Advertisement
ಭಾರತ ಮಾತ್ರವಲ್ಲದೆ ಅಮೆರಿಕದ ಸ್ಯಾನ್ ಡಿಯಾಗೋ, ಮೆಕ್ಸಿಕೊ, ಚಿಲಿ ಸಹಿತ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡ ಈ ಚಿತ್ರ ತಂತ್ರಜ್ಞರಿಂದ ಪ್ರಶಂಸೆ ಗಳಿಸಿ ಜಗತ್ತಿನ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದರು.
ಮುಂಬಯಿಯ ನಿಧಿ ಸಂಜೀವ ಶೆಟ್ಟಿ ಭಾರತೀಯ ಮೂಲದ ಅಮೆರಿಕದ ಕೀಷಾ, ಆಶ್ಲಿನ್, ಪ್ರಣತಿ, ವಿN°àಶ್, ಶ್ರೀಶಾ, ಶ್ರೇಯಸ್ ಅಭಿನಯಿಸಿದ್ದಾರೆ. ಹಿರಿಯ ನಟ ರಮೇಶ್ ಭಟ್, ಶಿವಧ್ವಜ್ ಜ್ಯೋತಿ ರೈ, ಅರವಿಂದ ಶೆಟ್ಟಿ ಕೊಜಕೊಳ್ಳಿ, ದೀಪಕ್ ಶೆಟ್ಟಿ, ಯೋಗೀಶ್ ಕೋಟ್ಯಾನ್, ಜಿ.ಪಿ. ಭಟ್ ಬಣ್ಣಹಚ್ಚಿದ್ದಾರೆ. ಸಚಿನ್ ಶೆಟ್ಟಿ ಮತ್ತು ಲಕ್ಷ್ಮೀಶ್ ಶೆಟ್ಟಿ (ಸ್ಟಡಿ ಕ್ಯಾಮ್) ಛಾಯಾಚಿತ್ರಗ್ರಹಣ ರವಿರಾಜ್ ಗಾಣಿಗ ಸಂಕಲನ, ಪ್ರದೀಪ್ ರಾಯ್ ಕಲಾ ನಿರ್ದೇಶನ, ಪ್ರೀತಾ ಮಿನೇಜಸ್ ಸಹ ನಿರ್ದೇಶನ ಚಿತ್ರವನ್ನು ತಾಂತ್ರಿಕವಾಗಿ ಇಮ್ಮಡಿಗೊಳಿಸಿದೆ ಎಂದರು.
Related Articles
Advertisement
ಮಲೆನಾಡಿನ ರಮಣೀಯ ತಾಣಗಳುಪಶ್ಚಿಮ ಘಟ್ಟಗಳ ನಾಶದಿಂದ ಉಂಟಾ ಗುವ ಜಾಗತಿಕ ದುಷ್ಪರಿಣಾಮವನ್ನು ಎಳೆಎಳೆ ಯಾಗಿ ಬಿಚ್ಚಿಡುವ ಕಲಾತ್ಮಕ ಕಥಾವಸ್ತುವಿಗೆ ಕಮರ್ಷಿಯಲ್ ಟಚ್ ನೀಡಲಾಗಿದೆ. ಮಲೆನಾಡಿನ ರಮಣೀಯ ತಾಣಗಳು ಮನೋಜ್ಞವಾಗಿ ಮೂಡಿಬಂದಿವೆ. “ನಾಡೆಂ ದರೆ ಕನ್ನಡ ನಾಡು’ ಹಾಡು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಿಟ್ ಆಗಿದೆ ಎಂದು ಸತ್ಯೇಂದ್ರ ಪೈ ತಿಳಿಸಿದರು.