾಂಧೀಜಿ ಮರಣಾನಂತರ, ಅವರ ನೆನಪಿನಲ್ಲಿ ದೇಶಾದ್ಯಂತ ಗಾಂಧಿ ಸ್ಮಾರಕ ಟ್ರಸ್ಟ್‌ ನಿರ್ಮಿಸುವ ಯೋಜನೆ ಹಾಕಲಾಯ್ತು. ದೇಶದ ಜನತೆಯಿಂದ ದೇಣಿಗೆ ಸಂಗ್ರಹಿಸಲಾಯ್ತು. ಹಾಗೆ ಸಂಗ್ರಹವಾದ ದೇಣಿಗೆ 10 ಕೋಟಿ 98 ಲಕ್ಷ 29 ಸಾವಿರದ 106. 95 ರೂ. ಕರ್ನಾಟಕ ಪ್ರಾಂತ್ಯದಲ್ಲಿ 23,40,540  ರೂ. ಸಂಗ್ರಹ­ವಾಗಿತ್ತು. ಹೀಗೆ, 1949ರ ಫೆಬ್ರವರಿಯಲ್ಲಿ ಟ್ರಸ್ಟ್‌ ನೋಂದಣಿಯಾಯ್ತು.

ಕುಮಾರ ಕೃಪಾದ ಪಕ್ಕದ ಜಾಗ
1927ರಲ್ಲಿ ಗಾಂಧೀಜಿಯವರು ಹಳೇ ಮೈಸೂರು ಪ್ರಾಂತ್ಯಕ್ಕೆ ಭೇಟಿ ನೀಡಿದ್ದಾಗ ತಂಗಿದ್ದ ಕುಮಾರ ಕೃಪ ಗೆಸ್ಟ್‌ ಹೌಸ್‌ನ ಪಕ್ಕದ ಜಾಗವನ್ನೇ ಕರ್ನಾಟಕ ಸರ್ಕಾರವು ಗಾಂಧಿ ಸ್ಮಾರಕ ಭವನಕ್ಕೆ ಬಿಟ್ಟು ಕೊಟ್ಟಿತು.

ವೈಶಿಷ್ಟ್ಯ
ವಸ್ತು ಸಂಗ್ರಹಾಲಯ­ದಲ್ಲಿ ಗಾಂಧೀಜಿಯವರ ಸಂಪೂರ್ಣ ಜೀವನ­ವನ್ನು ಅನಾವರಣಗೊಳಿಸುವ ಅಪರೂಪದ ಭಾವಚಿತ್ರ­ಗಳು, ಕೈ ಬರಹದ ಪತ್ರಗಳು, ಗಾಂಧೀಜಿಯವರ ಆದರ್ಶಗಳನ್ನು ಬರೆದಿರುವ ಫ‌ಲಕಗಳು ಇವೆ.

ಉದ್ಘಾಟನೆ :(ಮರುನಾಮಕರಣ) ಡಿಸೆಂಬರ್‌ 8, 1965
ಉದ್ಘಾಟಿಸಿದ್ದು: ಅಂದಿನ ರಾಷ್ಟ್ರಪತಿ ಡಾ. ಎಸ್‌. ರಾಧಾಕೃಷ್ಣನ್‌

Advertisement

ಖರ್ಚು: ಕಟ್ಟಡ ನಿರ್ಮಾಣಕ್ಕೆ 3.80 ಲಕ್ಷ ರೂ. (ಚಿತ್ರ ಗ್ಯಾಲರಿಯೂ ಸೇರಿ)
ಎಲ್ಲಿದೆ?: ಕುಮಾರಕೃಪ ಪೂರ್ವ, ಶಿವಾನಂದ ಸರ್ಕಲ್‌ ಸಮೀಪ

ಸಾಮರ್ಥ್ಯ: 250 ಸಭಾಂಗಣದ ಆಸನ
ಏನೇನಿದೆ?: ವಸ್ತು ಸಂಗ್ರಹಾಲಯ, ಗ್ರಂಥಾಲಯ ಮತ್ತು ಸಭಾಂಗಣ ಇದೆ.

Advertisement

Udayavani is now on Telegram. Click here to join our channel and stay updated with the latest news.

Next