Advertisement

ತವಗ ಗ್ರಾಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ

03:16 PM Sep 27, 2022 | Team Udayavani |

ಗೋಕಾಕ: ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ತವಗ ಗ್ರಾಮ ಪಂಚಾಯಿತಿ ಭಾಜನವಾಗಿದೆ.

Advertisement

ಸಂಪೂರ್ಣ ಸ್ವಚ್ಛತೆ, ಹೆಚ್ಚು ಶೌಚಾಲಯ ನಿರ್ಮಿಸಿದ್ದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ 5 ಲಕ್ಷ ನಗದು, ಅಭಿನಂದನಾ ಪತ್ರವನ್ನೊಳಗೊಂಡಿದೆ. ಕನಸಗೇರಿ, ಕೈತನಾಳ, ಕೈ- ಹೊಸೂರ ಗ್ರಾಮಗಳನ್ನು ಒಳಗೊಂಡ ತವಗ ಗ್ರಾಮ ಪಂಚಾಯಿತಿ ಒಟ್ಟು 23 ಸದಸ್ಯರನ್ನು ಹೊಂದಿದೆ.

ಒಟ್ಟು 11,500 ಕ್ಕಿಂತ ಹೆಚ್ಚಿನ ಜನಸಂಖ್ಯೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ತವಗ ಗ್ರಾಮದಿಂದ 9, ಕನಸಗೇರಿ ಗ್ರಾಮದಿಂದ 8, ಕೈತನಾಳ ಗ್ರಾಮದಿಂದ 4 ಹಾಗೂ ಕೈ-ಹೊಸೂರ ಗ್ರಾಮದಿಂದ 2 ಹೀಗೆ ಒಟ್ಟು 23 ಸದಸ್ಯ ಬಲದ ಪಂಚಾಯಿತಿಯಲ್ಲಿ ಎಲ್ಲರೂ ಕೂಡಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಗ್ರಾಮ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಿ ಗ್ರಾಮದ ಜನರ ಸಮಸ್ಯೆಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಲ್ಪಿಸಿಕೊಡುವ ಕಾರ್ಯವನ್ನು ಪಂಚಾಯಿತಿ ಅಧ್ಯಕ್ಷ ಕೃಷ್ಣಾ ಶಿಂಧಗಾರ, ಕಾರ್ಯದರ್ಶಿ ಸೇರಿದಂತೆ ಎಲ್ಲ ಸದಸ್ಯರು ಮಾಡುತ್ತಿದ್ದಾರೆ. ಪಂಚಾಯಿತಿ ಸಿಬ್ಬಂದಿ ದಾಖಲಾತಿಗಳನ್ನು ವ್ಯವಸ್ಥಿತವಾಗಿಟ್ಟು ಉನ್ನತ ಅಧಿಕಾರಿಗಳಿಂದ ಸೈ ಎನಿಸಿದ್ದಾರೆ.

ಗ್ರಾಮದಲ್ಲಿ ಹಲವಾರು ಕಾಮಗಾರಿ ಕೈಗೊಳ್ಳಲು ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಬಹುಮುಖ್ಯವಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ನಿರಂತರ ಮಾರ್ಗದರ್ಶನ ಮಾಡಿ ಬೆನ್ನು ತಟ್ಟಿದ್ದಾರೆ. ಇದರ ಫಲವಾಗಿ ಇಂದು ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದ್ದು, ಇನ್ನಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಉತ್ಸಾಹ ದೊರೆತಿದೆ’ ಎಂದು ಪಿಡಿಒ ಸುನೀಲ ನಾಯಿಕ ಹೇಳಿದರು.

Advertisement

ತವಗ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತ ಬಗ್ಗೆ ಶಾಸಕ ರಮೇಶ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮತಕ್ಷೇತ್ರದ ಪ್ರತಿ ಗ್ರಾಪಂಗಳು ಸರಕಾರದಿಂದ ಬರುವ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next