Advertisement

ಸ್ಯಾಂಡಲ್‌ವುಡ್‌ನ‌ಲ್ಲಿ ಗಂಧದ ಗುಡಿ ಟ್ರೇಲರ್‌ನದ್ದೇ ಸೌಂಡ್‌!

02:23 PM Oct 11, 2022 | Team Udayavani |

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿರುವ “ಗಂಧದ ಗುಡಿ’ ಡಾಕ್ಯುಮೆಂಟರಿ ಸಿನಿಮಾದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದೇ ಅಕ್ಟೋಬರ್‌ 28ಕ್ಕೆ “ಗಂಧದ ಗುಡಿ’ ಡಾಕ್ಯುಮೆಂಟರಿ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು, ತಮ್ಮ ನೆಚ್ಚಿನ ನಟನನ್ನು ಮತ್ತೂಮ್ಮೆ ಬಿಗ್‌ ಸ್ಕ್ರೀನ್‌ ಮೇಲೆ ಕಣ್ತುಂಬಿಕೊಳ್ಳಲು ಪುನೀತ್‌ ರಾಜಕುಮಾರ್‌ ಫ್ಯಾನ್ಸ್‌ ತುದಿಗಾಲಿನಲ್ಲಿ ನಿಂತಿದ್ದಾರೆ.

Advertisement

ಇನ್ನು ಎರಡು ದಿನಗಳ ಹಿಂದಷ್ಟೇ (ಅ. 9ರಂದು) “ಗಂಧದ ಗುಡಿ’ ಟ್ರೇಲರ್‌ ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಟ್ರೇಲರ್‌ ಎಲ್ಲರ ಗಮನ ಸೆಳೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ಸಚಿವರು ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಮೆಚ್ಚಿಕೊಂಡಿರುವ “ಗಂಧದ ಗುಡಿ’ ಟ್ರೇಲರ್‌ ಇದೀಗ ಸೋಶಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿದ್ದು, ಯು-ಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಬಿಡುಗಡೆಯಾದ ಒಂದೇ ದಿನದಲ್ಲಿ ಬರೋಬ್ಬರಿ ಒಂದು ಕೋಟಿಗೂ ಅಧಿಕ ಮಂದಿ “ಗಂಧದ ಗುಡಿ’ ಟ್ರೇಲರ್‌ ವೀಕ್ಷಿಸಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟ-ನಟಿಯರು, ಕಲಾವಿದರು,ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ “ಗಂಧದ ಗುಡಿ’ಯ ಟ್ರೇಲರ್‌ನ ಲಿಂಕ್‌ ಶೇರ್‌ಮಾಡಿದ್ದಾರೆ.

ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತುಮಲೆಯಾಳಂ ಚಿತ್ರರಂಗದ ಅನೇಕ ತಾರೆಯರು, ಗಣ್ಯರು ಕೂಡ “ಗಂಧದ ಗುಡಿ’ ಟ್ರೇಲರ್‌ಗೆ ಬಹುಪರಾಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next